Monday , February 18 2019
ಕೇಳ್ರಪ್ಪೋ ಕೇಳಿ
Home / Film News / `ಪ್ಲೀಸ್… ಹಾಗೆಲ್ಲಾ ಹೇಳ್ಬೇಡಿ…’

`ಪ್ಲೀಸ್… ಹಾಗೆಲ್ಲಾ ಹೇಳ್ಬೇಡಿ…’

ಹೈದರಾಬಾದ್ : ಸ್ವೀಟಿ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಇಬ್ಬರು ಪ್ರೇಮ ಪತಂಗಗಳು ಎಂಬ ಸುದ್ದಿ ಬಹಳ ದಿನಗಳಿಂದ ಇದೆ. ಇಬ್ಬರೂ ಶೀಘ್ರದಲ್ಲೇ ಮದುವೆ ಕೂಡಾ ಆಗುತ್ತಾರೆ ಎಂಬ ಮಟ್ಟಿಗೂ ಸುದ್ದಿ ಹಬ್ಬಿದ್ದೂ ಇದೆ… ಬಹಳ ವರ್ಷದಿಂದ ಫಿಲಂ ಇಂಟಸ್ಟ್ರಿಯಲ್ಲಿ ಇಂತಹದ್ದೊಂದು ರೂಮರ್ಸ್‍ಗಳಿವೆ. `ನಾವಿಬ್ಬರೂ ಪ್ರೀತಿಸುತ್ತಿಲ್ಲ’ ಎಂದು ಇಬ್ಬರೂ ಹೇಳಿದ್ದರೂ ಇನ್ನೂ ಈ `ಪ್ರೀತಿ’ಯ ಸುದ್ದಿಗೆ ತೆರೆ ಬಿದ್ದಿಲ್ಲ…! ಪ್ರಭಾಸ್ ಮತ್ತು ಅನುಷ್ಕಾ ಬಿಲ್ಲಾ ಚಿತ್ರದಲ್ಲಿ ಒಟ್ಟಾಗಿ ನಟಿಸಿದ ಬಳಿಕ ಈ ಸುದ್ದಿ ಹಬ್ಬಿತ್ತು. ಬಳಿಕ ಮಿರ್ಚಿ.. ಬಾಹುಬಲಿ ಸೇರಿದಂತೆ ಕೆಲ ಚಿತ್ರಗಳ ಸಂದರ್ಭದಲ್ಲೂ ಈ ಬಗ್ಗೆ ಇನ್ನಷ್ಟು ಚರ್ಚೆಗಳು ಶುರುವಾಗಿತ್ತು. ಆದರೂ ಈ ಸುದ್ದಿಗಳಿಗೆ ತೆರೆ ಎಳೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸ್ವತಃ ಅನುಷ್ಕಾ ತಾಯಿಯೇ ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ… `ದಯವಿಟ್ಟು ಅನುಷ್ಕಾ ಮತ್ತು ಪ್ರಭಾಸ್ ಮದುವೆಗೆ ಬಗ್ಗೆ ವದಂತಿ ಸೃಷ್ಟಿಸಬೇಡಿ. ಪ್ರಭಾಸ್ ತರ ಅಳಿಯ ಬೇಕು ಎಂದು ಎಲ್ಲಾ ತಾಯಿಯೂ ಬಯಸುತ್ತಾಳೆ. ಆದರೆ, ಇವರಿಬ್ಬರ ವಿಷಯದಲ್ಲಿ ಹಾಗಿಲ್ಲ. ಇವರಿಬ್ಬರೂ ಒಳ್ಳೆಯ ಸ್ನೇಹಿತರು. ಅದು ಬಿಟ್ಟು ಇವರಿಬ್ಬರ ನಡುವೆ ಏನೂ ಇಲ್ಲ’ ಎಂದು ಅನುಷ್ಕಾ ತಾಯಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಆನ್‍ಸ್ಕ್ರೀನ್ ಕೆಮೆಸ್ಟ್ರಿಗೂ ನಿಜ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ. ಹೀಗಾಗಿ, ಇಂತಹ ಸುದ್ದಿಗಳನ್ನು ಹರಡಬೇಡಿ ಎಂದೂ ಅವರು ಮನವಿ ಮಾಡಿಕೊಂಡಿದ್ದಾರೆ… ಸದ್ಯಕ್ಕಂತೂ ಅನುಷ್ಕಾ ತಾಯಿ ಈ ಇಡೀ ಪ್ರೀತಿಯ `ಕತೆ’ಗೆ ತೆರೆ ಎಳೆದಿದ್ದಾರೆ. ನೋಡುವ ಇನ್ನಾದರೂ ವದಂತಿಗೆ ತೆರೆ ಬೀಳುತ್ತಾ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!