Wednesday , August 15 2018
ಕೇಳ್ರಪ್ಪೋ ಕೇಳಿ
Home / Sudina Special / ಮಾಲಕನಿಗೆ ಆಸರೆಯಾದ ಶ್ವಾನ… : ಹೃದಯವೇ ಭಾರವಾಗಿಸುತ್ತದೆ ಮಮತೆಯ ಈ ವೀಡಿಯೋ…

ಮಾಲಕನಿಗೆ ಆಸರೆಯಾದ ಶ್ವಾನ… : ಹೃದಯವೇ ಭಾರವಾಗಿಸುತ್ತದೆ ಮಮತೆಯ ಈ ವೀಡಿಯೋ…

ಪಿಲಿಫೇನ್ಸ್ : ಶ್ವಾನ ನಿಯತ್ತಿಗೆ ಮತ್ತೊಂದು ಹೆಸರು… ಅನ್ನ ಇಟ್ಟ ಮನೆಗೆ ಯಾವತ್ತೂ ದ್ರೋಹ ಬಗೆಯುವ ಪ್ರಾಣಿ ನಾಯಿಯಲ್ಲ… ಇದೂ ಕೂಡಾ ಅಂತಹದ್ದೇ ಶ್ವಾನದ ನಿಯತ್ತಿನ ಕತೆ. ಮಾಲಕನಿಗೆ ಆಸರೆಯಾದ ಹೃದಯ ಸ್ಪರ್ಶಿ ಸನ್ನಿವೇಶ… ಇದು ಸೆರೆ ಆಗಿರುವುದು ಪಿಲಿಫೇನ್ಸ್‍ನಲ್ಲಿ.. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಮಾಡುತ್ತಿದೆ…

46 ವರ್ಷದ ಡೇನಿಲೋ ಅಲರ್ಕನ್ ಈ ಶ್ವಾನವನ್ನು ಸಾಕಿದ ಅದೃಷ್ಟವಂತ. ವರ್ಷದ ಹಿಂದೆ ಡೇನಿಲೋ ಅಪಘಾತದಲ್ಲಿ ಕಾಲು ಕಳೆದುಕೊಂಡರು. ಜೊತೆಗೆ, ಪಾಶ್ರ್ವವಾಯು ಕೂಡಾ ಭಾದಿಸಲು ಆರಂಭಿಸಿತ್ತು. ಇದಾದ ಬಳಿಕ ಇವರಿಗೆ ಅತ್ತಿಂದ ಸಂಚರಿಸಲು ವೀಲ್‍ಚೇರೇ ಆಸರೆಯಾಗಿತ್ತು. ಈ ವೇಳೆ, ಮಾಲಿಕನ ನೆರವಿಗೆ ನಿಂತಿದ್ದೇ ಅವರು ಪ್ರೀತಿಯಿಂದ ಸಾಕಿದ್ದ ಶ್ವಾನ. ಇವರು ಎಲ್ಲಿಗೆ ಹೋಗುವುದಿದ್ದರೂ ಈ ಶ್ವಾನವೇ ವೀಲ್‍ಚೇರ್ ಅನ್ನು ದೂಡಿಕೊಂಡು ಹೋಗುತ್ತದೆ. ಯಾವತ್ತೂ ದನಿವೆಂದು ನಿಂತಿಲ್ಲ… ಮಾಲಿಕನ ಭಾವನೆಗೆ ಸ್ಪಂದಿಸದೆ ಕುಳಿತಿಲ್ಲ…

ಈ ಹೃದಯ ಸ್ಪರ್ಶಿ ವೀಡಿಯೋವನ್ನು ಎಂಬಿಎ ವಿದ್ಯಾರ್ಥಿಯೊಬ್ಬರು ಶೂಟ್ ಮಾಡಿದ್ದು ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದಾರೆ. ಈ ವೀಡಿಯೋ ಈಗ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

About sudina

Check Also

ಕಂದನ ಅಳು ಕೇಳಿ ಎದ್ದಳು ಆರು ತಿಂಗಳಿನಿಂದ ಕೋಮಾದಲ್ಲಿದ್ದ ತಾಯಿ…!

ಕೊಟ್ಟಾಯಂ : ತಾಯಿ ಅಂದರೇನೇ ಹಾಗೆ… ಮಮತಾಮೂರ್ತಿ… ನಿಸ್ವಾರ್ಥತೆಯ ದೇವತಾ ರೂಪ… ಅದಕ್ಕೇ ತಾಯಿಗೆ ಭೂಮಿ ಮೇಲಿರುವ ಪ್ರತ್ಯಕ್ಷ ದೇವರ …

Leave a Reply

Your email address will not be published. Required fields are marked *

error: Content is protected !!