Sunday , December 16 2018
ಕೇಳ್ರಪ್ಪೋ ಕೇಳಿ
Home / Film News / ಶಾರೂಖ್, ಅಮೀರ್, ಸಲ್ಮಾನ್ ಮೊದಲ ಚಿತ್ರಗಳು ಗಳಿಸಿದ್ದು ಎಷ್ಟು ಗೊತ್ತಾ…?

ಶಾರೂಖ್, ಅಮೀರ್, ಸಲ್ಮಾನ್ ಮೊದಲ ಚಿತ್ರಗಳು ಗಳಿಸಿದ್ದು ಎಷ್ಟು ಗೊತ್ತಾ…?

ಮುಂಬೈ : ಬಾಲಿವುಡ್‍ನಲ್ಲಿ ಈಗ ಹೊಸ ನಟರಿಗಿಂತ ಹಳೇ ಸ್ಟಾರ್‍ಗಳ ದರ್ಬಾರ್ ಜೋರಾಗಿದೆ. ಶಾರೂಖ್, ಸಲ್ಮಾನ್, ಅಮೀರ್ ಎಂಬ ಖಾನ್‍ತ್ರಯರು, ಅಕ್ಷಯ್, ಅಜಯ್ ದೇವಗನ್ ಹೀಗೆ ಹಳೇ ಸ್ಟಾರ್‍ಗಳೇ ಈಗಲೂ ಬಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ನೂರು ಕೋಟಿ ಲೆಕ್ಕದಲ್ಲೇ ಇವರ ಚಿತ್ರ ಈಗ ಗಳಿಕೆ ಮಾಡುತ್ತಿದೆ… ಆದರೂ ಈ ಸ್ಟಾರ್‍ಗಳನ್ನು ರೂಪುಗೊಳಿಸಿದ ಮೊದಲ ಚಿತ್ರದ ಬಗ್ಗೆ ಎಲ್ಲರಿಗೂ ಒಂದು ಕುತೂಹಲ ಇರುತ್ತದೆ… ಈ ಸ್ಟಾರ್‍ಗಳ ಮೊದಲ ಚಿತ್ರದ ಬಗ್ಗೆ ಜನ ಈಗಲೂ ಮಾತನಾಡುತ್ತಾರೆ. ಆದರೆ, ಅಂದಿನ ದಿನಮಾನದಲ್ಲಿ ಈ ಚಿತ್ರಗಳು ಗಳಿಸಿದ್ದೆಷ್ಟು…? ಇಲ್ಲಿದೆ ಲೆಕ್ಕ…ಶಾರೂಖ್ ಖಾನ್ : ಬಾಲಿವುಡ್ ಬಾದ್‍ಶಾ ಎಂಬ ಸ್ಟಾರ್ ರೂಪುಗೊಂಡದ್ದು `ದಿವಾನಾ’ ಚಿತ್ರದ ಮೂಲಕ. ರಿಶಿ ಕಪೂರ್ ಮತ್ತು ದಿವ್ಯಾ ಭಾರತಿ ಈ ಚಿತ್ರ ನಾಯಕ ನಾಯಕಿಯರಾದರೂ ಶಾರೂಖ್ ಅಭಿನಯವೂ ಇಲ್ಲಿ ಗಮನ ಸೆಳೆದಿತ್ತು. ಶಾರೂಖ್‍ಗೆ ಇಲ್ಲಿ ಸೆಕೆಂಡ್ ಹೀರೋ ರೋಲ್. ಈ ಚಿತ್ರದ ಮೂಲಕವೇ ಶಾರೂಖ್ ಸಿನಿಲೋಕ ಪ್ರವೇಶಿಸಿದ್ದರು. ಈ ಚಿತ್ರ ಅಂದು 7.70 ಕೋಟಿ ರೂಪಾಯಿ ಗಳಿಸಿತ್ತು..ಸಲ್ಮಾನ್ ಖಾನ್ : ಮೈನೇ ಪ್ಯಾರ್ ಕಿಯಾ ಚಿತ್ರದ ಮೂಲಕ ಬಿಟೌನ್‍ಗೆ ಎಂಟ್ರಿ ಕೊಟ್ಟವರು ಸಲ್ಮಾನ್ ಖಾನ್. ಭಾಗ್ಯಶ್ರೀ ಈ ಚಿತ್ರದ ನಾಯಕಿ. ಇದಕ್ಕಿಂತ ಮೊದಲು ಸಲ್ಲೂ `ಬಿವಿ ತೋ ಹೋ ಐಸಿ’ ಎಂಬ ಚಿತ್ರದಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ದರು. ಆದರೆ, ಮೈ ನೇ ಪ್ಯಾರ್ ಕಿಯಾ ನಾಯಕನಾಗಿ ಸಲ್ಮಾನ್‍ಗೆ ಹೆಸರು ತಂದುಕೊಟ್ಟಿತ್ತು. ಈ ಚಿತ್ರ ಆಗ 15 ಕೋಟಿ ರೂಪಾಯಿ ಸಂಪಾದಿಸಿತ್ತು.ಅಮೀರ್ ಖಾನ್ : ಜೂಹಿ ಚಾವ್ಲಾ ಜೊತೆ `ಖಯಾಮತ್ ಸೇ ಖಯಾಮತ್ ತಕ್’ ಚಿತ್ರದ ಮೂಲಕ ಅಮೀರ್ ಸಿನಿಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಇದು ಜೂಹಿಗೂ ಮೊದಲ ಚಿತ್ರ. 1988ರಲ್ಲಿ ರಿಲೀಸ್ ಆದ ಈ ಚಿತ್ರ 4.70 ಕೋಟಿ ರೂಪಾಯಿ ಗಳಿಸಿತ್ತು.ಅಕ್ಷಯ್ ಕುಮಾರ್ : ಕರಾಟೆ ಕಿಂಗ್ ಅಕ್ಷಯ್ ಕುಮಾರ್ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದು `ಸೌಗಂಧ್’ ಚಿತ್ರದ ಮೂಲಕ. ಅನಿರೀಕ್ಷಿತವಾಗಿ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದ ಅಕ್ಷಯ್ ಬದುಕೇ ಬಳಿಕ ಬದಲಾಯಿತು. ಈ ಚಿತ್ರದ 1.40 ಕೋಟಿ ರೂಪಾಯಿ ಬಾಚಿಕೊಂಡಿತ್ತು.ಅಜಯ್ ದೇವಗನ್ : ಬಾಲಿವುಡ್‍ನ ಆ್ಯಕ್ಷನ್ ಹೀರೋ ಅಜಯ್ ದೇವಗನ್ ಮೊದಲ ಚಿತ್ರವೂ ಬಾಕ್ಸ್ ಆಫೀಸ್‍ನಲ್ಲಿ ಸೌಂಡ್ ಮಾಡಿತ್ತು. `ಫೂಲ್ ಔರ್ ಕಾಂಟೆ’ ಚಿತ್ರದ ಮೂಲಕ ಅಜಯ್ ಮಿಂಚಿದ್ದರು. ಮಧು ಈ ಚಿತ್ರದ ನಾಯಕಿ. ಈ ಚಿತ್ರ 6.60 ಕೋಟಿ ರೂಪಾಯಿ ಸಂಪಾದಿಸಿ ಆಗ ಸುದ್ದಿ ಮಾಡಿತ್ತು.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!