Saturday , October 20 2018
ಕೇಳ್ರಪ್ಪೋ ಕೇಳಿ
Home / News NOW / ಪನ್ವೇಲ್ : 22 ದಿನಗಳ ಕಂದನ ದೇಹದೊಳಗಿತ್ತು ಇಂಜೆಕ್ಷನ್ ಸೂಜಿ…!

ಪನ್ವೇಲ್ : 22 ದಿನಗಳ ಕಂದನ ದೇಹದೊಳಗಿತ್ತು ಇಂಜೆಕ್ಷನ್ ಸೂಜಿ…!

ಮುಂಬೈ : ಇಲ್ಲಿನ ವಾಡಿಯಾ ಮಕ್ಕಳ ಆಸ್ಪತ್ರೆ ವೈದ್ಯರು ಅತ್ಯಂತ ಸೂಕ್ಷ್ಮ ಸರ್ಜರಿಯೊಂದನ್ನು ಮಾಡಿದ್ದಾರೆ. 22 ದಿನಗಳ ಕಂದನ ತೊಡೆ ಹೊಕ್ಕಿದ್ದ 2 ಇಂಚಿನ ಇಂಜೆಕ್ಷನ್ ಸೂಜಿಯನ್ನು ಹೊರತೆಗೆದು ಡಾಕ್ಟರ್ಸ್ ಸಾಧನೆ ಮಾಡಿದ್ದಾರೆ.

ಪನ್ವೇಲ್‍ನ ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಮಗುವಿನ ತೊಡೆಯೊಳಗೆ ಬೆಂಡ್ ಆಗಿ ಇಂಜೆಕ್ಷನ್ ಸಿರಿಂಜ್ ತುಂಡಾಗಿತ್ತು. ಈ ಸೂಜಿ ದೇಹದೊಳಗೇ ಇತ್ತಂತೆ… ಇದು ಹೆತ್ತವರಿಗೂ ಗೊತ್ತಿರಲಿಲ್ಲ… ತಕ್ಷಣ ಹೆತ್ತವರು ಮಗುವನ್ನು ಪನ್ವೇಲ್‍ನ ಬೈ ಜೆರ್ಬಾಯಿ ವಾಡಿಯಾ ಆಸ್ಪತ್ರೆಗೆ ಕರೆತಂದಿದ್ದರು. ಇದಾದ ಬಳಿಕ ಅತ್ಯಂತ ಸೂಕ್ಷ್ಮ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು ಕಂದನ ತೊಡೆಯಲ್ಲಿದ್ದ 2 ಇಂಚಿನ ನೀಡಲ್ ಅನ್ನು ಹೊರತೆಗೆದು ಹೆತ್ತವರ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ.

ಎಕ್ಸ್ ರೇ, ಸಿಟಿ ಸ್ಕ್ಯಾನ್‍ನಿಂದ ಗೊತ್ತಾಗಿತ್ತು..! : ಜೂನ್ 29ಕ್ಕೆ ಈ ಕಂದನನ್ನು ಹೆತ್ತವರು ಆಸ್ಪತ್ರೆಗೆ ಕರೆತಂದಿದ್ದರು. ಆಗ ತೀವ್ರ ಜ್ವರದಿಂದ ಕಂದ ಬಳಲುತ್ತಿತ್ತು. ಹೆತ್ತವರು ಭಯಗೊಂಡಿದ್ದರು. ಸೂಜಿ ವಿಷಯ ಅವರಿಗೂ ಗೊತ್ತಿರಲಿಲ್ಲ. ಇಲ್ಲಿನ ವೈದ್ಯರು ಪರೀಕ್ಷಿಸಿದಾಗ ಮೂಳೆಯಲ್ಲಿ ಇನ್‍ಫೆಕ್ಷನ್ ಆಗಿದ್ದು ಗೊತ್ತಾಗಿತ್ತು. ತಕ್ಷಣ ಎಕ್ಸ್‍ರೇ, ಸಿಟಿ ಸ್ಕ್ಯಾನ್ ಮಾಡಲಾಯಿತು. ಆಗ ಮಗುವಿನ ಎಡಭಾಗದಲ್ಲಿ ಸೂಜಿ ಕಾಣಿಸಿಕೊಂಡಿತ್ತು. ಇದಕ್ಕೂ ಮೊದಲು ಬೇರೆ ಆಸ್ಪತ್ರೆಯಲ್ಲಿ ಕಂದನಿಗೆ ಔಷಧೋಪಚಾರ ಮಾಡಿದ್ದ ಸಂದರ್ಭದಲ್ಲಿ ಆಕಸ್ಮಾತ್ ಆಗಿ ನೀಡಲ್ ದೇಹದೊಳಗೇ ಉಳಿದುಕೊಂಡಿತ್ತು… ಇದನ್ನು ಯಾರೂ ಗಮನಿಸಲಿರಲಿಲ್ಲ… ಹೀಗಾಗಿ, ಕಂದ ನೋವಿನಲ್ಲಿ ಬಳಲಿತ್ತು…! ಸುಮಾರು 19 ದಿನಗಳ ಕಾಲ ಕಂದನ ದೇಹದೊಳಗೇ ಈ ಸೂಜಿ ಸಿಕ್ಕಾಕ್ಕಿಕೊಂಡಿತ್ತು…! ಎರಡು ಗಂಟೆಗಳ ಕಾಲ ಸೂಕ್ಷ್ಮ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ತಂಡ ಈ ಸೂಜಿಯನ್ನು ಹೊರತೆಗೆದಿದೆ. ಸದ್ಯ ಶಸ್ತ್ರಚಿಕಿತ್ಸೆಯಿಂದ ಕಂದ ಅಪಾಯದಿಂದ ಪಾರಾಗಿದೆ… ವೈದ್ಯರೂ ಖುಷಿಗೊಂಡಿದ್ದಾರೆ. ಹೆತ್ತವರ ಮೊಗದಲ್ಲೂ ಸಂತಸ ಮನೆ ಮಾಡಿದೆ…

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!