Sunday , December 16 2018
ಕೇಳ್ರಪ್ಪೋ ಕೇಳಿ
Home / Sudina Special / ಯುವತಿಗೆ ಕಾಮುಕನ ಕಾಟ… : ಸ್ಥಳದಲ್ಲೇ ಕಾಮಿಗೆ ಪಾಠ ಕಲಿಸಿದ ಗಟ್ಟಿಗಿತ್ತಿ… : ಇಲ್ಲಿದೆ ವೀಡಿಯೋ

ಯುವತಿಗೆ ಕಾಮುಕನ ಕಾಟ… : ಸ್ಥಳದಲ್ಲೇ ಕಾಮಿಗೆ ಪಾಠ ಕಲಿಸಿದ ಗಟ್ಟಿಗಿತ್ತಿ… : ಇಲ್ಲಿದೆ ವೀಡಿಯೋ

ಕಾಮುಕನೊಬ್ಬನಿಗೆ ಯುವತಿಯೊಬ್ಬಳು ಸಖತ್ ಪಾಠ ಕಲಿಸಿದ್ದಾಳೆ. ತನ್ನ ಅಂಗಾಂಗಗಳನ್ನು ಮುಟ್ಟಿ ಸಾಗಿದ ಪಾಪಿಗೆ ಚೆನ್ನಾಗಿಯೇ ಗೂಸಾ ಕೊಟ್ಟಿದ್ದಾಳೆ. ಈ ವೀಡಿಯೋ ಈಗ ಇಂಟರ್‍ನೆಟ್‍ನಲ್ಲಿ ಸಖತ್ ಸೌಂಡ್ ಮಾಡ್ತಿದೆ… ಈಕೆ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಇನ್ನೂ ವಯಸ್ಸು 21. ಯುಎಸ್‍ಎನ ಜಾರ್ಜಿಯಾದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಉದ್ದೇಶಪೂರ್ವಕವಾಗಿಯೇ ಯುವಕನೊಬ್ಬ ಈಕೆಯ ಮೈ ಮುಟ್ಟಿದ್ದ… ಅಷ್ಟೇ… ಸಡನ್ ಸಿಡಿದೆದ್ದ ಯುವತಿ ಆ ಕಾಮಕ್ರಿಮಿಗೆ ಪಾಠ ಕಲಿಸಿದ್ದಾಳೆ. ಇದನ್ನು ನೋಡಿ ಅಲ್ಲಿದ್ದವರೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದರು. ಜೊತೆಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದರು. ಈ ವೀಡಿಯೋ ಫೂಟೇಜ್ ನೋಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಈತನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!