Monday , October 22 2018
ಕೇಳ್ರಪ್ಪೋ ಕೇಳಿ
Home / Interval / ಅಮಿತಾಭ್‍ರಿಂದಾಗಿ ಉಳಿಯಿತು ಯುವತಿಯ ಪ್ರಾಣ…!

ಅಮಿತಾಭ್‍ರಿಂದಾಗಿ ಉಳಿಯಿತು ಯುವತಿಯ ಪ್ರಾಣ…!

1989ರ ಸಮಯ. ನಟರಾಜ್ ಸ್ಟುಡಿಯೋದಲ್ಲಿ ಪ್ರಕಾಶ್ ಮೆಹ್ರಾ ಅವರ ‘ಜಾದೂಗರ್’ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ಚಿತ್ರದಲ್ಲಿ ಅಮಿತಾಭ್ ಅವರು ಜಾದೂಗರನ ಗೆಟಪ್ನಲ್ಲಿರುವ ಸೀಕ್ವೆನ್ಸ್ ನ ಶೂಟಿಂಗ್ ನಡೆಯುತ್ತಿತ್ತು. ಅದು ಜಾದೂಗರ ಆಗಿರುವ ಅಮಿತಾಭ್ ಬಂದ್ ಆಗಿರುವ ಬಾಕ್ಸ್ ನಿಂದ ಒಬ್ಬಳು ಸುಂದರ ಯುವತಿಯನ್ನು ಹೊರ ಬರುವಂತೆ ಮಾಡುವ ದೃಶ್ಯ… ಹೀಗಾಗಿ, ಬಾಕ್ಸ್ ನೊಳಗೆ ಮೊದಲೇ ಜೂನಿಯರ್ ಆರ್ಟಿಸ್ಟ್ ನಸೀಮ್ ಖಾನ್ ಎಂಬಂತಹ ಯುವತಿಯನ್ನು ಬಂದ್ ಮಾಡಿ ಇಡಲಾಗಿತ್ತು.

ಮೂರ್ನಾಕು ಟೇಕ್ ಬಳಿಕ ಶಾಟ್ ಓಕೆ ಆಯ್ತು. ಎಲ್ಲರೂ ಅವರವರ ಕೆಲಸದಲ್ಲಿ ಬ್ಯುಸಿ ಆದರು. ಕ್ಯಾಮೆರಾ ಕೂಡಾ ತೆಗೆದು ಬೇರೆ ಶಾಟ್ಗೆ ಎಲ್ಲರೂ ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ ತುಂಬಾ ಹೊತ್ತಾಗಿತ್ತು. ಅಚಾನಾಕ್ಕಾಗಿ ಅಮಿತಾಭ್ ಅವರಿಗೆ ಏನೋ ನೆನಪಾಗಿ ಭಯದಿಂದ ಬೇಗ ಓಡಿ ಓಡಿ ಬಂದು ಅದೇ ಯುವತಿ ಇದ್ದ ಬಾಕ್ಸ್ ಬಳಿ ಬಂದು ನಿಂತಿದ್ದರು. ಎಲ್ಲರಿಗೂ ಒಂದು ಕ್ಷಣ ಅಚ್ಚರಿ.. ಏನಾಗ್ತಿದೆ ಅಂತ… ಆಗ ಅಮಿತಾಭ್ ಮುಚ್ಚಿದ್ದ ಬಾಕ್ಸ್ ಅನ್ನು ತೆರೆದಾಗ ಆ ಯುವತಿ ಪ್ರಜ್ಞೆ ಕಳೆದುಕೊಂಡಿದ್ದರು. ಕಣ್ತಪ್ಪಿನಿಂದ ಯುವತಿ ಇದ್ದ ಬಾಕ್ಸ್ ಬಾಗಿಲು ಮುಚ್ಚಿತ್ತು. ಹೀಗಾಗಿ, ಆಕೆ ಅಲ್ಲೇ ಉಸಿರುಗಟ್ಟಿದ್ದಳು. ತಕ್ಷಣ ಆಕೆಗೆ ಚಿಕಿತ್ಸೆ ನೀಡಲಾಯಿತು. ಹೀಗಾಗಿ, ನಸೀಮ್ ಖಾನ್ ಬದುಕಿ ಬಂದಳು…

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!