Sunday , February 17 2019
ಕೇಳ್ರಪ್ಪೋ ಕೇಳಿ
Home / Interval / ಮಮತಾ ಕುಲಕರ್ಣಿ ‘ಅಹಂ’ ಇಳಿಸಿತ್ತು ಆ ಒಂದು ಹಾಡು…!

ಮಮತಾ ಕುಲಕರ್ಣಿ ‘ಅಹಂ’ ಇಳಿಸಿತ್ತು ಆ ಒಂದು ಹಾಡು…!

ರಾಕೇಶ್ ರೋಷನ್ ‘ಕರಣ್ ಅರ್ಜುನ್’ ಎಂಬ ಚಿತ್ರ ಮಾಡುತ್ತಿದ್ದ ಸಮಯ. ಈ ಚಿತ್ರದ ಕಲಾವಿದರು ಶಾರೂಖ್ ಖಾನ್, ಸಲ್ಮಾನ್ ಖಾನ್, ಕಾಜೋಲ್ ಮತ್ತು ಮಮತಾ ಕುಲಕರ್ಣಿ. ಈ ಚಿತ್ರಕ್ಕಾಗಿ ಹಾಡಿನ ಶೂಟಿಂಗ್ ನಡೆಯುತ್ತಿತ್ತು. ಚಿನ್ನಿ ಪ್ರಕಾಶ್ ಈ ಚಿತ್ರದ ಕೊರಿಯೋಗ್ರಾಫರ್. ಶಾರೂಖ್, ಸಲ್ಮಾನ್ ಮತ್ತು ಮಮತಾ ಕುಲಕರ್ಣಿ ಇದ್ದ ಹಾಡಿದು. ಹಾಡಿನ ಆರಂಭದ ಸಾಲಿಗೆ ಮಮತಾ ಕುಣಿಯಬೇಕಾಗಿತ್ತು. ಹೀಗಾಗಿ, ಸಿಕ್ಕ ಛಾನ್ಸ್ನಲ್ಲಿ ಮಮತಾ ಸಖತ್ ಆಗಿಯೇ ಡ್ಯಾನ್ಸ್ ಮಾಡಿದರು. ಇದನ್ನು ನೋಡಿದ ಎಲ್ಲರೂ ಈ ಡ್ಯಾನ್ಸ್ಗೆ ಫಿದಾ ಆಗಿದ್ದರು ಮತ್ತು ಚಪ್ಪಾಳೆಯ ಸುರಿಮಳೆಯನ್ನೇ ಸುರಿಸಿದ್ದರು. ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಶಾರೂಖ್ ಮತ್ತು ಸಲ್ಮಾನ್ ನಡುವಣ ಡ್ಯಾನ್ಸ್ ದೃಶ್ಯದ ಶೂಟಿಂಗ್ ಬಂದಾಗ ಎಷ್ಟು ರೀಟೇಕ್ ತೆಗೆದುಕೊಂಡರೂ ಚಿನ್ನಿ ಪ್ರಕಾಶ್ ಬಯಸಿದಂತಹ ಸ್ಟೆಪ್ಸ್ ಬರಲೇ ಇಲ್ಲ. ಹೀಗಾಗಿ, ಬೇಸರದಿಂದಲೇ ಆ ದಿನದ ಶೂಟಿಂಗ್ ಅನ್ನು ಮುಗಿಸಲಾಯ್ತು.ಇತ್ತ, ಮಮತಾಗೆ ಬೇಸರ ಆಗಿತ್ತು. ಯಾಕೆಂದರೆ ಅವರು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದರು. ಆದ್ರೆ, ಶಾರೂಕ್ ಮತ್ತು ಸಲ್ಮಾನ್ಗೆ ಡ್ಯಾನ್ಸ್ ಬರೋದೇ ಇಲ್ಲ ಅಂತ ಬೈಯ್ದುಕೊಂಡು ಇದ್ದರು. ಜೊತೆಗೆ, ದೂರ ನಿಂತಿದ್ದ ಶಾರೂಖ್ ಮತ್ತು ಸಲ್ಮಾನ್ನ್ನು ಶಿಳ್ಳೆ ಹೊಡೆದು ಮಮತಾ ಪಕ್ಕಕ್ಕೆ ಕರೆದರು. ಆರಂಭದಲ್ಲಿ ಮಮತಾ ಯಾರನ್ನು ಕರೆಯುತ್ತಿದ್ದಾರೆ ಅಂತ ಶಾರೂಖ್ ಮತ್ತು ಸಲ್ಮಾನ್ಗೆ ಕನ್ಫ್ಯೂಸ್ ಆಗಿತ್ತು. ಬಳಿಕ ಆಕೆ ನಮ್ಮನ್ನೇ ಕರೆಯುತ್ತಿದ್ದಾರೆ ಎಂದು ಗೊತ್ತಾಯ್ತು. ಆದರೆ, ಸಲ್ಮಾನ್ ಹೋಗಲಿಲ್ಲ. ಶಾರೂಖ್ ಹೋದ್ರು. ಈ ವೇಳೆ, ನಿಮಗೆ ಡ್ಯಾನ್ಸೇ ಬರುವುದಿಲ್ಲ ಅಂತ ಮಮತಾ ಗದರೋದಕ್ಕೆ ಶುರು ಮಾಡಿದ್ದರು. ಅಲ್ದೆ, ನಾಳೆಯಿಂದ ರಿಹರ್ಸಲ್ ಮಾಡಿಯೇ ಸೆಟ್ಗೆ ಬರಬೇಕೆಂದು ಕಿರುಚಾಡೋದಕ್ಕೆ ಆರಂಭಿಸಿದ್ದರು. ಹೀಗಾಗಿ, ಮರು ಮಾತನಾಡದೆ ಶಾರೂಖ್ ಅಲ್ಲಿಂದ ಮರಳಿದ್ದರು. ಜೊತೆಗೆ, ಸಲ್ಮಾನ್ ಪಕ್ಕ ಬಂದು ನಾಳೆಯಿಂದ ನಾವಿಬ್ಬರು ಡ್ಯಾನ್ಸ್ ರಿಹರ್ಸಲ್ ಮಾಡೋಣ ಅಂದ್ರು. ಆದ್ರೆ, ಸಲ್ಮಾನ್ ಇದಕ್ಕೆ ಒಪ್ಪಲಿಲ್ಲ. ಮಮತಾ ಬೈಯ್ದಿರೋದಕ್ಕೆ ಶಾರೂಖ್ ಎಷ್ಟು ಬೇಸರ ಮಾಡಿಕೊಂಡಿದ್ದರು ಎಂದರೆ ಕೈಕಾಲು ಹಿಡಿದಾದರೂ ಸಲ್ಮಾನ್ರನ್ನು ಒಪ್ಪಿಸುವ ಮಟ್ಟಕ್ಕೆ ಬಂದಿದ್ದರು. ಹೀಗಾಗಿ, ಮರುದಿನ ಬೆಳಗ್ಗೆ 5 ಗಂಟೆ ಎದ್ದ ಇಬ್ಬರು ಡ್ಯಾನ್ಸ್ ಪ್ರಾಕ್ಟಿಸ್ ಮಾಡಿದರು ಮತ್ತು ಸೆಟ್ಗೆ ಬಂದಿದ್ದರು.

ಶೂಟಿಂಗ್ ಕೂಡಾ ಶುರುವಾಗಿತ್ತು. ಇಲ್ಲೂ ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಹಲವು ರೀಟೇಕ್ ಮಾಡಿಸಿದ್ದರು. ಆಗ ನಿರ್ದೇಶಕ ರಾಕೇಶ್ ರೋಷನ್ ಬಂದು ಯಾಕೆ ಹೀಗಾಗ್ತಿದೆ ಅಂತ ಕೇಳಿದ್ರು. ಅದಕ್ಕೆ ಚಿನ್ನಿ ಪ್ರಕಾಶ್ ಉತ್ತರಿಸುವ ಮೊದಲೇ ಮಧ್ಯ ಬಾಯಿ ಹಾಕಿದ ಮಮತಾ, ‘ನಾನು ನಿಮ್ಗೆ ಹೇಳಿದ್ದಲ್ವಾ…? ಪ್ರಾಕ್ಟಿಸ್ ಮಾಡ್ಕೊಂಡು ಬರೋದಕ್ಕೆ’ ಅಂತ ಮತ್ತೆ ಬೈಯೋದಕ್ಕೆ ಶುರು ಮಾಡಿದ್ರು… ಈ ವೇಳೆ, ಮಮತಾ ಮಾತಿಗೆ ಬ್ರೇಕ್ ಹಾಕಿದ ಚಿನ್ನಿ ಪ್ರಕಾಶ್, ‘ಇವತ್ತು ಅವರು ಮಿಸ್ಟೇಕ್ ಮಾಡಿಲ್ಲ. ನಿಮ್ಮ ಡ್ಯಾನ್ಸ್ನಲ್ಲೇ ತಪ್ಪಿದ್ದು…’ ಅಂತ ಹೇಳಿದಾಗ ಮಮತಾ ಮುಖ ನಾಚಿಕೆ, ಅವಮಾನದಿಂದ ಗಂಟಿಕ್ಕಿತ್ತು. ಇತ್ತ, ಸಲ್ಮಾನ್ ಮತ್ತು ಶಾರೂಖ್ ಅಬ್ಬಾ ಬಚಾವ್ ಆದ್ವಿ ಅಂತ ನೆಮ್ಮದಿಯ ನಿಟ್ಟುಸಿರು ಬಿಟ್ಟರು… ಅಹಂಕಾರದಿಂದ ಮೆರೆದಾಡಿದ್ದ ಮಮತಾಗೆ ಅಹಂನ ಸತ್ಯದರ್ಶನವಾಗಿತ್ತು…!

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!