Saturday , November 17 2018
ಕೇಳ್ರಪ್ಪೋ ಕೇಳಿ
Home / Film News / ಎನ್‍ಟಿಆರ್ ಜೀವನಕಥೆಗೆ ವಿದ್ಯಾಬಾಲನ್ ಸಂಭಾವನೆ ಎಷ್ಟು ಗೊತ್ತಾ…?

ಎನ್‍ಟಿಆರ್ ಜೀವನಕಥೆಗೆ ವಿದ್ಯಾಬಾಲನ್ ಸಂಭಾವನೆ ಎಷ್ಟು ಗೊತ್ತಾ…?

ಹೈದರಾಬಾದ್ : ಟಾಲಿವುಡ್ ಸೂಪರ್ ಸ್ಟಾರ್ ಜೂನಿಯರ್ ಎನ್‍ಟಿಆರ್ ಜೀವನಕತೆ ಚಿತ್ರವನ್ನಾಗಿಸುವ ಪ್ರಯತ್ನ ಈಗ ನಡೆಯುತ್ತಿದೆ. ಚಿತ್ರದ ಸಿದ್ಧತೆ ಬಲು ಜೋರಾಗಿದೆ. ಈ ಚಿತ್ರದ ಮೂಲಕ ಬಾಲಿವುಡ್ ಬ್ಯೂಟಿ ವಿದ್ಯಾಬಾಲನ್ ಟಾಲಿವುಡ್ ನಲ್ಲಿ ಇನ್ನಷ್ಟು ಗಟ್ಟಿಯಾಗಿ ನೆಲೆಯುರುವ ಪ್ರಯತ್ನ ಮಾಡುತ್ತಿದ್ದಾರೆ. ವಿದ್ಯಾಬಾಲನ್ ಟಾಲಿವುಡ್ ದಂತಕತೆ ಎನ್‍ಟಿಆರ್ ಅವರ ಪತ್ನಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ನಟ ಬಾಲಕೃಷ್ಣ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ ಶೂಟಿಂಗ್ ಕೂಡಾ ಶುರುವಾಗಿದೆ.

ಈ ಚಿತ್ರದ ಪಾತ್ರದ ಬಗ್ಗೆ ಇತ್ತೀಚಿಗಷ್ಟೇ ವಿದ್ಯಾಬಾಲನ್ ಬಾಲಕೃಷ್ಣ ಕುಟುಂಬವನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ವಿದ್ಯಾಬಾಲನ್ 1.5 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರಂತೆ. ನಂದಮೂರಿ ತಾರಕ ರಾಮರಾವ್ ಅವರನ್ನೂ ಚಿತ್ರರಂಗದಲ್ಲಿ ಜೂನಿಯರ್ ಎನ್‍ಟಿಆರ್ ಎಂದೇ ಕರೆಯುತ್ತಾರೆ. ಎನ್‍ಟಿಆರ್ ಟಾಲಿವುಡ್‍ನ ದಂತಕತೆ. ನಟ, ನಿರ್ಮಾಪಕ, ನಿರ್ದೇಶಕ, ಸಂಕಲನಕಾರ ಮತ್ತು ರಾಜಕಾರಣಿಯಾಗಿ ಹೆಸರು ಗಳಿಸಿದವರು ಇವರು. ಅದೂ ಅಲ್ಲದೆ, ಏಳು ವರ್ಷಗಳ ಕಾಲ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿಯೂ ಇವರು ಗಮನ ಸೆಳೆದಿದ್ದರು.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!