Monday , December 10 2018
ಕೇಳ್ರಪ್ಪೋ ಕೇಳಿ
Home / Interval / ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ ನಟರಿಗೆ ಒಂದಷ್ಟು ಕಹಿ ಘಟನೆಗಳು ಆಗಿವೆ. ಏರ್​ ಪೋರ್ಟ್​ನಲ್ಲೇ ಸಂಜಯ್ ದತ್, ಶಾರೂಖ್, ಸಲ್ಮಾನ್​ ರನ್ನು ವಿಚಾರಣೆ ನಡೆಸಿದ್ದ ಘಟನೆಯೂ ನಡೆದಿದೆ. ಆದರೆ, ಅದರಲ್ಲೂ ಬಾಲಿವುಡ್​ನಲ್ಲಿರುವ ಸಭ್ಯ ನಟರಲ್ಲಿ ಒಬ್ಬರು ಎಂದೇ ಗುರುತಿಸಿಕೊಂಡಿರುವ ಸುನಿಲ್ ಶೆಟ್ಟಿ ಅವರಿಗೆ ಇಲ್ಲಿ ಆದ ಅನುಭವ ಇನ್ನಷ್ಟು ಘೋರ… ಅದು 2002 ರ ಅವಧಿ. ಸಂಜಯ್ ಗುಪ್ತಾ ಅವರು ಕಾಂಟೇ ಎಂಬ ಚಿತ್ರ ತೆಗೆಯುತ್ತಿದ್ದರು. ಅಮಿತಾಭ್, ಸುನಿಲ್ ಶೆಟ್ಟಿ, ಸಂಜಯ್ ದತ್ ಸೇರಿದಂತೆ ಹಲವು ನಟರ ದಂಡೇ ಈ ಚಿತ್ರದಲ್ಲಿತ್ತು. ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದರು ನ್ಯೂಯಾರ್ಕ್​​ನಲ್ಲಿ. ಸುನಿಲ್ ಶೆಟ್ಟಿ ಅವರಿಗೆ ದಿನಾ ಜಿಮ್​ನಲ್ಲಿ ಒಂದಷ್ಟು ಹೊತ್ತು ಅಭ್ಯಾಸ ಮಾಡುವ ಹವ್ಯಾಸ ಇತ್ತು. ಆದರೆ, ಶೂಟಿಂಗ್ ಟೈಮ್ 9 ಗಂಟೆಗೆ ಇದ್ದುದರಿಂದ ಅಲ್ಲಿ 5 ಗಂಟೆಗೇ ಸುನಿಲ್ ಜಿಮ್​ ಗೆ ಹೋಗಿ ಬರುತ್ತಿದ್ದರು. ಒಂದು ಸಲ ಜಿಮ್​ ನಲ್ಲೇ ಇವರಿಗೆ ಜಾಸ್ತಿ ಟೈಮ್ ಆಗಿತ್ತು. ಹೀಗಾಗಿ, ತಮ್ಮ ಸಹಾಯಕರಿಂದ ಫಿಲಂನ ಕಾಸ್ಟ್ಯೂಮ್ ಅಲ್ಲಿಗೇ ತರಿಸಿ ಅಲ್ಲಿಂದಲೇ ನೇರವಾಗಿ ಶೂಟಿಂಗ್ ಸ್ಪಾಟ್​ಗೆ ಹೋಗಲು ಸುನಿಲ್ ನಿರ್ಧರಿಸಿದ್ದರು. ಯಾಕೆಂದರೆ, ಯಾವತ್ತೂ ಸುನಿಲ್ ತಡವಾಗಿ ಸೆಟ್​ಗೆ ಹೋದವರೇ ಅಲ್ಲ. ಆದರೆ, ತಮ್ಮ ಕಾಸ್ಟ್ಯೂಮ್ ಧರಿಸಿ ಸುನಿಲ್ ಅವರು ಜಿಮ್​ ನಿಂದ ಹೊರಬರುತ್ತಿದ್ದಂತೆಯೇ ಅವರನ್ನು ಕಂಡ ಅಮೇರಿಕಾ ಪೊಲೀಸರು ತಡೆದಿದ್ದರು. ಯಾಕೆಂದರೆ, ಅದು ವರ್ಲ್ಡ್​ ಟ್ರೇಡ್ ಸೆಂಟರ್ ಮೇಲೆ ಉಗ್ರರು ದಾಳಿ ಮಾಡಿದ್ದ ಸಂದರ್ಭ. ಹೀಗಾಗಿ, ಎಲ್ಲಾ ಕಡೆ ಬಿಗಿ ಭದ್ರತೆಯನ್ನೇ ಕೈಗೊಂಡಿತ್ತು. ಆದರೆ, ಸುನಿಲ್ ಧರಿಸಿದ್ದ ಡ್ರೆಸ್ ನೋಡಿ ಅಮೇರಿಕಾ ಪೊಲೀಸರು ಇವರನ್ನೂ ಭಯೋತ್ಪಾದಕ ಎಂಬ ಅನುಮಾನದಿಂದ ನೋಡಿದ್ದರು. ಹೀಗಾಗಿ, ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ, ಸುನಿಲ್ ಅವರು ಬಾಲಿವುಡ್​ನ ಖ್ಯಾತ ನಟ ಎಂಬುದು ಪೊಲೀಸರಿಗೆ ಗೊತ್ತಾಯ್ತು… ತಕ್ಷಣ, ಪೊಲೀಸರು ಪರಿಸ್ಥಿತಿಯ ಬಗ್ಗೆ ಸುನಿಲ್ ಅವರಿಗೆ ವಿವರಿಸಿ ಘಟನೆಯ ಬಗ್ಗೆ ವಿಷಾದಿಸಿ ಬಿಟ್ಟು ಕಳುಹಿಸಿದ್ದರು. ಆದರೆ, ಈ ಘಟನೆ ಸದಾ ಅಮೇರಿಕಾಕ್ಕೆ ಹೋಗುವಾಗ ಸುನಿಲ್​ ಅವರಿಗೆ ನೆನಪಾಗುತ್ತಿದೆ.

About sudina

Check Also

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು …

Leave a Reply

Your email address will not be published. Required fields are marked *

error: Content is protected !!