Thursday , October 18 2018
ಕೇಳ್ರಪ್ಪೋ ಕೇಳಿ
Home / Film News / ಮ್ಯಾಗಝೀನ್ ಕವರ್ ಪೇಜ್‍ಗೆ ಮೊದಲ ಬಾರಿಗೆ ಪೋಸ್ ಕೊಟ್ಟ ಶಾರೂಖ್ ಪುತ್ರಿ…

ಮ್ಯಾಗಝೀನ್ ಕವರ್ ಪೇಜ್‍ಗೆ ಮೊದಲ ಬಾರಿಗೆ ಪೋಸ್ ಕೊಟ್ಟ ಶಾರೂಖ್ ಪುತ್ರಿ…

ಮುಂಬೈ : ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರಿ ಸುಹಾನಾ ಇಷ್ಟು ದಿನ ಇಂಟರ್ ನೆಟ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದರು. ತಮ್ಮ ಲುಕ್‍ನಿಂದಲೇ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದ ಸ್ಟಾರ್ ಕಿಡ್ ಸುಹಾನಾ. ಲಂಡನ್ ನಲ್ಲಿ ಕಲಿಯುತ್ತಿರುವ ಸುಹಾನಾರ ಒಂದೊಂದು ಫೋಟೋ ಕೂಡಾ ವೈರಲ್ ಆಗುತ್ತಿತ್ತು. ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಸುಹಾನಾ ಬಾಲಿವುಡ್‍ಗೂ ಎಂಟ್ರಿ ಕೊಡಲಿದ್ದಾರೆ. ಇದಕ್ಕಿಂತ ಮೊದಲು ಸುಹಾನಾ ಈಗ ಮ್ಯಾಗಝೀನ್ ಕವರ್ ಪೇಜ್‍ಗೆ ಪೋಸ್ ಕೊಟ್ಟಿದ್ದಾರೆ.


ಶಾರೂಖ್ ಮತ್ತು ಗೌರಿ ಖಾನ್ ಪುತ್ರಿ ಸುಹಾನಾಗೆ ಈಗ 18 ವರ್ಷ. ಈ ಸುಹಾನಾ ವೋಗ್ ಎಂಬ ನಿಯತಕಾಲಿಕದ ಆಗಸ್ಟ್ ನ ಸಂಚಿಕೆಯ ಮುಖಪುಟದಲ್ಲಿ ಮಿಂಚುತ್ತಿದ್ದಾರೆ. ಈ ಫೋಟೋದಲ್ಲಿ ಸುಹಾನಾ ಮುಖದಲ್ಲಿ ಇನ್ನೂ ಕಾನ್ಫಿಡೆನ್ಸ್ ಕಾಣ್ತಿದೆ. ಇನ್ನು, ಮಗಳ ಈ ಸಾಧನೆಯ ಹೆಜ್ಜೆಯ ಬಗ್ಗೆ ತಂದೆ ಶಾರೂಖ್ ಕೂಡಾ ಸಂತಸ ವ್ಯಕ್ತಪಡಿಸಿದ್ದಾರೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!