Wednesday , August 15 2018
ಕೇಳ್ರಪ್ಪೋ ಕೇಳಿ
Home / Sudina Special / ಆಟೋ ಚಾಲಕರೂ ಹೆಲ್ಮೆಟ್ ಹಾಕೋಬೇಕಾ…? : ಹಾಕಿಲ್ಲಂತ ಫೈನ್ ಹಾಕಿದ್ದಾರೆ ಪುತ್ತೂರು ಪೊಲೀಸ್ರು…!

ಆಟೋ ಚಾಲಕರೂ ಹೆಲ್ಮೆಟ್ ಹಾಕೋಬೇಕಾ…? : ಹಾಕಿಲ್ಲಂತ ಫೈನ್ ಹಾಕಿದ್ದಾರೆ ಪುತ್ತೂರು ಪೊಲೀಸ್ರು…!

ಪುತ್ತೂರು : ಇದೊಂದು ಅಚ್ಚರಿಯ ಘಟನೆ. ತಕ್ಷಣಕ್ಕೆ ನಂಬುವುದಕ್ಕೂ ಅಸಾಧ್ಯ. ಆದರೆ, ಈ ಘಟನೆ ನಡೆದಿರೋದಂತೂ ಸತ್ಯ. ಟೂವೀಲರ್ ಚಾಲಕರಿಗೆ ಹೆಲ್ಮೆಟ್ ಕಡ್ಡಾಯ. ಹಿಂಬದಿ ಸವಾರರಿಗೂ ಕಡ್ಡಾಯ. ಆದರೆ, ಆಟೋ ಚಲಾಯಿಸುವಾಗಲೂ ಹೆಲ್ಮೆಟ್ ಹಾಕೋಬೇಕಾ…? ಈ ಪ್ರಶ್ನೆಯನ್ನು ಹುಟ್ಟುಹಾಕಿದ್ದು ಪುತ್ತೂರಿನ ಸಂಚಾರಿ ಪೊಲೀಸರು. ಯಾಕೆಂದರೆ, ಇಲ್ಲಿನ ಆಟೋ ಚಾಲಕರೊಬ್ಬರಿಗೆ ಪೊಲೀಸರು ಫೈನ್ ಹಾಕಿದ್ದರು. ನಿಗದಿಗಿಂತ ಜಾಸ್ತಿ ಜನ ಆಟೋದಲ್ಲಿ ಕೂರಿಸಿಕೊಂಡು ಹೋಗಿದ್ದಕ್ಕೆ ಈ ಫೈನ್ ಹಾಕಲಾಗಿತ್ತು. ಆಟೋ ಚಾಲಕ ವಿಠಲ್ ಮೂರು ಜನ ಹೆಚ್ಚು ಮಕ್ಕಳು ಅಂದರೆ ಒಟ್ಟು ಒಂಭತ್ತು ಮಕ್ಕಳನ್ನು ಕೂರಿಸಿಕೊಂಡು ಹೋಗುತ್ತಿದ್ದರು. ಹೀಗಾಗಿ, ಆಟೋ ತಡೆದ ಪೊಲೀಸರು ಫೈನ್ ಹಾಕಿದ್ದರು. ಆದರೆ, ಮತ್ತೆ ರಸೀದಿ ನೋಡಿದಾಗ ಚಾಲಕ ದಂಗಾಗಿದ್ದರು. ಯಾಕೆಂದರೆ, ಅದರಲ್ಲಿ ಹೆಲ್ಮೆಟ್ ಧರಿಸಿಲ್ಲ ಎಂದೂ ಫೈನ್ ಹಾಕಲಾಗಿದೆ ಎಂದು ನಮೂದಿಸಲಾಗಿತ್ತು. ಸದ್ಯ ಈ ರಶೀದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಗಿಯೇ ವೈರಲ್ ಆಗಿದೆ.

About sudina

Check Also

ಕಂದನ ಅಳು ಕೇಳಿ ಎದ್ದಳು ಆರು ತಿಂಗಳಿನಿಂದ ಕೋಮಾದಲ್ಲಿದ್ದ ತಾಯಿ…!

ಕೊಟ್ಟಾಯಂ : ತಾಯಿ ಅಂದರೇನೇ ಹಾಗೆ… ಮಮತಾಮೂರ್ತಿ… ನಿಸ್ವಾರ್ಥತೆಯ ದೇವತಾ ರೂಪ… ಅದಕ್ಕೇ ತಾಯಿಗೆ ಭೂಮಿ ಮೇಲಿರುವ ಪ್ರತ್ಯಕ್ಷ ದೇವರ …

Leave a Reply

Your email address will not be published. Required fields are marked *

error: Content is protected !!