Wednesday , March 20 2019
ಕೇಳ್ರಪ್ಪೋ ಕೇಳಿ
Home / News NOW / ಕುಂದಾಪುರದಲ್ಲಿ ಗೋವು ಕಳ್ಳರ ಹಾವಳಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕುಂದಾಪುರದಲ್ಲಿ ಗೋವು ಕಳ್ಳರ ಹಾವಳಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕುಂದಾಪುರ : ಉಡುಪಿ ಜಿಲ್ಲೆಯಾದ್ಯಂತ ಗೋವು ಕಳ್ಳರ ಹಾವಳಿ ಹೆಚ್ಚಾಗಿದೆ. ರಾತ್ರಿ ರಸ್ತೆ ಬದಿ ಮಲಗುವ ಹಸುಗಳನ್ನೆಲ್ಲ ಕಳ್ಳರು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ. ಜೊತೆಗೆ, ಕೊಟ್ಟಿಗೆಗೆ ನುಗ್ಗಿ ಕಳ್ಳತನ ಮಾಡುವ ಪ್ರಕರಣಗಳೂ ಹೆಚ್ಚಾಗುತ್ತಿವೆ. ಈ ನಡುವೆ, ಕುಂದಾಪುರ ತಾಲೂಕಿನಲ್ಲಿ ನಡೆದ ಗೋವು ಕಳ್ಳತನದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕುಂದಾಪುರ ತಾಲೂಕಿನ ಸಿದ್ದಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಪೆಟ್ರೋಲ್ ಬಂಕ್‍ವೊಂದರಲ್ಲಿ ಗೋವು ಕಳ್ಳತನ ನಡೆಸಿದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಡರಾತ್ರಿ ಸುಮಾರು 1 ಗಂಟೆ 45 ಕ್ಕೆ ಬಿಳಿ ರಿಟ್ಜ್ ಕಾರಿನಲ್ಲಿ ಬಂದ ಮುಸುಕುಧಾರಿ ಕಳ್ಳರು ಪೆಟ್ರೋಲ್ ಬಂಕಿನೊಳಗೆ ಬಂದು ಅಲ್ಲಿದ್ದ ಬಿಡಾಡಿ ದನಗಳನ್ನು ಹಿಡಿಯಲು ಯತ್ನ ನಡೆಸುತ್ತಾರೆ. ಈ ವೇಳೆ, ದಾರಿಯಲ್ಲಿ ಯಾವುದೋ ವಾಹನವೊಂದು ಬಂದ ಹಿನ್ನೆಲೆಯಲ್ಲಿ ಹೆದರಿದ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಿಷ್ಟು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆದರೆ, ಇದೇ ಜಾಗದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಎರಡು ಹಸುಗಳನ್ನು ಇವರು ಕಾರಲ್ಲಿ ತುಂಬಿ ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಈ ಭಾಗದಲ್ಲಿ ಕಳೆದ 10 ವರ್ಷದಿಂದ ಗೋವು ಕಳ್ಳತನ ನಡೆಯುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!