Sunday , December 16 2018
ಕೇಳ್ರಪ್ಪೋ ಕೇಳಿ
Home / News NOW / ಗ್ರಾಮಸ್ಥರಿಗೆ ಭಯ ಹುಟ್ಟಿಸುತ್ತಿದ್ದ ದೊಡ್ಡ ಚಿರತೆ ಕೊನೆಗೂ ಸೆರೆ…

ಗ್ರಾಮಸ್ಥರಿಗೆ ಭಯ ಹುಟ್ಟಿಸುತ್ತಿದ್ದ ದೊಡ್ಡ ಚಿರತೆ ಕೊನೆಗೂ ಸೆರೆ…

ಉಡುಪಿ : ಕಳೆದ ಒಂದು ವರ್ಷದಿಂದೀಚಿಗೆ ಉಡುಪಿಯ ಕಾಪು ತಾಲೂಕಿನ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆÉರೆಯಾಗಿದೆ. ಕಾಪು ತಾಲೂಕಿನ ಪಾಂಬೂರು ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳು ಮತ್ತು ಗ್ರಾಮಸ್ಥರು ಜಂಟಿ ಕಾರ್ಯಾಚರಣೆ ಮಾಡಿ ಸುಮಾರು 8 ವರ್ಷದ ದೊಡ್ಡ ಗಂಡು ಚಿರತೆಯನ್ನು ಸೆರೆ ಹಿಡಿದಿದ್ದಾರೆ. 

ಈ ಚಿರತೆ ಶಿರ್ವ, ಪಾಂಬೂರು, ಕಾಪು ವ್ಯಾಪ್ತಿಯಲ್ಲಿ ಜನರಿಗೆ ನಡುಕ ಹುಟ್ಟಿಸಿತ್ತು. ಮನೆಯ ಅಂಗಳಕ್ಕೆ ಬಂದು ನಾಯಿಯನ್ನು ಹೊತ್ತೊಯ್ಯುತ್ತಿತ್ತು. ಜಾನುವಾರುಗಳ ಮೇಲೂ ದಾಳಿ ಮಾಡಿತ್ತು. ಹೀಗಾಗಿ, ಅರಣ್ಯ ಇಲಾಖೆ ಈ ಭಾಗದಲ್ಲಿ ಚಿರತೆಗಾಗಿ ಬೋನ್ ಇಟ್ಟಿತ್ತು. ಈ ಬೋನ್‍ಗೆ ಈಗ ಈ ಚಿರತೆ ಬಿದ್ದಿದೆ.

ಇನ್ನು, ಸೆರೆಯಾದ ಚಿರತೆ ನೋಡಲು ಜನರಂತೂ ಮುಗಿಬಿದ್ದಿದ್ದರು. ಶಾಲಾ ಮಕ್ಕಳು ಕೂಡಾ ಕುತೂಹಲದಿಂದ ಚಿರತೆಯನ್ನು ನೋಡುತ್ತಿದ್ದರು. ಇತ್ತ, ಸೆರೆಯಾದ ಚಿರತೆಯನ್ನು ಪಶ್ಚಿಮ ಘಟ್ಟಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿ ಕ್ಲಿಫರ್ಡ್ ತಿಳಿಸಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!