Sunday , December 16 2018
ಕೇಳ್ರಪ್ಪೋ ಕೇಳಿ
Home / News NOW / ಸೌದಿ ವ್ಯಕ್ತಿಯ ಕಿರುಕುಳಕ್ಕೆ ಜೀವ ಕಳೆದುಕೊಂಡರಾ ಶಿರ್ವದ ನರ್ಸ್…?

ಸೌದಿ ವ್ಯಕ್ತಿಯ ಕಿರುಕುಳಕ್ಕೆ ಜೀವ ಕಳೆದುಕೊಂಡರಾ ಶಿರ್ವದ ನರ್ಸ್…?

ಉಡುಪಿ : ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಿರ್ವದ ಹಝಿಲ್ ಜೋತ್ಸ್ನಾ ಮಥಾಯಿಸ್ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಪ್ರಶ್ನೆಯ ರೂಪತಾಳುತ್ತಿದೆ. ಕಳೆದ ತಿಂಗಳ 19 ರಂದು ಜೋತ್ಸ್ನಾ ನಿಗೂಢವಾಗಿ ಸಾವನ್ನಪ್ಪಿದ್ದರು. ಊರಿನಲ್ಲಿದ್ದ ಪತಿಯೊಂದಿಗೆ ಮಾತನಾಡಿದ್ದ ಜೋತ್ಸ್ನಾ ನಂತರ ಸಾವಿಗೀಡಾಗಿದ್ದರು. ಆದರೆ, ಆರೋಗ್ಯವಾಗಿಯೇ ಇದ್ದ ಜೋತ್ಸ್ನಾ ವಿಧಿವಶರಾಗಿದ್ದು ಹೇಗೆ ಎಂಬ ಪ್ರಶ್ನೆ ಅವರ ಕುಟುಂಬದವರು ಸೇರಿದಂತೆ ಎಲ್ಲರನ್ನೂ ಕಾಡುತ್ತಿತ್ತು. ಆದರೆ, ಇದೀಗ ಸೌದಿ ಅರೇಬಿಯಾದ ಪೊಲೀಸರ ಪ್ರಾಥಮಿಕ ತನಿಖೆ ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡಿದೆ.

ಸದ್ಯದ ಮಾಹಿತಿ ಪ್ರಕಾರ ಹಝಿಲ್ ಅವರಿಗೆ ಸೌದಿ ಅರೇಬಿಯಾದ ವ್ಯಕ್ತಿಯಿಂದ ಕಿರುಕುಳ ಇತ್ತಂತೆ. ಇದರಿಂದ ನೊಂದು ಇವರು ತಮ್ಮ ಕೋಣೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎಂದು ಗೊತ್ತಾಗಿದೆ. ಈ ಬಗ್ಗೆ ಈ ಆರೋಪಿಯನ್ನು ಪೊಲೀಸ್ರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದೂ ಗೊತ್ತಾಗಿದೆ. ಆದರೆ, ಈ ಬಗ್ಗೆ ಪೊಲೀಸ್ರು ಅಧಿಕೃತ ಮಾಹಿತಿಯನ್ನೂ ಇನ್ನೂ ಕುಟುಂಬದವರಿಗೆ ನೀಡಿಲ್ಲ. ತನಿಖೆಯೂ ಚುರುಕುಗೊಂಡಿದೆ.

ಸಾವಿಗೂ ಮುನ್ನ ಜೋತ್ಸ್ನಾ ಕೊಂಕಣಿ ಮತ್ತು ಇಂಗ್ಲೀಷ್‍ನಲ್ಲಿ ಡೆತ್‍ನೋಟ್ ಬರೆದಿಟ್ಟಿದ್ದರು. ಮುಚ್ಚಿದ ಲಕೋಟೆಯಲ್ಲಿ ಈ ಡೆತ್‍ನೋಟ್ ಇತ್ತು. ಇದರಲ್ಲಿ ಕೊಂಕಣಿಯಲ್ಲಿ ಬರೆದಿದ್ದ ಡೆತ್‍ನೋಟ್ ಪೊಲೀಸರಿಗೆ ಸಿಕ್ಕಿದ್ದು, ಇದನ್ನು ಅರೇಬಿಕ್ ಭಾಷೆಗೆ ತರ್ಜುಮೆ ಮಾಡಿ ಪೊಲೀಸ್ರು ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಕಿರುಕುಳದ ವಿಚಾರ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನೂ ವಿಚಾರಣೆ ನಡೆಯುತ್ತಿದ್ದು ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬೀಳಲಿದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!