Wednesday , March 20 2019
ಕೇಳ್ರಪ್ಪೋ ಕೇಳಿ
Home / News NOW / ಬಿಲ್ಡರ್ ಗೆ ಹಣಕ್ಕಾಗಿ ಬೆದರಿಕೆ : ಇಬ್ಬರ ಬಂಧನ

ಬಿಲ್ಡರ್ ಗೆ ಹಣಕ್ಕಾಗಿ ಬೆದರಿಕೆ : ಇಬ್ಬರ ಬಂಧನ

ಉಡುಪಿ : ಹಫ್ತಾಕ್ಕಾಗಿ ಅಂಬಾಗಿಲು ಕ್ಲಾಸಿಕ್ ಬಿಲ್ಡರ್‍ಗೆ ಕರೆ ಮಾಡಿ ಬೆದರಿಕೆ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿನಿಮೀಯ ರೀತಿಯ ಕಾರ್ಯಾಚರಣೆಯಲ್ಲಿ ಈ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಜೊತೆಗೆ, ಆರೋಪಿಗಳ ಬಳಿ ಇದ್ದ ಒಂದು ಕಾರು ಹಾಗೂ 6 ಮೊಬೈಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ಧನರಾಜ್ ಕಟಪಾಡಿ (23) ಮತ್ತು ಉಲ್ಲಾಸ್ ಮಲ್ಪೆ (25) ಎಂದು ಗುರುತಿಸಲಾಗಿದೆ. ಆರೋಪಿಗಳು ಕಳೆದ ಒಂದು ವಾರದಿಂದ ಪುತ್ತೂರು ವಾಸುಕಿ ನಗರ ನಿವಾಸಿ ಪ್ರಭಾಕರ ಪೂಜಾರಿ ಅವರಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು ಎನ್ನಲಾಗಿದೆ. `ನೀನು ಬನ್ನಂಜೆ ರಾಜಾನ ಹೆಸರಿನಲ್ಲಿ ಹಣ ಮಾಡುತ್ತೀಯಾ. ಆ ಹಣದಲ್ಲಿ ನಮಗೆ 25 ಲಕ್ಷ ರೂಪಾಯಿ ಕೊಡಬೇಕು’ ಎಂದು ಬೇಡಿಕೆ ಜೊತೆಗೆ ಬೆದರಿಕೆ ಕೂಡಾ ಹಾಕಿದ್ದರು. ಈ ಬಗ್ಗೆ ಪ್ರಭಾಕರ ಪೂಜಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಂಜೆ 5.30 ಕ್ಕೆ ಮಲ್ಪೆಯಲ್ಲಿ ಭೇಟಿಯಾಗಲು ತೆರಳಿದ್ದರು. ಈ ವೇಳೆ ಆರೋಪಿಗಳು ಪ್ರಭಾಕರ್ ಜೊತೆ ಖಾಸಗಿ ಹೋಟೆಲ್‍ವೊಂದರ ಮುಂಭಾಗ ನಿಂತಿದ್ದ ವೇಳೆ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!