Sunday , December 16 2018
ಕೇಳ್ರಪ್ಪೋ ಕೇಳಿ
Home / Interval / ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಮೂರು ವಾರ ಅಮೀರ್ ಖಾನ್‍ರನ್ನು ಕೋಣೆಯಲ್ಲಿ ಕೂಡಿಟ್ಟಿದ್ದರು ಪತ್ನಿ ಕಿರಣ್…!

ಅಮೀರ್ ಖಾನ್ ಅವರ ಪತ್ನಿ ಕಿರಣ್ `ದೋಬಿಘಾಟ್’ ಎಂಬ ಚಿತ್ರ ಮಾಡಿದ್ದರು. 2011ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಇದು ಕಿರಣ್ ಅವರ ಮೊದಲ ನಿರ್ದೇಶನದ ಚಿತ್ರವೂ ಹೌದು. ಆಗ ಅಮೀರ್ `ಗಜನಿ’ ಚಿತ್ರದಲ್ಲಿ ಬ್ಯುಸಿ ಇದ್ದರು. ಆದರೂ, ಈ ಚಿತ್ರದಲ್ಲಿ ನನಗೊಂದು ಪಾತ್ರ ಬೇಕೆಂದು ಅಮೀರ್ ಪಟ್ಟು ಹಿಡಿದಿದ್ದರು ಮತ್ತು ಗಜನಿ ಚಿತ್ರದ ಶೂಟಿಂಗ್ ಸೆಟ್‍ನಲ್ಲೇ ಸ್ಕ್ರೀನ್ ಟೆಸ್ಟ್ ಕೂಡಾ ನೀಡಿದ್ದರು. ಹೀಗೆ ಹಠ ಹಿಡಿದು ಅಮೀರ್ ಈ ಚಿತ್ರದಲ್ಲಿ ಒಂದು ಪಾತ್ರವನ್ನು ಗಿಟ್ಟಿಸಿಕೊಂಡಿದ್ದರು.
ಆದರೆ, ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಒಂದು ಸಮಸ್ಯೆ ಎದುರಾಗಿತ್ತು. ಯಾಕೆಂದರೆ, ತುಂಬಾ ಇಕ್ಕಟ್ಟಾದ ಹಾಗೂ ಸದಾ ಜನನಿಬಿಡ ಪ್ರದೇಶವಾದ ಮಹಮ್ಮದ್ ಅಲಿ ರಸ್ತೆಯಲ್ಲಿ ಈ ಚಿತ್ರದ ಶೂಟಿಂಗ್ ಲೊಕೇಷನ್ ಇತ್ತು. ಹೀಗಾಗಿ, ದಿನಾ ಅಮೀರ್ ಇಲ್ಲಿಗೆ ಬರುತ್ತಿರುವುದರಿಂದ ತೊಂದರೆ ಉಂಟಾಗುತ್ತಿತ್ತು, ಅಭಿಮಾನಿಗಳೆಲ್ಲಾ ಮುತ್ತಿಕೊಳ್ಳುತ್ತಿದ್ದರು. ಹೀಗಾಗಿ, ಇಕ್ಕಾಟದ ರಸ್ತೆಯಲ್ಲಿ ಮತ್ತೆ ಇನ್ನಷ್ಟು ಸಮಸ್ಯೆ ಉದ್ಘವಿಸುವ ಸಂಭವ ಇತ್ತು. ಈ ಬಗ್ಗೆ ಕಿರಣ್ ರಾವ್ ತುಂಬಾ ಯೋಚನೆ ಮಾಡುತ್ತಿದ್ದರು. ಈ ವೇಳೆ, ಅವರಿಗೊಂದು ಐಡಿಯಾ ಹೊಳೆದಿತ್ತು. ತಕ್ಷಣ ಮಧ್ಯರಾತ್ರಿ ಮಲಗಿದ್ದ ಅಮೀರ್ ಖಾನ್‍ರನ್ನು ಎಬ್ಬಿಸಿ ಕಿರಣ್ ಮಹಮ್ಮದ್ ಅಲಿ ರಸ್ತೆಯಲ್ಲಿರುವ ಸಣ್ಣ ಕೋಣೆಯೊಂದಕ್ಕೆ ಕರೆದುಕೊಂಡು ಹೋದರು. ಬಳಿಕ `ಇನ್ನು ಮೂರು ವಾರಗಳ ಕಾಲ ಶೂಟಿಂಗ್ ಮುಗಿಯುವ ತನಕ ನೀವು ಇದೇ ಕೋಣೆಯಲ್ಲಿ ಇರಬೇಕು’ ಎಂದು ತಾಕೀತು ಕೂಡಾ ಮಾಡಿದರು.
ಇದು ತುಂಬಾ ಚಿಕ್ಕ ಕೋಣೆ. ತುಂಬಾ ಇಕ್ಕಟ್ಟು ಅಂದರೆ ತುಂಬಾ ಇಕ್ಕಟ್ಟು. ಈ ಕೋಣೆಯಲ್ಲೇ ಶೂಟಿಂಗ್‍ನ ಇತರ ವಸ್ತುಗಳನ್ನೂ ಇಡಲಾಗಿತ್ತು. ಅದೂ ಅಲ್ಲದೆ, ತ್ರಿ ಈಡಿಯೆಟ್ಸ್ ಚಿತ್ರದ ಮಾತುಕತೆಗಾಗಿ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರು ಇಲ್ಲಿಗೆಯೇ ಬಂದು ಅಮೀರ್ ಜೊತೆ ಮಾತುಕತೆ ನಡೆಸಿದ್ದರು…! ಆದರೆ, ಯಾವುದೇ ಹಮ್ಮುಬಿಮ್ಮು ಇಲ್ಲದೆ ಅಮೀರ್ ಮೂರು ವಾರಗಳ ಕಾಲ ಇದೇ ಕೋಣೆಯಲ್ಲಿ ಇದ್ದು ದೋಬಿಘಾಟ್ ಚಿತ್ರದ ಕೆಲಸವನ್ನು ಪೂರ್ಣಗೊಳಿಸಿಕೊಟ್ಟರು ಮತ್ತು ಚಿತ್ರವೊಂದರ ಬಗ್ಗೆ ತಮಗಿರುವ ಕಾಳಜಿ, ಆಸ್ಥೆಯನ್ನೂ ತೋರಿಸಿಕೊಟ್ಟರು. ಅದಕ್ಕೇ ಅಮೀರ್ ಖಾನ್ ಯಾವತ್ತೂ ಫರೆಫಕ್ಷನಿಸ್ಟ್ ಆಗಿಯೇ ಇರುವುದು…

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!