Monday , October 22 2018
ಕೇಳ್ರಪ್ಪೋ ಕೇಳಿ
Home / News NOW / ಬಡ ಕುಟುಂಬಕ್ಕೆ ಸಹಾಯಾಸ್ತ : ಬೇಕಿದೆ ಹೃದಯವಂತರ ಬೆಂಬಲ

ಬಡ ಕುಟುಂಬಕ್ಕೆ ಸಹಾಯಾಸ್ತ : ಬೇಕಿದೆ ಹೃದಯವಂತರ ಬೆಂಬಲ

ಬಂಟ್ವಾಳ : ತೆಂಗಿನಮರದಿಂದ ಬಿದ್ದು ಹಾಸಿಗೆ ಹಿಡಿದಿರುವ ಪಡು ಪೆರ್ಮಂಕಿ ಗ್ರಾಮದ ಕೊಂಬೆಲ್ ನಿವಾಸಿ ತನಿಯಪ್ಪ ಬೆಲ್ಚಡ ಅವರಿಗೆ `ನಮ್ಮ ತುಡರ್ ಚಾರಿಟೇಬಲ್ ಟ್ರಸ್ಟ್’ ಸಹಾಯಾಸ್ತ ಚಾಚಿದೆ. ತನಿಯಪ್ಪ ಅವರ ಮನೆಗೆ ತೆರಳಿದ ಟ್ರಸ್ಟ್ ಸದಸ್ಯರು 20 ಸಾವಿರ ರೂಪಾಯಿಯ ಸಹಾಯಧನ ವಿತರಿಸಿದ್ದಾರೆ.

ತನಿಯಪ್ಪ ಬೆಚ್ಚಡ ಮತ್ತು ಸುಗಂದಿ ದಂಪತಿ ಬಡತನವಿದ್ದರೂ ಸುಖ ಜೀವನ ನಡೆಸುತ್ತಿದ್ದರು. ಆದರೆ, ಕಳೆದ ನಾಲ್ಕು ತಿಂಗಳ ಹಿಂದೆ ತೆಂಗಿನಕಾಯಿ ಕೀಳುವ ವೇಳೆ ಮರದಿಂದ ಬಿದ್ದು ತನಿಯಪ್ಪ ಅವರು ತೀವ್ರವಾಗಿ ಗಾಯಗೊಂಡಿದ್ದರು. ಇದರಿಂದ ಕುಟುಂಬ ದಿನಾ ಕಣ್ಣೀರಿನಲ್ಲಿ ಕಳೆಯುವಂತಾಗಿದೆ. ತನಿಯಪ್ಪರಿಗೆ ಸೊಂಟದ ಭಾಗಕ್ಕೆ ತೀವ್ರ ಪೆಟ್ಟಾಗಿದೆ. ಹೀಗಾಗಿ, ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಇವರ ದುಡಿಮೆಯಿಂದಲೇ ಕುಟುಂಬ ಸಾಗುತ್ತಿತ್ತು. ಆದರೆ, ಇವರು ಹಾಸಿಗೆ ಹಿಡಿದಿದ್ದರಿಂದ ದಂಪತಿಗೆ ದಿಕ್ಕೇ ತೋಚದಂತಾಗಿದೆ. ಸದ್ಯ ಟ್ರಸ್ಟ್ ಈ ಸಹಾಯ ಮಾಡಿದ್ದು, ಇನ್ನಷ್ಟು ಹೃದಯವಂತರೂ ಈ ಬಡ ದಂಪತಿಯ ನೆರವಿಗೆ ಬರಬೇಕಾಗಿದೆ…

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!