Monday , October 22 2018
ಕೇಳ್ರಪ್ಪೋ ಕೇಳಿ
Home / Film News / ಕಲಾವಿದೆಯರಿಗೆ ಇಲ್ಲ ಭದ್ರತೆ…! : ಪಾಕಿಸ್ತಾನದಲ್ಲಿ ಗಂಡನಿಂದಲೇ ಗಾಯಕಿ, ನಟಿಯ ಹತ್ಯೆ…!

ಕಲಾವಿದೆಯರಿಗೆ ಇಲ್ಲ ಭದ್ರತೆ…! : ಪಾಕಿಸ್ತಾನದಲ್ಲಿ ಗಂಡನಿಂದಲೇ ಗಾಯಕಿ, ನಟಿಯ ಹತ್ಯೆ…!

ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಕಲಾವಿದೆಯರಿಗೆ ಭದ್ರತೆ ಇಲ್ವಾ…? ಇಂತಹದ್ದೊಂದು ಪ್ರಶ್ನೆ ಮತ್ತೆ ಉದ್ಭವಿಸಿದೆ. ಖ್ಯಾತ ಗಾಯಕಿಯೊಬ್ಬರ ಮೇಲೆ ಶೂಟೌಟ್ ನಡೆದಿದೆ. ಗಂಡನಿಂದಲೇ ಈ ಕೃತ್ಯ ನಡೆದಿದೆ. ಪಾಕಿಸ್ತಾನದ ಖ್ಯಾತ ಗಾಯಕಿ ಮತ್ತು ನಟಿ ರೇಷ್ಮಾ ಗಂಡನಿಂದಲೇ ಬಲಿಯಾದ ನತದೃಷ್ಟೆ. ಪಾಕಿಸ್ತಾನದ ಖೈಬರ್ ಪಖ್ತಾನ್ಖ್ವಾ ಪ್ರಾಂತ್ಯದಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ.

ಇನ್ನು, ರೇಷ್ಮಾ ಈತನ ನಾಲ್ಕನೇ ಹೆಂಡ್ತಿ ಎಂದು ಗೊತ್ತಾಗಿದ್ದು, ಇತ್ತೀಚೆಗೆ ಇವರು ತಮ್ಮ ಸಹೋದರನೊಂದಿಗೆ ವಾಸವಾಗಿದ್ದರು. ಗಂಡ ಹೆಂಡ್ತಿ ನಡುವೆ ವೈಮನಸ್ಸು ಇದ್ದ ಕಾರಣ ಇವರಿಬ್ಬರು ಬೇರೆ ಬೇರೆಯಾಗಿ ವಾಸವಾಗಿದ್ದರು ಎಂದು ಗೊತ್ತಾಗಿದೆ. ರೇಷ್ಮಾ ಅವರ ಮನೆಗೆ ನುಗ್ಗಿ ಆರೋಪಿ ಗಂಡ ಶೂಟ್ ಮಾಡಿದ್ದಾನೆ ಎಂದು ಸ್ಥಳೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ. ಸದ್ಯ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಪಾಕಿಸ್ತಾನದಲ್ಲಿ ಕಲಾವಿದೆಯರ ಮೇಲೆ ಇಂತಹ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಖೈಬರ್ ಪಖ್ತಾನ್ಖ್ವಾ ಪ್ರಾಂತ್ಯ ಒಂದರಲ್ಲೇ ಕಲಾವಿದೆಯ ಮೇಲೆ ನಡೆದ 15ನೇ ದಾಳಿ ಇದು…! ಇದೇ ವರ್ಷದ ಫೆಬ್ರವರಿಯಲ್ಲಿ ನಟಿ ಸನ್ಬುಲಾ ಎಂಬುವವರೂ ಗುಂಡಿನ ದಾಳಿಗೆ ಬಲಿಯಾಗಿದ್ದರು.

About sudina

Check Also

`ಅಮ್ಮ’ ಸಂಘಟನೆಯಿಂದ ದಿಲೀಪ್‍ಗೆ ಮತ್ತೆ ಔಟ್…

ತಿರುವನಂತಪುರಂ : ಮಲಯಾಳಂನ ಖ್ಯಾತ ನಟ ದಿಲೀಪ್ `ಅಮ್ಮ’ ಸಂಘಟನೆಯಿಂದ ಮತ್ತೆ ಹೊರಬಿದ್ದಿದ್ದಾರೆ. ಅಸೋಷಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ …

Leave a Reply

Your email address will not be published. Required fields are marked *

error: Content is protected !!