Monday , October 22 2018
ಕೇಳ್ರಪ್ಪೋ ಕೇಳಿ
Home / News NOW / ತಂದೆಗೆ ಹೊಡೆದಿದ್ದಕ್ಕೆ ಕೊನೆಗೂ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಗ…!

ತಂದೆಗೆ ಹೊಡೆದಿದ್ದಕ್ಕೆ ಕೊನೆಗೂ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಗ…!

ಮಂಗಳೂರು : ವೃದ್ಧ ತಂದೆಗೆ ಕಾಟ ಕೊಟ್ಟ ಮಗನಿಗೆ ಈಗ ತಪ್ಪಿನ ಅರಿವಾಗಿದೆ. ಎಲ್ಲರ ಸಮ್ಮುಖದಲ್ಲಿ ಅಡ್ಡ ಬಿದ್ದು ಈ ಪುತ್ರ ಕ್ಷಮೆ ಕೇಳಿದ್ದಾನೆ. ಇದು ನಡೆದಿರೋದು ಮಂಗಳೂರಿನಲ್ಲಿ. ಹೊಸಬೆಟ್ಟುವಿನ ರಾಘವೇಂದ್ರ ಮಠದಲ್ಲಿ ತೀರ್ಥ ಪ್ರಸಾದ ಕೊಡುತ್ತಾ ಎಲ್ಲರ ಮೆಚ್ಚುಗೆ ಮತ್ತು ಗೌರವಕ್ಕೆ ಪಾತ್ರವಾಗಿದ್ದ 80 ವರ್ಷದ ಯೋಗೀಶ್ ಭಟ್ ಅವರಿಗೆ ಅವರ ಮಗ ಸುರೇಶ್ ಭಟ್ ವಿಲನ್ ಆಗಿದ್ದ. ಹಣಕ್ಕಾಗಿ 38 ವರ್ಷದ ಸುರೇಶ್ ಭಟ್ ವೃದ್ಧ ತಂದೆಗೆ ಕೊಡಬಾರದ ಹಿಂಸೆ ಕೊಡುತ್ತಿದ್ದ. ಇತ್ತೀಚೆಗೆ ತಂದೆಗೆ ಈತ ಹೊಡೆಯುವ ದೃಶ್ಯ ವೈರಲ್ ಆಗಿತ್ತು. ಈತನ ಈ ಮೃಗೀಯ ವರ್ತನೆಗೆ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಈತನಿಗೆ ಶಿಕ್ಷೆ ಆಗಬೇಕೆಂದು ಹಲವರು ಒತ್ತಾಯ ಮಾಡಿದ್ದರು.

ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಹೀಗಾಗಿ, ಉಡುಪಿಯಲ್ಲಿರುವ ಸುರೇಶ್‍ನನ್ನು ಕರೆಸಿದ ಸುರತ್ಕಲ್ ಪೊಲೀಸರು ಎಲ್ಲರೆದು ತಂದೆಯ ಕ್ಷಮೆ ಕೇಳುವಂತೆ ಮಾಡಿದ್ದರು. ಜೊತೆಗೆ, ಒಂದೊಮ್ಮೆ ತಂದೆಗೆ ಹಿಂಸೆ ಕೊಡುವುದೇನಾದರೂ ಕಂಡು ಬಂದರೆ ಕಾನೂನು ಪ್ರಕಾರ ಕಠಿಣ ಶಿಕ್ಷೆಯನ್ನು ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು. ಇದಕ್ಕೆ ಒಪ್ಪಿಕೊಂಡಿರುವ ಸುರೇಶ್ ಇನ್ನು ತಂದೆಗೆ ಹಿಂಸೆ ಕೊಡುವುದಿಲ್ಲ. ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದಾನೆ.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!