Wednesday , March 20 2019
ಕೇಳ್ರಪ್ಪೋ ಕೇಳಿ
Home / Interval / ಮನೀಷಾ ಜೊತೆಗೆ ಪಟೇಕರ್ ಪ್ರೀತಿ…! ಮದುವೆ ಹೊಸ್ತಿಲಲ್ಲಿ ನಾನಾ ಬದುಕಿಗೆ ಬಂದರು ಮತ್ತೋರ್ವ ನಟಿ…!

ಮನೀಷಾ ಜೊತೆಗೆ ಪಟೇಕರ್ ಪ್ರೀತಿ…! ಮದುವೆ ಹೊಸ್ತಿಲಲ್ಲಿ ನಾನಾ ಬದುಕಿಗೆ ಬಂದರು ಮತ್ತೋರ್ವ ನಟಿ…!

ಮುಂಬೈ : ಬಾಲಿವುಡ್‍ನಲ್ಲಿ ಪ್ರೇಮಕತೆಗಳಿಗೇನು ಕೊರತೆ ಇಲ್ಲ. ಆದರೆ, ಹೀಗೆ ಶುರುವಾದ ಪ್ರೇಮಕತೆಗಳು ಬಹುತೇಕ ಅಂತ್ಯವಾಗಿದ್ದು ಗಲಾಟೆಯಲ್ಲಿಯೇ. ಈ ವಿಚಾರದಲ್ಲಿ ಬಾಲಿವುಡ್ ಸಿನಿಲೋಕ ಕಂಡ ಅಪ್ರತಿಮ ನಟ, ಹೃದಯವಂತ ನಾನಾ ಪಟೇಕರ್ ಕೂಡಾ ಹೊರತಾಗಿಲ್ಲ. ಇವರು ಕೂಡಾ ಮನೀಷಾ ಕೊಯಿರಾಲಾ ಜೊತೆಗೆ ಪ್ರೀತಿಗೆ ಬಿದ್ದಿದ್ದರು. ಆದರೆ, ಈ ಪ್ರೀತಿ ಜಾಸ್ತಿ ದಿನ ಉಳಿಯಲೇ ಇಲ್ಲ…! ಅದು 2996ರ ಸಂದರ್ಭ. ನಾನಾಗೆ ಅದಾಗಲೇ ಮದುವೆ ಆಗಿತ್ತು. ಈ ವೇಳೆ, ಅವರು `ಅಗ್ನಿ ಸಾಕ್ಷಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದರು. ಈ ಚಿತ್ರದ ನಾಯಕಿ ನೇಪಾಳಿ ಬೆಡಗಿ ಮನೀಷಾ ಕೊಯಿರಾಲಾ. ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಇಬ್ಬರೂ ಪ್ರೀತಿಗೆ ಬಿದ್ದಿದ್ದರು. ಡೇಟಿಂಗ್ ಕೂಡಾ ಶುರು ಮಾಡಿದ್ದರು. ಈ ಬಗ್ಗೆ ಇಡೀ ಚಿತ್ರರಂಗ ಮತ್ತು ಜನ ಕೂಡಾ ಮಾತನಾಡಿಕೊಳ್ಳುವಷ್ಟು ಮಟ್ಟಿಗೆ ಇವರಿಬ್ಬರ ಪ್ರೀತಿ ಸುದ್ದಿಯಾಗಿತ್ತು. ಅಗ್ನಿಸಾಕ್ಷಿ ಬಳಿಕ ಸಂಜಯ್ ಲೀಲಾ ಬನ್ಸಾಲಿ ಅವರ ಕಾಮೋಶಿ ಚಿತ್ರದಲ್ಲೂ ಇವರಿಬ್ಬರು ಜೊತೆಯಾಗಿದ್ದರು. ಈ ವೇಳೆಯಂತೂ ಇವರಿಬ್ಬರ ಪ್ರೀತಿಯ ವಿಚಾರ ಇನ್ನಷ್ಟು ವ್ಯಾಪಕವಾಗಿಯೇ ಹರಡಿತ್ತು. ಮನೀಷಾ ನಾನಾ ಮನೆಗೂ ಬಂದು ಹೋಗುತ್ತಿದ್ದರು. ತಾಯಿ, ಮಗನೊಂದಿಗೂ ಒಳ್ಳೆಯ ಬಾಂಧವ್ಯ ಹೊಂದಿದ್ದರಂತೆ. ಆದರೆ, ಹೀಗೆ ಶುರುವಾದ ಪ್ರೀತಿಯ ನಡುವೆ ನಂತರ ಜಗಳ ಶುರುವಾಗಿತ್ತು. ಕೆಲವೊಂದು ವಿಚಾರದಲ್ಲಿ ನಾನಾ ಹಾಕುತ್ತಿದ್ದ ಷರತ್ತುಗಳು ಮನೀಷಾಗೆ ಇಷ್ಟವಾಗುತ್ತಿರಲಿಲ್ಲ. ಹೀಗಾಗಿ, ಜಗಳ ಆಗುತ್ತಿತ್ತು. ಇನ್ನೊಂದ್ಕಡೆ ಮನೀಷಾ ಕೂಡಾ ನಾನಾ ವಿಚಾರದಲ್ಲಿ ತುಂಬಾ ಪೊಸೆಸಿವ್ ಆಗಿದ್ದರು. ನಾನಾ ಬೇರೆ ನಟಿಯರೊಂದಿಗೆ ಮಾತನಾಡುವುದು, ಖುಷಿಯಲ್ಲಿ ಇರೋದು ಮನೀಷಾಗೆ ಇಷ್ಟವಾಗುತ್ತಿರಲಿಲ್ಲ. ಹೀಗೆ, ಈ ಸಂಬಂಧದಲ್ಲಿ ಬಿರುಕುಂಟಾಗಲು ಇವೂ ಸೇರಿದಂತೆ ಹಲವು ಕಾರಣಗಳು ತಾನಾಗಿಯೇ ಸೃಷ್ಟಿಯಾಗಿದ್ದವು. ಅಷ್ಟರಲ್ಲೇ ಮದುವೆಯಾಗಿದ್ದ ನಾನಾ ಪತ್ನಿಯಿಂದಲೂ ದೂರವಾಗಿ ಬೇರೆಯಾಗಿ ವಾಸವಾಗಿದ್ದರು. ಆದರೆ, ಮನೀಷಾ ಜೊತೆಗಿನ ಪ್ರೀತಿಯಲ್ಲಿ ಬಿರುಕುಂಟಾಗಿದ್ದರಿಂದ ನಾನಾ ಕೊಯಿರಾಲಾರನ್ನು ಮದುವೆಯಾಗಲಿಲ್ಲ. ಈ ನಡುವೆ, ನಾನಾ ಬದುಕಿನಲ್ಲಿ ಮತ್ತೋರ್ವ ನಟಿ ಎಂಟ್ರಿ ಕೊಟ್ಟಿದ್ದರು. ಅವರೇ ಆಯೆಷಾ ಜುಲ್ಕಾ… ಆಯೆಷಾ ಜುಲ್ಕಾ ಮತ್ತು ನಾನಾ ತುಂಬಾ ಆಪ್ತವಾಗಿರುವುದನ್ನು ಮನೀಷಾ ಸ್ವತಃ ಕಂಡಿದ್ದರು. ಹೀಗಾಗಿ, ಆಯೆಷಾ ಮತ್ತು ಮನೀಷಾ ಅಕ್ಷರಶಃ ಜಗಳಕ್ಕೆ ನಿಂತಿದ್ದರು. ಮಾತಿನ ಸಮರ ಬಹಿರಂಗವಾಗಿಯೇ ನಡೆಯುತ್ತಿತ್ತು… ಅಲ್ಲಿಗೆ ಅಧಿಕೃತವಾಗಿಯೇ ಮನೀಷಾ ಮತ್ತು ನಾನಾ ಜೋಡಿ ದೂರವಾಯ್ತು. ದಿನಗಳು ಉರುಳಿದವು ಮನೀಷಾ ಬೇರೆ ಮದುವೆಯಾದರು. ವಿಚ್ಛೇದನ ಕೂಡಾ ಆಯಿತು. ಇದರ ನಡುವೆ, ಆಯೆಷಾ ಮತ್ತು ನಾನಾ ಲಿವಿಂಗ್ ಟುಗೇದರ್‍ನಲ್ಲಿದ್ದರು. ಹೀಗಾಗಿ, ಇವರಿಬ್ಬರ ಸಂಬಂಧವೂ ಸಾರ್ವಜನಿಕವಾಗಿ ಬಹಿರಂಗವಾಗಿತ್ತು… ಆದರೆ, ಈ ಸಂಬಂಧ ಕೂಡಾ ಜಾಸ್ತಿ ದಿನ ಉಳಿಯಲಿಲ್ಲ… ಈ ನಡುವೆ, ನಾನಾ ಮತ್ತೆ ತನ್ನ ಮೊದಲ ಪತ್ನಿಗೆ ಹತ್ತಿರವಾದರು. ಹಾಗಂತ, ನಾನಾ ಯಾವತ್ತೂ ಪತ್ನಿಯನ್ನು ಮರೆತಿರಲಿಲ್ಲ. ಅವರ ಬಗ್ಗೆ ಮೆಚ್ಚುಗೆ ಮಾತನ್ನೇ ಆಡುತ್ತಿದ್ದರು. ಪರಿಸ್ಥಿತಿ ದಂಪತಿ ನಡುವೆ ಬಿರುಕುಂಟು ಮಾಡಿತ್ತು. ಆದರೆ, ಈ ರೀತಿಯ ಏಳು ಬೀಳುಗಳ ಬಳಿಕ ನಾನಾ ಜೀವನ ಸರಿದಾರಿಯಲ್ಲಿ ಸಾಗುತ್ತಿದೆ. ಇದು ಹೀಗೆಯೇ ಮುಂದುವರಿದುಕೊಂಡು ಹೋಗಲಿ ಎಂಬುದು ಎಲ್ಲರ ಹಾರೈಕೆ ಕೂಡಾ…

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!