Monday , October 22 2018
ಕೇಳ್ರಪ್ಪೋ ಕೇಳಿ
Home / Film News / ಸೆಲ್ಫಿಗೆ ಮುಗಿಬಿದ್ದ ಫೀಮೇಲ್ ಫ್ಯಾನ್ಸ್… : ರಣವೀರ್ ಸ್ಥಿತಿ ಅಯ್ಯೋ ಪಾಪ… : ಇಲ್ಲಿದೆ ವೀಡಿಯೋ

ಸೆಲ್ಫಿಗೆ ಮುಗಿಬಿದ್ದ ಫೀಮೇಲ್ ಫ್ಯಾನ್ಸ್… : ರಣವೀರ್ ಸ್ಥಿತಿ ಅಯ್ಯೋ ಪಾಪ… : ಇಲ್ಲಿದೆ ವೀಡಿಯೋ

ಮುಂಬೈ : ಸೆಲ್ಫಿ ಅನ್ನೋದು ಈಗೊಂದು ಲೈಫ್‍ನ ಅವಿಭಾಜ್ಯ ಅಂಗವಾಗಿದೆ ಹೋಗಿದೆ. ಅದರಲ್ಲೂ ಸೆಲೆಬ್ರಿಟಿಗಳನ್ನು ಕಂಡರಂತೂ ಕೇಳೋದೇ ಬೇಡ. ಎಲ್ಲರೂ ಸೆಲ್ಫಿಗೆ ಮುಗಿಬೀಳ್ತಾರೆ. ಈಗ ಬಾಲಿವುಡ್ ನಟ ರಣಬೀರ್ ಸಿಂಗ್‍ಗೆ ಇಂತಹದ್ದೊಂದು ಅನುಭವ ಆಗಿದೆ. ಈ ಅನುಭವ ಬಹುಶಃ ರಣವೀರ್‍ಗೆ ಖುಷಿಗಿಂತ ಸಂಕಟ ಕೊಟ್ಟದ್ದೇ ಹೆಚ್ಚೇನೋ…

Ranveer Singh At JACK & JONES Store | Ranveer Singh Out For Shopping

A post shared by 🔥🔥 (@bollywood.loverss_) on


ರಣವೀರ್ ಅವರ ಈ ಸೆಲ್ಫಿ ವೀಡಿಯೋ ಈಗ ವೈರಲ್ ಆಗಿದೆ. ಅಭಿಮಾನಿಗಳ ಗುಂಪು ಅದರಲ್ಲೂ ಫೀಮೇಲ್ ಫ್ಯಾನ್ಸ್ ಹೆಚ್ಚಿರುವ ಗುಂಪು ರಣವೀರ್ ರನ್ನು ಮುತ್ತಿಕೊಂಡು ಕೊಡಬಾರದ ಹಿಂಸೆ ಕೊಟ್ಟಿದೆ. ನೂಕಾಟ, ತಳ್ಳಾಟವೇ ನಡೆದಿದೆ. ಇದರಲ್ಲಿ ರಣವೀರ್ ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೆಣಗಾಡುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತದೆ.


ಮುಂಬೈಯಲ್ಲಿ ಮಳಿಗೆಯೊಂದರ ಉದ್ಘಾಟನೆಗೆ ರಣವೀರ್ ಬಂದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಭಿಮಾನಿಗಳು ಸೇರಿದ್ದರಿಂದ ಇಲ್ಲಿ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು. ಸಾಧ್ಯವಾದಷ್ಟು ಮಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದ ರಣವೀರ್ ಬಳಿಕ ಕಾರಿನ ಮೇಲೆ ನಿಂತು ಅಭಿಮಾನಿಗಳಿಗೆ ಕೈ ಬೀಸಿ ಧನ್ಯವಾದವನ್ನು ತಿಳಿಸಿದರು.

About sudina

Check Also

`ಅಮ್ಮ’ ಸಂಘಟನೆಯಿಂದ ದಿಲೀಪ್‍ಗೆ ಮತ್ತೆ ಔಟ್…

ತಿರುವನಂತಪುರಂ : ಮಲಯಾಳಂನ ಖ್ಯಾತ ನಟ ದಿಲೀಪ್ `ಅಮ್ಮ’ ಸಂಘಟನೆಯಿಂದ ಮತ್ತೆ ಹೊರಬಿದ್ದಿದ್ದಾರೆ. ಅಸೋಷಿಯೇಷನ್ ಆಫ್ ಮಲಯಾಳಂ ಮೂವಿ ಆರ್ಟಿಸ್ಟ್ …

Leave a Reply

Your email address will not be published. Required fields are marked *

error: Content is protected !!