Wednesday , August 15 2018
ಕೇಳ್ರಪ್ಪೋ ಕೇಳಿ
Home / Film News / `ಗೀತಾ ಗೋವಿಂದಮ್’ ಗಾಗಿ 8 ತಿಂಗಳು ನಾಯಕಿಯನ್ನು ಹುಡುಕಿದ್ದರಂತೆ ಡೈರೆಕ್ಟರ್…!

`ಗೀತಾ ಗೋವಿಂದಮ್’ ಗಾಗಿ 8 ತಿಂಗಳು ನಾಯಕಿಯನ್ನು ಹುಡುಕಿದ್ದರಂತೆ ಡೈರೆಕ್ಟರ್…!

ಹೈದರಾಬಾದ್ : ಟಾಲಿವುಡ್‍ನಲ್ಲಿ ಈಗ `ಗೀತಾ ಗೋವಿಂದಂ’ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕನ್ನಡದ ಸುಂದರಿ ರಶ್ಮಿಕಾ ಮಂದಣ್ಣ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಈಗಾಗಲೇ ಟಾಲಿವುಡ್ ಸಿನಿಪ್ರಿಯರಿಗೆ ರಶ್ಮಿಕಾ ಹತ್ತಿರವಾಗಿದ್ದಾರೆ. ವಿಜಯ್ ದೇವರಕೊಂಡ ಕೂಡಾ ಗಮನ ಸೆಳೆದಿದ್ದಾರೆ. ಆದರೆ, ಇತ್ತೀಚಿಗೆ ಈ ಚಿತ್ರದ ಬಗ್ಗೆ ಇಂಟ್ರೆಸ್ಟಿಂಗ್ ವಿಷಯವನ್ನು ನಿರ್ದೇಶಕ ಪರಶುರಾಮ್ ಬಿಚ್ಚಿಟ್ಟಿದ್ದಾರೆ. ಪರಶುರಾಮ್ ಅವರು ಅತ್ಯಂತ ಸೂಕ್ಷ್ಮ ನಿರ್ದೇಶಕ. ಇವರು ಸೆಲೆಕ್ಟೆಡ್ ಸಿನೆಮಾ ಮಾಡಿ ಗಮನ ಸೆಳೆದವರು. ಇದೇ ಸೂತ್ರದಿಂದ ಇವರು ಯಶಸ್ಸನ್ನೂ ಕಂಡವರು. ಈ `ಗೀತಾ ಗೋವಿಂದಂ’ ವಿಚಾರದಲ್ಲೂ ಪರಶುರಾಮ್ ತುಂಬಾ ಸೂಕ್ಷ್ಮ ಮತ್ತು ಜಾಗರೂಕತೆಯ ಹೆಜ್ಜೆಯನ್ನಿಟ್ಟಿದ್ದಾರೆ. `ಶ್ರೀಮಸ್ತು ಶುಭಮಸ್ತು’ ಚಿತ್ರದ ಮೂರು ವರ್ಷದ ಬಳಿಕ ಪರಶುರಾಮ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಯಾಕೆ ಹೀಗೆ ಎಂದು ಕೇಳಿದ್ದಕ್ಕೆ ಅವರು ಹೇಳಿದ್ದು ಇಷ್ಟು… `ನಾನು ನಿರ್ಮಾಪಕ ಅಲ್ಲು ಅರವಿಂದ್ ಅವರ ಬಳಿ ಈ ಕತೆ ಹೇಳಿದಾಗ ಅವರು ತಕ್ಷಣ ಒಪ್ಪಿಕೊಂಡರು. ಆದರೆ, ಈ ಚಿತ್ರದಲ್ಲಿ ನಾಯಕಿಯೇ ಪ್ರಧಾನ. ಹೀಗಾಗಿ, ಈ ಪಾತ್ರಕ್ಕೆ ಹೊಂದುವಂತಹ ನಾಯಕಿಯನ್ನು ಹುಡುಕುತ್ತಿದ್ದೆವು. ಬರೋಬ್ಬರಿ 8 ತಿಂಗಳ ಹುಡುಕಾಟ ನಡೆಸಲಾಗಿತ್ತು’ ಎಂದು ಇವರು ಹೇಳಿದ್ದಾರೆ. ಹೀಗೆ ನಡೆಸಿದ ಹುಡುಕಾಟದಲ್ಲಿ ರಶ್ಮಿಕಾ ಮಂದಣ್ಣ ಅವಕಾಶ ಪಡೆದು ಚಿತ್ರ ಕೂಡಾ ಸಿದ್ಧವಾಗಿದೆ… ವಿಜಯ್ `ಅರ್ಜುನ್ ರೆಡ್ಡಿ’ ಚಿತ್ರ ಮಾಡುವುದಕ್ಕಿಂತಲೂ ಮೊದಲೇ ಇವರಿಂದ ಚಿತ್ರಕ್ಕೆ ಸಹಿ ಪಡೆಯಲಾಗಿತ್ತಂತೆ. ಆದರೆ, ನಾಯಕಿಯ ಹುಡುಕಾಟದ ಕಾರಣದಿಂದ ಈ ಸಿನೆಮಾ ಶುರುವಾಗುವುದು ತಡವಾಗಿತ್ತಂತೆ.

About sudina

Check Also

ಫಿಕ್ಸ್ ಆಯ್ತು ರಣವೀರ್ ದೀಪಿಕಾ ಮದುವೆ ಡೇಟ್…

ಮುಂಬೈ : ಬಾಲಿವುಡ್​ನ ಮತ್ತೊಂದು ಪ್ರೇಮಪತಂಗಗಳು ದಾಂಪತ್ಯಕ್ಕೆ ಕಾಲಿಡುವ ಕ್ಷಣ ಬಂದಿದೆ. ಇಷ್ಟು ದಿನ ಗಾಸಿಪ್ ಕಾಲಂಗೆ ವಸ್ತುವಾಗಿದ್ದ ರಣವೀರ್ …

Leave a Reply

Your email address will not be published. Required fields are marked *

error: Content is protected !!