Wednesday , August 15 2018
ಕೇಳ್ರಪ್ಪೋ ಕೇಳಿ
Home / News NOW / ಮಂಗಳೂರಿನಿಂದ 10 ಗಂಟೆ ತಡವಾಗಿ ಟೇಕಾಫ್ ಆದ ಸ್ಪೈಸ್ ಜೆಟ್…!

ಮಂಗಳೂರಿನಿಂದ 10 ಗಂಟೆ ತಡವಾಗಿ ಟೇಕಾಫ್ ಆದ ಸ್ಪೈಸ್ ಜೆಟ್…!

ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೋಗಬೇಕಾಗಿದ್ದ ಸ್ಪೈಸ್ ಜೆಟ್ ವಿಮಾನ 10 ಗಂಟೆ ತಡವಾಗಿ ಪ್ರಯಾಣ ಬೆಳೆಸಿದೆ. ಇದರಿಂದ ಪ್ರಯಾಣಿಕರು ತೀವ್ರ ಕಿರಿಕಿರಿ ಅನುಭವಿಸಿದ್ದಾರೆ. ನಿನ್ನೆ ಮಧ್ಯರಾತ್ರಿ 12.30ಕ್ಕೆ ಈ ಫ್ಲೈಟ್ ಟೇಕಾಫ್ ಆಗಬೇಕಾಗಿತ್ತು, ಆದರೆ, ನಿಗದಿತ ಸಮಯಕ್ಕೆ ವಿಮಾನ ಪ್ರಯಾಣ ಆರಂಭಿಸಿರಲಿಲ್ಲ.

ಹೀಗಾಗಿ, ವಿಮಾನದ ಸಿಬ್ಬಂದಿ ಪ್ರಯಾಣಿಕರನ್ನು ಪಕ್ಕದಲ್ಲೇ ಇದ್ದ ಹೊಟೇಲ್‍ಗೆ ಶಿಫ್ಟ್ ಮಾಡಿದ್ದರು. ಇದಾದ ಬಳಿಕ ಇವತ್ತು ಬೆಳಗ್ಗೆ 9.30ಕ್ಕೆ ಈ ವಿಮಾನ ಟೇಕಾಫ್ ಆಗಿದೆ. ಆದರೆ, ವಿಮಾನದ 10 ಗಂಟೆ ವಿಳಂಬ ಪ್ರಯಾಣಕ್ಕೆ ಕಾರಣ ಏನು ಎಂಬುದನ್ನು ವಿಮಾನ ಸಂಸ್ಥೆ ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ, ಪ್ರಯಾಣಿಕರು ವಿಮಾನಯಾನ ಸಂಸ್ಥೆಗೆ ಹಿಡಿಶಾಪ ಹಾಕಿದ್ದಾರೆ.

About sudina

Check Also

ಮೈಸೂರು ಹಾಸ್ಟೆಲ್‍ಗೆ ನುಗ್ಗಿ ಕಾಟ : ಬಂಟ್ವಾಳದಲ್ಲಿ ಆರೋಪಿ ಬಂಧನ

ಮಂಗಳೂರು : ಜುಲೈ 20 ರಂದು ಮೈಸೂರಿನ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಆರ್.ಆಸ್ಪತ್ರೆ ಆವರಣದಲ್ಲಿದ್ದ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ನುಗ್ಗಿ …

Leave a Reply

Your email address will not be published. Required fields are marked *

error: Content is protected !!