Sunday , December 16 2018
ಕೇಳ್ರಪ್ಪೋ ಕೇಳಿ
Home / Film News / ಕೆಜಿಎಫ್ ಶೂಟಿಂಗ್ ಯೂನಿಟ್‍ನಲ್ಲಿ ಮನೆಯಲ್ಲಿದ್ದ ಅನುಭವ : ಮಿಲ್ಕಿ ಬ್ಯೂಟಿ ಸಂತೃಪ್ತಿ

ಕೆಜಿಎಫ್ ಶೂಟಿಂಗ್ ಯೂನಿಟ್‍ನಲ್ಲಿ ಮನೆಯಲ್ಲಿದ್ದ ಅನುಭವ : ಮಿಲ್ಕಿ ಬ್ಯೂಟಿ ಸಂತೃಪ್ತಿ

ಬೆಂಗಳೂರು : ಮಿಲ್ಕಿ ಬ್ಯೂಟಿ ತಮನ್ನಾ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಸ್ಪೆಷಲ್ ಸಾಂಗ್‍ನಲ್ಲಿ ಹೆಜ್ಜೆ ಹಾಕಿದ್ದಾರೆ. ಕೆಜಿಎಫ್ ಚಿತ್ರದ ಸ್ಪೆಷಲ್ ಸಾಂಗ್‍ನಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ಶೂಟಿಂಗ್ ಮುಗಿಸಿದ್ದಾರೆ. ಅಲ್ಲದೆ, ಶೂಟಿಂಗ್ ಯೂನಿಟ್ ಜೊತೆಗಿನ ಸುಂದರ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ತಮನ್ನಾ, ಯಶ್ ಅವರೊಂದಿಗಿನ ಹಾಡಿನ ಶೂಟಿಂಗ್‍ನಲ್ಲಿ ಒಳ್ಳೆಯ ಅನುಭವವಾಗಿದೆ. ಇಡೀ ಶೂಟಿಂಗ್ ಯೂನಿಟ್‍ನಲ್ಲಿ ಒಂದು ಮನೆಯ ವಾತಾವರಣ ಇತ್ತು. ಇದಕ್ಕೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ. ಜೊತೆಗೆ, ತೆಲುಗು, ತಮಿಳು, ಕನ್ನಡ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವನ್ನು ಎಲ್ಲರೂ ನೋಡಬೇಕು ಎಂದೂ ಮನವಿ ಮಾಡಿಕೊಂಡಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!