ಹೈದರಾಬಾದ್ : ಬಾಲಿವುಡ್ ನಟ ವಿವೇಕ್ ಓಬೇರಾಯ್ ಈಗ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜಾಸ್ತಿ ಕ್ರಿಯಾಶೀಲರಾಗುತ್ತಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಶಿವಣ್ಣ ಜೊತೆಗಿನ ರುಸ್ತುಂ ಚಿತ್ರದಲ್ಲಿ ಅಭಿನಯಿಸುತ್ತಿರುವ ವಿವೇಕ್ ತೆಲುಗು ಚಿತ್ರರಂಗದಲ್ಲೂ ಸಕ್ರಿಯರಾಗಿದ್ದಾರೆ. ರಾಮ್ಗೋಪಾಲ್ ವರ್ಮಾರ ರಕ್ತಚರಿತ್ರಾ ಚಿತ್ರದ ಮೂಲಕ ವಿವೇಕ್ ಟಾಲಿವುಡ್ಗೆ ಪರಿಚಯವಾಗಿದ್ದರು. ಇದಾದ ಬಳಿಕ ಇವರು ಇಲ್ಲಿನ ಖಳನಾಯಕರಲ್ಲಿ ಒಬ್ಬರಾಗಿ ಹೆಸರು ಗಳಿಸಿದ್ದರು. ನಂತರ ರಾಮ್ಚರಣ್ ಅಭಿನಯದ `ಬೋಯಾಪತಿ ಶ್ರೀನಿ’ ಚಿತ್ರದಲ್ಲೂ ವಿವೇಕ್ ಕಾಣಿಸಿಕೊಂಡಿದ್ದು, ಇದರಲ್ಲಿ 1.25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಆದರೆ, ಈಗ ಬಂದಿರುವ ಇನ್ನೊಂದು ಸುದ್ದಿ ಏನಪ್ಪಾ ಅಂದರೆ ವಿವೇಕ್ ತಮ್ಮ ಸಂಭಾವನೆಯನ್ನು ಇನ್ನಷ್ಟು ಹೆಚ್ಚು ಮಾಡಿದ್ದಾರೆ. ನಾಗಾರ್ಜುನ ಮತ್ತು ನಾನಿ ಅಭಿನಯದ ಮಲ್ಟಿ ಸ್ಟಾರ್ ಚಿತ್ರದ ಟೀಮ್ ವಿವೇಕ್ರನ್ನು ಸಂಪರ್ಕಿಸಿದೆ. ಈ ಸಂದರ್ಭದಲ್ಲಿ ಇವರು ತಮ್ಮ ಸಂಭಾವನೆಯನ್ನು 2.5 ಕೋಟಿಗೆ ಹೆಚ್ಚಿಸಿಕೊಂಡಿದ್ದಾಗಿ ಗೊತ್ತಾಗಿದೆ. ಈ ಸಂಭಾವನೆಯನ್ನು ಕೇಳಿಯೇ ನಿರ್ಮಾತೃಗಳು ಸುಸ್ತಾಗಿದ್ದಾರಂತೆ. ಹೀಗಾಗಿ, ಇವರನ್ನು ಚಿತ್ರದಲ್ಲಿ ನಟಿಸುವಂತೆ ಕೇಳುವ ಐಡಿಯಾವನ್ನೇ ಕೈ ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಹೊಸ ಖಳನಟನ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆಯಂತೆ. ಹೀಗೊಂದು ಸುದ್ದಿ ಈಗ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ, ಇದು ಎಷ್ಟು ನಿಜ ಎಷ್ಟು ಸುಳ್ಳು ಎಂಬುದನ್ನು ಸ್ವತಃ ವಿವೇಕ್ ಮತ್ತು ಚಿತ್ರತಂಡವೇ ಹೇಳಬೇಕಾಗಿದೆ..