Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / `ಒಂದೇ ಒಂದು ಪೈಸೆ ಸಂಭಾವನೆ ಬೇಡ. ಬಂದ ಲಾಭದಲ್ಲಿ ಪರ್ಸಂಟೇಜ್ ಸಾಕು’

`ಒಂದೇ ಒಂದು ಪೈಸೆ ಸಂಭಾವನೆ ಬೇಡ. ಬಂದ ಲಾಭದಲ್ಲಿ ಪರ್ಸಂಟೇಜ್ ಸಾಕು’

ಮುಂಬೈ : ಈಗೀಗ ನಾಯಕರ ಸಂಭಾವನೆಯದ್ದೇ ದೊಡ್ಡ ಸಮಸ್ಯೆ. ಬಹುತೇಕ ನಾಯಕ ನಟರ ಸಂಭಾವನೆಯ ಕಾರಣದಿಂದಲೇ ಹಲವು ಪ್ರಾಜೆಕ್ಟ್‍ಗಳು ನಿಂತಂತಹ ಉದಾಹರಣೆಗಳೂ ಇವೆ. ಅದೂ ಅಲ್ಲದೆ, ಸಕ್ಸಸ್ ರೇಟ್ ಕೂಡಾ ಈಗೀಗ ಕಡಿಮೆ ಆಗುತ್ತಿದೆ. ಸ್ಟಾರ್ ನಟರಾದ ಚಿರಂಜೀವಿ, ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್‍ರಂತವರು ಸಂಭಾವನೆಯ ಜೊತೆಗೆ ಅವರ ಹೆಸರಿನ ಕಾರಣಕ್ಕೆ ಚಿತ್ರ ಹಿಟ್ ಮಾಡಿ ಕೊಡುವುದರಿಂದ ಪರ್ಸಂಟೇಜ್ ಕೂಡಾ ಪಡೆಯುತ್ತಿದ್ದಾರೆ. ಅದೂ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ನವನಟರೇ 20-30 ಕೋಟಿಯಷ್ಟು ಸಂಭಾವನೆ ಪಡೆಯುವುದೂ ಇದೆ… ಇದರ ನಡುವೆ, ಸಂಭಾವನೆ ಪಡೆಯದೇ ಕೇವಲ ಬಂದ ಲಾಭದಲ್ಲಿ ಪರ್ಸಂಟೇಜ್ ಪಡೆಯುವ ನಟರೂ ಇದ್ದಾರೆ. ಬಾಲಿವುಡ್ ನಟ ಅಮೀರ್ ಖಾನ್ ಅವರಂತೂ ಈಗೀಗ ಒಂದೇ ಒಂದು ಪೈಸೆ ಹಣವನ್ನೂ ಸಂಭಾವನೆ ರೂಪದಲ್ಲಿ ಪಡೆಯುತ್ತಿಲ್ಲ. ಇವರ ಮೊದಲ ಆದ್ಯತೆ ನಿರ್ಮಾಪಕ ಸೇಫ್ ಆಗುವುದು. ಚಿತ್ರದ ಜಾಹೀರಾತು, ಪ್ರಚಾರ, ಬಜೆಟ್ ಸೇರಿದಂತೆ ಹಾಕಿದ ಹಣ ವಾಪಸ್ ಬಂದ ಬಳಿಕ ಅಮೀರ್ ಹಣ ಪಡೆಯುತ್ತಾರೆ. ನಿರ್ಮಾಪಕ ಸೇಫ್ ಝೋನ್‍ಗೆ ಬಂದ ಬಳಿಕ ಅಮೀರ್ ಬಂದ ಲಾಭದಲ್ಲಿ ಒಂದಷ್ಟು ಪಾಲು ಪರ್ಸಂಟೇಜ್ ಪಡೆಯುತ್ತಾರೆ. ಇದರಿಂದ ಒಂದೊಮ್ಮೆ ಚಿತ್ರ ಸೋತರೂ ನಿರ್ಮಾಪಕರಿಗೆ ದೊಡ್ಡ ಹೊರೆಯಾಗುವುದಿಲ್ಲ.

ಸದ್ಯದ ಮಾಹಿತಿಯನ್ನೇ ನಂಬುವುದಾದರೆ ಅಮೀರ್ ಖಾನ್ ಸುಮಾರು 80:20ರ ಅನುಪಾತದಲ್ಲಿ ಪರ್ಸಂಟೇಜ್ ಪಡೆಯುತ್ತಾರೆ. ಅಂದರೆ, ಒಂದು ಚಿತ್ರ 100 ಕೋಟಿ ಲಾಭ ಗಳಿಸಿದರೆ ಸುಮಾರು 80 ಕೋಟಿಯಷ್ಟು ಹಣ ಅದು ಅಮೀರ್ ಪಾಲಾಗುತ್ತದೆ. ಬಾಕಿ ಉಳಿದ ಮೊತ್ತ ನಿರ್ಮಾಪಕರಿಗೆ. ಹೀಗಾಗಿ, ನಿರ್ಮಾಪಕರು ಅಷ್ಟಾಗಿ ಕಷ್ಟಕ್ಕೆ ಸಿಲುಕುವುದಿಲ್ಲ. ಅಮೀರ್ ಫಾಲೋ ಮಾಡುತ್ತಿರುವ ಈ ದಾರಿಗೆ ಹಲವು ನಿರ್ಮಾಪಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!