Monday , October 22 2018
ಕೇಳ್ರಪ್ಪೋ ಕೇಳಿ
Home / News NOW / ಶಾರ್ಜಾ ಏರ್ ಪೋರ್ಟ್‍ನಲ್ಲಿ ಮಹಿಳೆಯರಿಗಾಗಿ ಪಿಂಕ್ ಪಾರ್ಕಿಂಗ್ ಪ್ಲೇಸ್…

ಶಾರ್ಜಾ ಏರ್ ಪೋರ್ಟ್‍ನಲ್ಲಿ ಮಹಿಳೆಯರಿಗಾಗಿ ಪಿಂಕ್ ಪಾರ್ಕಿಂಗ್ ಪ್ಲೇಸ್…

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ
ಶಾರ್ಜಾ : ಮಹಿಳೆಯರ ರಕ್ಷಣೆ ಮತ್ತು ಗುಣಮಟ್ಟದ ಸೇವೆ ಒದಗಿಸುವ ಸಲುವಾಗಿ ಶಾರ್ಜಾ ವಿಮಾನ ನಿಲ್ದಾಣ ಮಹತ್ವದ ಹೆಜ್ಜೆ ಇಟ್ಟಿದೆ. ಇಲ್ಲಿ ಮಹಿಳೆಯರಿಗಾಗಿಯೇ ಪಿಂಕ್ ಪಾರ್ಕಿಂಗ್ ಪ್ಲೇಸ್ ನಿಗದಿ ಮಾಡಲಾಗಿದೆ. ಮಹಿಳೆಯರ ಅನುಕೂಲಕ್ಕೆಂದು ಈ ಕ್ರಮ ಕೈಗೊಳ್ಳಲಾಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಹಿಳಾ ಉದ್ಯೋಗಿಗಳು, ಪ್ರಯಾಣಿಕರು, ಗ್ರಾಹಕರಿಗಾಗಿಯೇ ಈ ಪಾರ್ಕಿಂಗ್ ಜಾಗವನ್ನು ನಿಗದಿ ಮಾಡಲಾಗಿದೆ.


ಇನ್ನು, ಅಬುದಾಭಿಯಲ್ಲೂ ವಿವಿಧ ಕಡೆಗಳಲ್ಲಿ ಇಂತಹ ಪಿಂಕ್ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. 2016ರರಿಂದ ಇಲ್ಲಿ ಸುಮಾರು 182 ಇಂತಹ ಪಿಂಕ್ ಪಾರ್ಕಿಂಗ್ ಪ್ಲೇಸ್‍ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಮಹಿಳೆಯರಿಗೆ ಬೇಕಾದಂತಹ ಭದ್ರತಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

About sudina

Check Also

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ …

Leave a Reply

Your email address will not be published. Required fields are marked *

error: Content is protected !!