Sunday , February 17 2019
ಕೇಳ್ರಪ್ಪೋ ಕೇಳಿ
Home / Sudina Special / ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ

ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ ಶುರುವಾಗಿದೆ. ಅಬುದಾಭಿಯಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣವಾಗುತ್ತಿದ್ದು, ಇದರ ಸಿದ್ಧತೆ ಕೂಡಾ ಗರಿಗೆದರಿದೆ. ಇದು ಒಂದು ಸಾಧನೆಯ ಮೈಲುಗಲ್ಲು ಕೂಡಾ ಹೌದು. ಮಂದಿರ್ ಲಿಮಿಡೆಟ್ ಹಾಗೂ ಸ್ವಾಮಿ ನಾರಾಯಣ ಸಂಸ್ಥಾ ಸಹಯೋಗದಲ್ಲಿ ಈ ಬೃಹತ್ ಮಂದಿರ ನಿರ್ಮಾಣವಾಗಲಿದೆ. ಇನ್ನು, ಈ ದೇವಸ್ಥಾನದ ನಿರ್ಮಾಣದ ಬಗೆಗಿನ ಮಾತುಕತೆಯೂ ನಡೆದಿದ್ದು, ಸಿಂಗಾಪುರ ಮೂಲದ ವಾಸ್ತುಶಿಲ್ಪ ಮತ್ತು ನಿರ್ಮಾಣ ಸಂಸ್ಥೆಗೆ ಈ ದೇಗುಲದ ನಿರ್ಮಾಣದ ಜವಾಬ್ದಾರಿ ವಹಿಸಲಾಗಿದೆ. ಈ ಬಗೆಗಿನ ಒಪ್ಪಂದಕ್ಕೂ ಸಹಿ ಬಿದ್ದಿದೆ.ಅಬುಧಾನಿಯಲ್ಲಿ ದೇವಾಲಯ ನಿರ್ಮಾಣ ಬಗೆಗಿನ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಯುಎಇನಲ್ಲಿರುವ ಭಾರತೀಯ ರಾಯಭಾರಿ ನವದೀಪ್ ಸಿಂಗ್ ಸೂರಿ ಮತ್ತು ಸಿಂಗಾಪುರದ ರಾಯಭಾರಿ ಸ್ಯಾಮ್ಯುವೆಲ್ ಟಾನ್ ಚೇ ತ್ಸೇ ಕೂಡಾ ಉಪಸ್ಥಿತರಿದ್ದರು. ಮಂದಿರ್ ಲಿಮಿಟೆಡ್‍ನ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ ಮತ್ತು ದೇವಾಲಯ ನಿರ್ಮಾಣದ ಜವಾಬ್ದಾರಿ ಹೊತ್ತ ಆರ್‍ಎಸ್‍ಪಿ ಅರ್ಕಿಟೆಕ್ಚರ್ಸ್‍ನ ನಿರ್ದೇಶಕರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸೌಹಾರ್ದತೆ, ಶಾಂತಿ, ಸಹಜೀವನದ ದ್ಯೋತಕವಾಗಿ ಈ ಬೃಹತ್ ದೇಗುಲ ಸಂಯುಕ್ತ ಅರಬ್ ರಾಷ್ಟ್ರದಲ್ಲಿ ನಿರ್ಮಾಣವಾಗುತ್ತಿದೆ. ದೇಗುಲ ನಿರ್ಮಾಣಕ್ಕೆ ರಾಜಸ್ಥಾನದ ವಿಶೇಷ ಕಲ್ಲು ಮತ್ತು ಬಿಳಿಯ ಮಾರ್ಬಲ್‍ಗಳನ್ನು ಬಳಸಲಾಗುತ್ತಿದೆ ಎಂದು ಗೊತ್ತಾಗಿದೆ. ಇನ್ನು, ದೇಗುಲದ ಆವರಣದಲ್ಲಿ ಮಕ್ಕಳಿಗೆ ಆಡಲು ಜಾಗ, ವಸ್ತು ಪ್ರದರ್ಶನಕ್ಕೆ ಸ್ಥಳಾವಕಾಶ, ಪ್ರಾರ್ಥನೆಗೆ ವಿವಿಧ ಹಾಲ್, ಸಸ್ಯಾಹಾರಿ ಆಹಾರ ಮಳಿಗೆ ಸೇರಿದಂತೆ ಹಲವು ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

About sudina

Check Also

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, …

Leave a Reply

Your email address will not be published. Required fields are marked *

error: Content is protected !!