Wednesday , March 20 2019
ಕೇಳ್ರಪ್ಪೋ ಕೇಳಿ
Home / Film News / ಶಿವಣ್ಣ ಜೊತೆ ನಟಿಸುವುದೇ ಒಂದು ದೊಡ್ಡ ಗೌರವ : ವಿವೇಕ್ ಒಬೇರಾಯ್

ಶಿವಣ್ಣ ಜೊತೆ ನಟಿಸುವುದೇ ಒಂದು ದೊಡ್ಡ ಗೌರವ : ವಿವೇಕ್ ಒಬೇರಾಯ್

ಬೆಂಗಳೂರು : ಬಾಲಿವುಡ್ ನಟ ವಿವೇಕ್ ಒಬೇರಾಯ್ ಕನ್ನಡದ `ರುಸ್ತುಂ’ ಚಿತ್ರದಲ್ಲಿ ನಟಿಸುವುದು ಹಳೇ ಸುದ್ದಿ. ಈಗಾಗಲೇ ವಿವೇಕ್ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದಾರೆ. ಅಲ್ಲದೆ, ಶೂಟಿಂಗ್ ಸೆಟ್‍ನಲ್ಲಿ ಖುಷಿಯಿಂದಲೇ ಕಳೆದಿದ್ದಾರೆ. ಈ ಖುಷಿಯ ಸಂದರ್ಭವನ್ನು ವಿವೇಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಇಡೀ ಚಿತ್ರ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿವೇಕ್, ಶಿವಣ್ಣ ಜೊತೆ ತೆರೆ ಹಂಚಿಕೊಳ್ಳುವುದೇ ಒಂದು ದೊಡ್ಡ ಗೌರವ ಎಂದೂ ಹೇಳಿಕೊಂಡಿದ್ದಾರೆ.


`ನಾನು ಚಿಕ್ಕಂದಿನಿಂದ ಶಿವಣ್ಣರನ್ನು ಬಲ್ಲೆ. ಇಂತಹ ಮಹಾನ್ ನಟನ ಜೊತೆ ನಟಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನನ್ನದು ಅತಿಥಿ ಪಾತ್ರವಾದರೂ ಆ ಪಾತ್ರ ತುಂಬಾ ಚೆನ್ನಾಗಿದೆ. ಪ್ರತಿಭಾವಂತರ ತಂಡದೊಂದಿಗೆ ಕೆಲಸ ಮಾಡಿದ ಖುಷಿ ನನ್ನದು’ ಎಂದು ವಿವೇಕ್ ಹೇಳಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಶೃದ್ಧಾ ಶ್ರೀನಾಥ್ ಶಿವರಾಜ್‍ಕುಮಾರ್ ಅವರಿಗೆ ನಾಯಕಿಯಾಗಿದ್ದಾರೆ. ಇನ್ನು, ವಿವೇಕ್ ಒಬೇರಾಯ್‍ಗೆ ರಚಿತಾ ರಾಮ್ ಜೋಡಿಯಾಗಿ ಮಿಂಚುತ್ತಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!