Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ವಿಮಾನದಲ್ಲಿ ಬಾಲಕ ಅಸ್ವಸ್ಥ : ಟೇಕಾಫ್ ಆದ ಒಂದೇ ಗಂಟೆಯಲ್ಲಿ ಮತ್ತೆ ಬಜ್ಪೆಯಲ್ಲಿ ಇಳಿದ ಫ್ಲೈಟ್

ವಿಮಾನದಲ್ಲಿ ಬಾಲಕ ಅಸ್ವಸ್ಥ : ಟೇಕಾಫ್ ಆದ ಒಂದೇ ಗಂಟೆಯಲ್ಲಿ ಮತ್ತೆ ಬಜ್ಪೆಯಲ್ಲಿ ಇಳಿದ ಫ್ಲೈಟ್

ಮಂಗಳೂರು : ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಹೊರಟ್ಟಿದ್ದ ಜೆಟ್ ಏರ್‍ವೇಸ್ ಫ್ಲೈಟ್ ಪ್ರಯಾಣ ಆರಂಭಿಸಿದ ಒಂದೇ ಗಂಟೆಯಲ್ಲಿ ಮತ್ತೆ ವಿಮಾನ ನಿಲ್ದಾಣಕ್ಕೆ ಬಂದ ಘಟನೆ ಸೋಮವಾರ ನಡೆದಿದೆ. ಪ್ರಯಾಣದ ವೇಳೆ ಬಾಲಕ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಫ್ಲೈಟ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೆ ಇಳಿದಿದೆ.

ಬೆಳಗ್ಗೆ 4.30ಕ್ಕೆ ಈ ಫ್ಲೈಟ್ ಅಬುಧಾಬಿಗೆ ಪ್ರಯಾಣ ಬೆಳೆಸಿತ್ತು. ಈ ವೇಳೆ, ಬಾಲಕನೊಬ್ಬ ತೀವ್ರ ಅಸ್ವಸ್ಥಗೊಂಡಿದ್ದ. ಹೀಗಾಗಿ, ಪ್ಲೈಲಟ್ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಸಿದ್ದರು. ಸುಮಾರು 6.30ಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ತಕ್ಷಣ ಆಂಬ್ಯುಲೆನ್ಸ್ ಮೂಲಕ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ 7 ಗಂಟೆಗೆ ವಿಮಾನ ಮತ್ತೆ ಅಬುಧಾಬಿಗೆ ಪ್ರಯಾಣ ಆರಂಭಿಸಿತ್ತು. ಇನ್ನು, ಬಾಲಕನ ಅಸ್ವಸ್ಥೆಗೆ ಕಾರಣ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಜೆಟ್ ಏರ್‍ವೇಸ್ ಕೊಟ್ಟಿಲ್ಲ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!