Wednesday , January 23 2019
ಕೇಳ್ರಪ್ಪೋ ಕೇಳಿ
Home / Film News / ರಿಲೀಸ್‍ಗಿಂತ ಮುಂಚೆ ಸಿನಿಮಾ ಲೀಕ್ ಆದ್ರೆ ಒಳ್ಳೆದಾ…? : ಹೌದು ಅಂತಾರೆ ಟಾಲಿವುಡ್‍ನ ಕೆಲವರು…!

ರಿಲೀಸ್‍ಗಿಂತ ಮುಂಚೆ ಸಿನಿಮಾ ಲೀಕ್ ಆದ್ರೆ ಒಳ್ಳೆದಾ…? : ಹೌದು ಅಂತಾರೆ ಟಾಲಿವುಡ್‍ನ ಕೆಲವರು…!

ಹೈದರಾಬಾದ್ : ಸಿನೆಮಾಗಳು ಪೈರೆಸಿಗೆ ತುತ್ತಾಗುವುದು ನಮ್ಮಲ್ಲಿ ಹೊಸತೇನಲ್ಲ. ರಿಲೀಸ್‍ಗಿಂತ ಮುಂಚೆಗೇ ಈಗೀಗ ಸಿನೆಮಾಗಳು ಲೀಕ್ ಆಗಿ ಗದ್ದಲ ಎಬ್ಬಿಸುತ್ತವೆ. ಈಗ ಟಾಲಿವುಡ್‍ನ ಬಹುನಿರೀಕ್ಷಿತ `ಗೀತಾ ಗೋವಿಂದಂ’ಗೂ ಈಗ ಇದೇ ಸ್ಥಿತಿ ಎದುರಾಗಿದೆ. ಈ ಚಿತ್ರದ ಒಂದಷ್ಟು ಕ್ಲಿಪಿಂಗ್ಸ್ ಆನ್‍ಲೈನ್‍ನಲ್ಲಿ ಹರಿದಾಡುತ್ತಿವೆ. ಈ ಸಂಬಂಧ ಓರ್ವನನ್ನು ಪೊಲೀಸ್ರು ಬಂಧಿಸಿಯೂ ಆಗಿದೆ.

ಸಿನೆಮಾ ಬಿಡುಗಡೆಗೆ ಮುನ್ನವೇ ಹೀಗೆ ಲೀಕ್ ಆದರೆ ಅದು ಚಿತ್ರದ ಭವಿಷ್ಯದ ಮೇಲೆ ಹೊಡೆತ ತಂದೇ ತರುತ್ತದೆ. ಆದರೆ, ಟಾಲಿವುಡ್‍ನಲ್ಲಿ ಇದಕ್ಕೂ ಭಿನ್ನವಾದ ವಾದವೊಂದಿದೆ. ಅದೇನೆಂದರೆ, ಹೀಗೆ ಚಿತ್ರ ರಿಲೀಸ್‍ಗಿಂತಲೂ ಮುಂಚೆಯೇ ಲೀಕ್ ಆದರೂ ಚಿತ್ರ ಗೆಲ್ಲುತ್ತದೆಯಂತೆ. ಕಾಕತಾಳೀಯವೋ? ಈ ನಂಬಿಕೆಯೂ ಗೊತ್ತಿಲ್ಲ. ಇದು ನಿಜವೂ ಆಗಿದೆ. ಈ ಹಿಂದೆ `ಅತರಿನತಿಕಿ ದಾರಿಡಿ’ ಚಿತ್ರದ 90 ನಿಮಿಷದಷ್ಟು ಭಾಗ ಇಂಟರ್‍ನೆಟ್‍ನಲ್ಲಿ ಬಿಡುಗಡೆಗೂ ಮುನ್ನವೇ ಲೀಕ್ ಆಗಿತ್ತು. ಹೀಗಾಗಿ, ಇದು ಚಿತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದೇ ನಿರ್ಮಾತೃಗಳು ಅಂದುಕೊಂಡಿದ್ದರು. ಆದರೆ, ಈ ಚಿತ್ರ ಸೂಪರ್ ಹಿಟ್ ಆಯ್ತು.. ಒಳ್ಳೆಯ ಗಳಿಕೆಯನ್ನೂ ಮಾಡಿತ್ತು.

ಇನ್ನು, `ಬಾಹುಬಲಿ : ದಿ ಬಿಗಿನಿಂಗ್’. ಈ ಚಿತ್ರದ ಪ್ರಮುಖ ಸೀನ್‍ಗಳೇ ರಿಲೀಸ್‍ಗಿಂತ ಮುಂಚೆ ಲೀಕ್ ಆಗಿತ್ತು… ಹಾಗಂತ ಚಿತ್ರ ಸೋತಿತಾ…? ಇಲ್ಲ ದಾಖಲೆ ಬರೆಯಿತು. ಬಾಹುಬಲಿ ಸೀಕ್ವೆಲ್‍ನಲ್ಲೂ ಆಗಿದ್ದೂ ಇದೇ… ಆದರೆ, ಈ ಚಿತ್ರವೂ ಬ್ಲಾಕ್ ಬಸ್ಟರ್ ಆಗಿತ್ತು. ಈ ಚಿತ್ರವು ಗಳಿಕೆಯಲ್ಲಿ ಮಾಡಿದ ಸಾಧನೆಯನ್ನು ಟಾಲಿವುಡ್‍ನಲ್ಲಿ ಇಂದಿಗೂ ಯಾವ ಚಿತ್ರಕ್ಕೂ ಹಿಂದಿಕ್ಕಲು ಸಾಧ್ಯವಾಗಿಲ್ಲ.

ಪರಿಸ್ಥಿತಿ ಹೀಗಿರುವಾಗ ಗೀತ ಗೋವಿಂದಂ ಚಿತ್ರದ ಸೀನ್ ಕೂಡಾ ಈಗ ಲೀಕ್ ಆಗಿದೆ. ಹೀಗಾಗಿ, ಇದು ಶುಭ ಸೂಚಕ ಅಂತ ಟಾಲಿವುಡ್‍ನಲ್ಲಿ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಂತ, ಇದು ಖಂಡಿತಾ ನಮ್ಮ ಅಭಿಪ್ರಾಯವಲ್ಲ. ಸದ್ಯ ಟಾಲಿವುಡ್‍ನಲ್ಲಿ ಇಂತಹದೊಂದು ಮಾತು ಹರಿದಾಡುತ್ತಿರುವುದಂತೂ ಸತ್ಯ… ಆದರೆ, ಒಂದು ಸ್ಪಷ್ಟನೆ. ನಾವು ಯಾವತ್ತಿದ್ದರೂ ಇಂತಹ ಪೈರೆಸಿ, ಬಿಡುಗಡೆಗೆ ಮುನ್ನ ಲೀಕ್‍ಗೆ ವಿರೋಧಿಗಳೇ… ಅದಂತೂ ದಿಟ…

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!