Sunday , December 16 2018
ಕೇಳ್ರಪ್ಪೋ ಕೇಳಿ
Home / Film News / ಫಿಕ್ಸ್ ಆಯ್ತು ರಣವೀರ್ ದೀಪಿಕಾ ಮದುವೆ ಡೇಟ್…

ಫಿಕ್ಸ್ ಆಯ್ತು ರಣವೀರ್ ದೀಪಿಕಾ ಮದುವೆ ಡೇಟ್…

ಮುಂಬೈ : ಬಾಲಿವುಡ್​ನ ಮತ್ತೊಂದು ಪ್ರೇಮಪತಂಗಗಳು ದಾಂಪತ್ಯಕ್ಕೆ ಕಾಲಿಡುವ ಕ್ಷಣ ಬಂದಿದೆ. ಇಷ್ಟು ದಿನ ಗಾಸಿಪ್ ಕಾಲಂಗೆ ವಸ್ತುವಾಗಿದ್ದ ರಣವೀರ್ ಮತ್ತು ದೀಪಿಕಾ ಸಂಬಂಧಕ್ಕೆ ಈಗ ಅಧಿಕೃತ ಮದುವೆ ಮುದ್ರೆ ಬೀಳುವ ಕಾಲ ಸನ್ನಿಹಿತವಾಗಿದೆ. ಬಾಜಿರಾವ್ ಮಸ್ತಾನಿಯ ಈ ಜೋಡಿ ಕಳೆದ ಒಂದೆರಡು ವರ್ಷದಿಂದ ಪ್ರೀತಿಗೆ ಬಿದ್ದಿದೆ. ಆದ್ರೆ, ಇವರಿಬ್ಬರು ಇದನ್ನು ಎಲ್ಲಿಯೂ ಒಪ್ಪಿಕೊಂಡಿರಲಿಲ್ಲ. ಆದರೆ, ಈಗ ಈ ಪ್ರೀತಿ ದಾಂಪತ್ಯದ ತನಕ ಬಂದು ನಿಂತಿದೆ.

ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ ನವೆಂಬರ್ 20ಕ್ಕೆ ಇವರಿಬ್ಬರು ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಇಟಲಿಯಲ್ಲಿ ಇವರಿಬ್ಬರ ಮದುವೆ ನಡೆಯಲಿದ್ದು ಆಪ್ತರು, ಕುಟುಂಬಸ್ಥರು ಸೇರಿ ಬರೀ 30 ಜನ ಮಾತ್ರ ಮದುವೆಯಲ್ಲಿ ಹಾಜರಿರಲಿದ್ದಾರೆ. ಇನ್ನು, ಇದಾದ ಬಳಿಕ ಸಿನಿಲೋಕದ ಸ್ನೇಹಿತರು ಸೇರಿದಂತೆ ಆಪ್ತರಿಗಾಗಿ ಗ್ರ್ಯಾಂಡ್ ರಿಸೆಪ್ಶನ್ ನಡೆಸುವುದಕ್ಕೂ ನಿರ್ಧರಿಸಲಾಗಿದೆ. ಇನ್ನು, ಇವರಿಬ್ಬರ ಮದುವೆ ವಿಚಾರವನ್ನು ಹಿರಿಯ ನಟ ಕಬೀರ್ ಬೇಡಿ ಟ್ವಿಟರ್ ಮೂಲಕ ದೃಢಪಡಿಸಿದ್ದಾರೆ. ಹೀಗಾಗಿ, ಇಷ್ಟು ದಿನ ಗಾಸಿಪ್ ರೂಪದಲ್ಲಿಯೇ ಇದ್ದ ಸುದ್ದಿಗೆ ಅಧಿಕೃತ ಮುದ್ರೆಯೂ ಬಿದ್ದಂತಾಗಿದೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!