Tuesday , April 23 2019
ಕೇಳ್ರಪ್ಪೋ ಕೇಳಿ
Home / Interval / ಹೃದಯವಂತ ಸುನಿಲ್ ಶೆಟ್ಟಿ ಒಳಗಿದ್ದಾನೆ ಒಬ್ಬ ಮುದ್ದು ಮನಸ್ಸಿನ ಪುಟ್ಟ ತುಂಟ…

ಹೃದಯವಂತ ಸುನಿಲ್ ಶೆಟ್ಟಿ ಒಳಗಿದ್ದಾನೆ ಒಬ್ಬ ಮುದ್ದು ಮನಸ್ಸಿನ ಪುಟ್ಟ ತುಂಟ…

ಬಾಲಿವುಡ್ ನಟ ಸುನಿಲ್ ಶೆಟ್ಟಿ ಬಿಟೌನ್​ನಲ್ಲಿರೋ ಪಕ್ಕಾ ಫ್ಯಾಮಿಲಿ ಮ್ಯಾನ್. ಸಭ್ಯಸ್ಥ. ಯಾವುದೇ ಗಾಸಿಪ್​ಗಳಿಗೆ ವಸ್ತುವಾಗದೆ ಸಿನಿಲೋಕದಲ್ಲಿ ತನ್ನದೇ ಆದ ಸಭ್ಯತೆಯನ್ನು ಉಳಿಸಿಕೊಂಡು ಗಮನ ಸೆಳೆದ ನಟ. ಹಲವಾರು ಸಮಾಜಸೇವೆಯನ್ನೂ ಮಾಡಿದವರು. ಇವರ ಸದ್ದಿಲ್ಲದ ಸಮಾಜ ಸೇವೆ ಅದೆಷ್ಟೋ ಜನರ ಮುಖದಲ್ಲಿ ನಗು ತಂದಿದೆ. ಇಂತಹ ಸುನಿಲ್ ಒಳಗೆ ಒಬ್ಬ ಪುಟ್ಟ ಮುದ್ದಿನ ತುಂಟನಿದ್ದಾನೆ…

ಸಿನೆಮಾದ ನಕಲಿ ಟಿಕೆಟ್ ಹಂಚಿಕೆ! : ಅದು ಏಪ್ರಿಲ್ ಫೂಲ್ ದಿನ. ಈ ದಿನ ಸುನಿಲ್ ತನ್ನ ಸ್ನೇಹಿತರು ಮತ್ತು ಚಿಕ್ಕಪ್ಪನೊಂದಿಗೆ ಸೇರಿ ಒಂದಷ್ಟು ಜನರನ್ನು ಏಪ್ರಿಲ್ ಫೂಲ್ ಮಾಡಿದ್ದರು. ಇವರ ಒಬ್ಬ ಸ್ನೇಹಿತರಿದ್ದರು. ಅವರದ್ದು ಪ್ರಿಂಟಿಂಗ್ ಪ್ರೆಸ್ ಬ್ಯುಸಿನೆಸ್. ಹೀಗಾಗಿ, ಆ ಒಂದು ದಿನ ಇವರಿಬ್ಬರು ಸೇರಿಕೊಂಡು ಸ್ಟ್ರಾಂಡ್ ಅನ್ನೋ ಥಿಯೇಟರ್​ನ ನಕಲಿ ಥಿಯೇಟರ್ ಪ್ರಿಂಟ್ ಮಾಡಿದ್ದರು. ಜೊತೆಗೆ ತಮಗೆ ಗೊತ್ತಿರುವ ಒಂದಷ್ಟು ಜನರಿಗೆ ಹಂಚಿದ್ದರು. ಹೀಗೆ ಈ ಟಿಕೆಟ್ ಪಡೆದವರು ಥಿಯೇಟರ್ ಗೆ ಹೋಗಿ ಮಂಗಳಾರತಿ ಮಾಡಿಸ್ಕೊಂಡು ಬಂದಿದ್ದರು. ಜೊತೆಗೆ, ಇದು ಬೋಗಸ್ ಟಿಕೆಟ್ ಎಂಬ ಸತ್ಯ ಗೊತ್ತಾಗದ ನಗುತ್ತಲೇ ಬೈಯ್ದಿದ್ದರು…!

ನಟಿಗೆ ನಕಲಿ ಮುಖ್ಯಮಂತ್ರಿಯ ದರ್ಶನ…! : ಅದು ‘ಎ ಥೇರಾ ಗರ್​ ಎ ಮೇರಾ’ ಚಿತ್ರದ ಶೂಟಿಂಗ್ ಸಂದರ್ಭ. ಸುನಿಲ್ ಶೆಟ್ಟಿ ಮತ್ತು ಮಹಿಮಾ ಚೌಧರಿ ಈ ಚಿತ್ರದ ಹೀರೋ ಹೀರೋಯಿನ್. ಹೈದರಾಬಾದ್​ನಲ್ಲಿ ಈ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಇಲ್ಲೊಬ್ಬರು ಆರ್ಟಿಸ್ಟ್ ಇದ್ದರು. ಅವರು ನೋಡೋಕೆ ಥೇಟ್ ಆಗಿನ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತರ ಇದ್ದರು. ಸುನಿಲ್ ಅಚ್ಚರಿಯಾಗಿ ಇವ್ರ ಬಳಿ ಈ ಬಗ್ಗೆ ಕೇಳಿದ್ದರು. ಆಗ ಅವರು ಕೂಡಾ ‘ಹೌದು ಸಾರ್. ತುಂಬಾ ಜನ ಹಾಗೆಯೇ ಹೇಳ್ತಾರೆ. ಹೀಗಾಗಿಯೇ ನನಂಗೂ ಒಂದಷ್ಟು ಛಾನ್ಸ್​ಗಳು ಸಿಗ್ತಿವೆ’ ಅಂತ ಹೇಳಿದ್ದರು. ಆಗ ಇವರ ತಲೆಗೆ ಒಂದು ಐಡಿಯಾ ಹೊಳೆದಿತ್ತು. ಆವತ್ತು ಶೂಟಿಂಗ್​ನಲ್ಲಿ ಸಾಕಷ್ಟು ವೈಟ್ ಅಂಬಾಸೀಡರ್ ಕಾರುಗಳಿದ್ದವು. ಹಾಗಾಗಿ, ಸುನಿಲ್ ಶೆಟ್ಟಿ ಮತ್ತು ಆರ್ಟ್​ ಡೈರೆಕ್ಟರ್ ಸೇರಿದಂತೆ ಮೂರ್ನಾಕು ಮಂದಿ ಲೈಟ್ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂಬ ಭದ್ರತೆಯ ಸೀನ್ ಕ್ರಿಯೆಟ್ ಮಾಡಿದ್ದರು. ಈ ಎರಡ್ಮೂರು ಮಂದಿಗೆ ಬಿಟ್ಟರೆ ಈ ವಿಷಯ ಬೇರೆ ಯಾರಿಗೂ ಗೊತ್ತಿರಲಿಲ್ಲ. ಈ ವೇಳೆ, ಕಾರಿನಲ್ಲಿ ಚಂದ್ರಬಾಬು ನಾಯ್ಡು ತರ ಕಾಣುವ ಆ ಆರ್ಟಿಸ್ಟ್ ಪಕ್ಕಾ ಸಿಎಂ ಗೆಟಪ್​ನಲ್ಲಿ ಸ್ಪಾಟ್​ಗೆ ಎಂಟ್ರಿ ಕೊಟ್ಟರು. ಆಗ ಇವರ ಜೊತೆಗಿದ್ದ ಒಂದೆರಡು ಜೂನಿಯರ್ ಆರ್ಟಿಸ್ಟ್​ಗಳು ‘ಚಂದ್ರಬಾಬು ನಾಯ್ಡುಗೆ ಜೈ… ಜೈ’ ಎಂದು ಕೂಗಲು ಆರಂಭಿಸಿದ್ದರು. ಇದನ್ನು ಕೇಳಿ ಇಡೀ ಶೂಟಿಂಗ್ ಸೆಟ್ ಸ್ಥಬ್ಧ! ಸುನಿಲ್ ಕೂಡಾ ಓಡಿ ಹೋಗಿ ಆ ‘ಮುಖ್ಯಮಂತ್ರಿ’ಯ ಕಾಲು ಹಿಡಿದು ಆಶೀರ್ವಾದ ಪಡೆಯುವಂತೆ ಮಾಡಿದ್ದರು. ಇದನ್ನು ಕಂಡ ನಟಿ ಮಹಿಮಾ ಕೂಡಾ ಓಡಿ ಬಂದು ‘ಮುಖ್ಯಮಂತ್ರಿ’ಗಳನ್ನು ಭೇಟಿಯಾದರು. ಭಯ ಭಕ್ತಿಯಿಂದಲೇ ವಿಧೇಯತೆಯಿಂದ ಮಾತನಾಡಿದ್ದರು.

ಹೀಗೆ ಒಂದಷ್ಟು ಹೊತ್ತು ಕಳೆದ ಮೇಲೆ ಈ ‘ನಾಟಕ’ದ ಸತ್ಯ ಮಹಿಮಾಗೆ ಗೊತ್ತಾಯ್ತು… ಒಂದು ಕ್ಷಣ ಮಹಿಮಾ ದಂಗು…! ಈ ಘಟನೆಯನ್ನು ಮಹಿಮಾ ಇಂದಿಗೂ ನೆನಪಿಸಿಕೊಳ್ತಾರೆ. ಸುನಿಲ್ ಶೆಟ್ಟಿ ಅಂದ್ರೆನೇ ಹಾಗೆ. ಎಲ್ಲರೊಂದಿಗೆ ಯಾವುದೇ ಹಮ್ಮು ಬಿಮ್ಮಿಲ್ಲದೆ ಬೆರೆಯುವ ನಟ ಇವರು. ಇವರ ಈ ಹೃದಯವಂತಿಕೆಯಿಂದಲೇ ಇಡೀ ಶೂಟಿಂಗ್ ಸೆಟ್​ನಲ್ಲಿ ಒಮದು ಮನೆಯ ವಾತಾವರಣವೇ ನಿರ್ಮಾಣವಾಗುತ್ತದೆ.

courtesy : zee tv

About sudina

Check Also

ಟೆರರಿಸ್ಟ್ ಅಂತ ಸುನಿಲ್ ಶೆಟ್ಟಿ ಅವರನ್ನು ವಿಚಾರಣೆ ನಡೆಸಿದ್ದ ಅಮೇರಿಕಾ ಪೊಲೀಸ್…!

ಯಾರಿಗಾದರೂ ಅಮೇರಿಕಾ ಪ್ರವಾಸ ಮಾಡೋದು ಅಂದರೆ ಅದೊಂದು ಹೆಮ್ಮೆ… ಇದರಲ್ಲಿ ಬಾಲಿವುಡ್ ಕಲಾವಿದರೂ ಹೊರತಾಗಿಲ್ಲ. ಆದ್ರೆ, ಹೀಗೆ ಅಮೇರಿಕಾಕ್ಕೆ ಹೋದಾಗ …

Leave a Reply

Your email address will not be published. Required fields are marked *

error: Content is protected !!