Saturday , February 16 2019
ಕೇಳ್ರಪ್ಪೋ ಕೇಳಿ
Home / News NOW / ಮಳೆಯಿಂದ ಸಂಕಷ್ಟಕ್ಕೀಡಾಗಿದೆ ಕರುನಾಡ ಸ್ವರ್ಗ : ಇಲ್ಲಿದೆ ಹೆಲ್ಪ್ ಲೈನ್ ನಂಬರ್

ಮಳೆಯಿಂದ ಸಂಕಷ್ಟಕ್ಕೀಡಾಗಿದೆ ಕರುನಾಡ ಸ್ವರ್ಗ : ಇಲ್ಲಿದೆ ಹೆಲ್ಪ್ ಲೈನ್ ನಂಬರ್

ಮಡಿಕೇರಿ : ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗು ಜಿಲ್ಲೆಯ ಬಹುಭಾಗ ತತ್ತರಿಸಿ ಹೋಗಿದೆ. ಕಣ್ಣೆದುರೇ ಮನೆಗಳು ಕುಸಿಯುತ್ತಿವೆ, ಗುಡ್ಡಗಳು ಧರಾಶಯಿ ಆಗುತ್ತಿದೆ. ಸಾಕಷ್ಟು ಬೆಳೆ ನಾಶ ಸಂಭವಿಸಿದೆ. ಬೆಟ್ಟ ಗುಡ್ಟದ ಮೇಲೆ ಕುಳಿತು ಜನ ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಕೆಲವರು ಊಟ ನಿದ್ದೆ ಇಲ್ಲದೆ ಪರದಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಹರಿಯುತ್ತಿದ್ದ ಸಣ್ಣ ಪುಟ್ಟ ನದಿಗಳೂ ಈಗ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ, ಈ ನೀರು ನೇರವಾಗಿ ಗ್ರಾಮಗಳಿಗೆ ನುಗ್ಗುತ್ತಿವೆ. ಪರಿಹಾರ ಕಾರ್ಯ ಭರದಿಂದ ಸಾಗುತ್ತಿದ್ದರೂ ಪ್ರತಿಕೂಲ ಹವಾಮಾನ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗುತ್ತಿದೆ.

About sudina

Check Also

ಖಡಕ್ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶ

ಹೈದರಾಬಾದ್ : ಖಡಕ್ ಮತ್ತು ಜನಾನುರಾಗಿ ಎಂದು ಹೆಸರು ಪಡೆದಿದ್ದ ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ವಿಧಿವಶರಾಗಿದ್ದಾರೆ. ಅವರಿಗೆ …

Leave a Reply

Your email address will not be published. Required fields are marked *

error: Content is protected !!