Tuesday , November 20 2018
ಕೇಳ್ರಪ್ಪೋ ಕೇಳಿ
Home / News NOW / ದಂಪತಿ ಬೈಕ್‍ನಿಂದ ಬಿದ್ದಿದ್ದರು, ಯಾರೂ ಇಲ್ಲದೆ ಮಗುವೊಂದೇ ಬೈಕ್‍ನಲ್ಲಿ ಹೋಗಿತ್ತು…! : ಇಲ್ಲಿದೆ ಎದೆಯೇ ಝಲ್ ಅನ್ನೋ ದೃಶ್ಯ…!

ದಂಪತಿ ಬೈಕ್‍ನಿಂದ ಬಿದ್ದಿದ್ದರು, ಯಾರೂ ಇಲ್ಲದೆ ಮಗುವೊಂದೇ ಬೈಕ್‍ನಲ್ಲಿ ಹೋಗಿತ್ತು…! : ಇಲ್ಲಿದೆ ಎದೆಯೇ ಝಲ್ ಅನ್ನೋ ದೃಶ್ಯ…!

ಬೆಂಗಳೂರು : ಇದೊಂದು ಭೀಕರ ದೃಶ್ಯ. ಬೈಕ್‍ನಲ್ಲಿ ಐದು ವರ್ಷದ ಮಗುವಿನ್ನೊಟ್ಟಿಗೆ ದಂಪತಿ ಹೋಗ್ತಿದ್ದರು. ಈ ವೇಳೆ, ಬೇರೊಂದು ಬೈಕ್ ಅಡ್ಡ ಬಂದು ಡಿಕ್ಕಿಯಾಗಿತ್ತು. ಹೀಗೆ ಬೈಕ್ ಡಿಕ್ಕಿಯಾಗಿದ್ದರಿಂದ ದಂಪತಿ ಬೈಕ್‍ನಿಂದ ಬಿದ್ದಿದ್ದರು. ಆದರೆ, ಬೈಕ್‍ನಲ್ಲಿ ಮಗು ಮಾತ್ರ ಇತ್ತು. ಅಪಘಾತದ ತೀವ್ರತೆಗೆ ಬೈಕ್ 300 ಮೀಟರ್‍ನಷ್ಟು ದೂರ ಹಾಗೆಯೇ ಸಾಗಿತ್ತು…! ಈ ದೃಶ್ಯವೇ ಭೀಕರವಾಗಿತ್ತು… ಆದರೆ, ಅದೃಷ್ಟವಶಾತ್ ಮಗು ದೂರ ಹೋಗಿ ಬಿದ್ದಿದ್ದು ತಕ್ಷಣ ಸ್ಥಳೀಯರು ಕಂದನನ್ನು ರಕ್ಷಿಸಿದ್ದಾರೆ. ದಂಪತಿಗೂ ಅಲ್ಪ ಸ್ವಲ್ಪ ಗಾಯಗಳಾಗಿದೆ.. ಬೆಂಗಳೂರು ಹೊರವಲಯದ ನೆಲಮಂಗಲದ ಅರಸಿನಕುಂಟೆ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಕಾರೊಂದರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!