Saturday , December 15 2018
ಕೇಳ್ರಪ್ಪೋ ಕೇಳಿ
Home / Film News / ತೆಲುಗಿನಲ್ಲಿ ಮತ್ತೊಂದು ಪ್ರಯೋಗಕ್ಕೆ ಮುಂದಾದ ರಶ್ಮಿಕಾ…

ತೆಲುಗಿನಲ್ಲಿ ಮತ್ತೊಂದು ಪ್ರಯೋಗಕ್ಕೆ ಮುಂದಾದ ರಶ್ಮಿಕಾ…

ಹೈದರಾಬಾದ್ : ಕಿರಿಕ್ ಪಾರ್ಟಿ ಸುಂದರಿ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್‍ನಲ್ಲಿ ಮೆರೆದಾಡುತ್ತಿರುವ ಚೆಲುವೆ. ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಚಲೋ ಮತ್ತು ಗೀತ ಗೋವಿಂದಂ ಚಿತ್ರ ಸೂಪರ್ ಹಿಟ್ ಆಗುತ್ತಿದ್ದಂತೆಯೇ ಟಾಲಿವುಡ್‍ನಲ್ಲಿ ರಶ್ಮಿಕಾ ನೆಲೆ ಕಂಡುಕೊಳ್ಳುತ್ತಿದ್ದಾರೆ. ಜೊತೆಗೆ, ನಾಗಾರ್ಜುನ ಮತ್ತು ನಾನಿ ಕಾಂಬಿನೇಷನ್‍ನ `ದೇವದಾಸ್’ ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ರಶ್ಮಿಕಾ ಪ್ರಯೋಗಕ್ಕೆ ಮುಂದಾಗಿದ್ದಾರಂತೆ. ಅದೇನೆಂದರೆ, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡೋದು. ಈ ಹಿಂದಿನ ಎರಡು ಚಿತ್ರಗಳಲ್ಲಿ ರಶ್ಮಿಕಾ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿಲ್ಲ. ಆದ್ರೆ, ದೇವದಾಸ್ ಚಿತ್ರದಲ್ಲಿ ತಾವೇ ಡಬ್ ಮಾಡುವ ಮೂಲಕ ಟಾಲಿವುಡ್‍ನಲ್ಲಿ ಇನ್ನಷ್ಟು ಗಟ್ಟಿಯಾಗಿ ನೆಲೆಯೂರುವ ಪ್ರಯತ್ನದಲ್ಲಿದ್ದಾರೆ. ಈ ನಿಟ್ಟಿನಲ್ಲಿ ರಶ್ಮಿಕಾ ತಮ್ಮ ಪ್ರಯತ್ನವನ್ನು ಮುಂದುವರಿಸಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!