Sunday , February 17 2019
ಕೇಳ್ರಪ್ಪೋ ಕೇಳಿ
Home / Film News / ಡೈನಾಮಿಕ್ ನಿರ್ದೇಶಕಿ ವಿಧಿವಶ

ಡೈನಾಮಿಕ್ ನಿರ್ದೇಶಕಿ ವಿಧಿವಶ

ಹೈದರಾಬಾದ್ : ಹಿರಿಯ ಬರಹಗಾರ್ತಿ, ನಿರ್ದೇಶಕಿ ಬಿ.ಜಯಾ ವಿಧಿವಶರಾಗಿದ್ದಾರೆ. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಇವರು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಹೈದರಾಬಾದ್‍ನ ಶ್ರೀನಗರದ ಕಾಲೋನಿಯಲ್ಲಿರೋ ನಿವಾಸದಲ್ಲಿ ಇವರು ನಿಧನರಾಗಿದ್ದಾರೆ.

ಟಾಲಿವುಡ್‍ನ ಹಲವು ಸೂಪರ್‍ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಖ್ಯಾತಿ ಇವರದ್ದು. 2003ರಲ್ಲಿ `ಚಂಟಿಗಡು’ ಚಿತ್ರದ ಮೂಲಕ ಇವರು ನಿರ್ದೇಶಕಿಯಾಗಿ ಗಮನ ಸೆಳೆದಿದ್ದರು. ಈ ಚಿತ್ರ ಸೂಪರ್ ಹಿಟ್ ಆದ ಬಳಿಕ ಟಾಲಿವುಡ್‍ನ ಡೈನಾಮಿಕ್ ನಿರ್ದೇಶಕಿ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದರು. ಇದಾದ ಬಳಿಕ ಇವರು ಪ್ರೇಮಿಕುಲು, ಗುಂಡಮ್ಮ ಗಾರಿ ಮನವಾಡು, ಲವ್‍ಲೀ, ವೈಸಾಕಂ ಎಂಬ ಚಿತ್ರವನ್ನು ಮಾಡಿದ್ದರು. 2017ರಲ್ಲಿ ವೈಸಾಕಂ ಚಿತ್ರ ರಿಲೀಸ್ ಆಗಿತ್ತು. ಇದೇ ಇವರು ನಿರ್ದೇಶಿಸಿದ್ದ ಕಡೆಯ ಚಿತ್ರವಾಗಿತ್ತು. ಇನ್ನು, ಪತ್ರಕರ್ತೆಯಾಗಿಯೂ ಇವರು ಗಮನ ಸೆಳೆದಿದ್ದರು. ಇಂತಹ ನಿರ್ದೇಶಕಿಯ ನಿಧನಕ್ಕೆ ಇಡೀ ಟಾಲಿವುಡ್ ಗಣ್ಯರು ಕಂಬನಿ ಮಿಡಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!