Thursday , November 15 2018
ಕೇಳ್ರಪ್ಪೋ ಕೇಳಿ
Home / Film News / ತಿರುಪತಿಗೆ ಟಾಪ್ ನಾಯಕಿಯ ರಹಸ್ಯ ಭೇಟಿ…

ತಿರುಪತಿಗೆ ಟಾಪ್ ನಾಯಕಿಯ ರಹಸ್ಯ ಭೇಟಿ…

ಹೈದರಾಬಾದ್ : ದಕ್ಷಿಣ ಭಾರತದ ಸ್ಟಾರ್ ನಟಿ ಶ್ರೀಯಾ ಶರಣ್ ತಿರುಪತಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಆದರೆ, ತನ್ನ ಗುರುತೇ ಸಿಗದಂತೆ ಮುಖ ಮುಚ್ಚಿಕೊಂಡು ಜನ ಮತ್ತು ಮಾಧ್ಯಮಗಳ ಕಣ್ತಪ್ಪಿಸಿ ಶ್ರೀಯಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಆದ್ರೂ, ಒಂದಷ್ಟು ಜನ ಶ್ರೀಯಾರನ್ನು ಗುರುತು ಹಿಡಿದಿದ್ದು, ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 2008ರಲ್ಲಿ ಶ್ರೀಯಾಗೆ ಇಲ್ಲೊಂದು ಸಣ್ಣ ಕೆಟ್ಟ ಅನುಭವವಾಗಿತ್ತು. ಆಗ ದೇಗುಲಕ್ಕೆ ಬಂದಿದ್ದ ಶ್ರೀಯಾ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವಾಗ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಆಕೆಗೆ ಕಿರುಕುಳ ಕೊಟ್ಟಿದ್ದ. ತಕ್ಷಣ ಶ್ರೀಯಾ ಆತನಿಗೆ ಹೊಡೆದಿದ್ದರು. ಬಳಿಕ ಈತನನ್ನು ಹಿಡಿದಾಗ ಆತ ಪಕ್ಕದಲ್ಲೇ ಇರೋ ಮಠದಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಎಂದು ಹೊತ್ತಾಗಿತ್ತು. ಬಹುಶಃ ಈ ಅನುಭವದ ಬಳಿಕ ಶ್ರೀಯಾ ಇನ್ನಷ್ಟು ಜಾಗರೂಕರಾಗಿದ್ದಾರೆಂದು ಕಾಣುತ್ತದೆ. ಹೀಗಾಗಿಯೇ, ಯಾರಿಗೂ ಗೊತ್ತಾಗದಂತೆ ಬಂದ ಶ್ರೀಯಾ ಪೂಜೆ ಮುಗಿಸಿ ತೆರಳಿದ್ದಾರೆ.

About sudina

Check Also

ಕಾಂಪ್ರಮೈಸ್ ಪ್ರಶ್ನೆಯೇ ಇಲ್ಲ : ಅರ್ಜುನ್ – ಕ್ಷಮೆ ಕೇಳೋಲ್ಲ : ಶ್ರುತಿ…

ಬೆಂಗಳೂರು : ಸ್ಯಾಂಡಲ್‍ವುಡ್‍ನಲ್ಲಿ ಎದ್ದಿರುವ ಮೀ ಟೂ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ …

Leave a Reply

Your email address will not be published. Required fields are marked *

error: Content is protected !!