Thursday , November 15 2018
ಕೇಳ್ರಪ್ಪೋ ಕೇಳಿ
Home / Sudina Special / ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ರಜನಿಕಾಂತ್ ಚಿತ್ರ ನೋಡಿ ಆಸ್ಪತ್ರೆಯಲ್ಲಿ ನೋವು ಮರೆಯುತ್ತಿರುವ ಬೆಂಗಳೂರಿನ ಬಾಲಕ…!

ಬೆಂಗಳೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಪಾಲಿನ ಆರಾಧ್ಯ ದೈವ. ಅವರ ಸಿನೆಮಾಗಳನ್ನು ಕಂಡು ಪ್ರೀತಿಸುವ ಜನರೆಷ್ಟೋ… ಇದೀಗ, ಬೆಂಗಳೂರಿನ ಬಾಲಕನೊಬ್ಬ ತೀರ ಕಷ್ಟದ ಸ್ಥಿತಿಯಲ್ಲೂ ರಜನಿಕಾಂತ್ ಚಿತ್ರವನ್ನು ನೋಡಿ ನೋವು ಮರೆಯುತ್ತಿದ್ದಾನೆ. ದಕ್ಷಿಣ ಬೆಂಗಳೂರಿನ ಮೂಡಲಪಾಳ್ಯದ ನಿವಾಸಿ 13 ವರ್ಷದ ಕುಶಾಲ್‍ಗೆ ಹೃದಯ ಮರುಜೋಡಣೆ ಮಾಡಲಾಗಿದೆ. ವಿಶಾಖಪಟ್ಟಂನಲ್ಲಿ ಅಪಘಾತಕ್ಕೀಡಾದ 20 ವರ್ಷದ ಯುವಕನ ಹೃದಯವನ್ನು ಕುಶಾಲ್‍ಗೆ ಅಳವಡಿಸಲಾಗಿದೆ.

ಆಗಸ್ಟ್ 6 ರಂದು ವಿಮಾನದ ಮೂಲಕ ಹೃದಯವನ್ನು ತಂದು ಅಂದೇ ಕುಶಾಲ್‍ಗೆ ಜೋಡಿಸಲಾಗಿತ್ತು. ನಾಲ್ಕು ಗಂಟೆಗಳ ಸೂಕ್ಷ್ಮ ಶಸ್ತ್ರಚಿಕಿತ್ಸೆಯನ್ನು ಪೋರ್ಟಿಸ್ ವೈದ್ಯರ ತಂಡ ಯಶಸ್ವಿಯಾಗಿ ನಿಭಾಯಿಸಿತ್ತು. ಇದಾದ ಬಳಿಕ ಕುಶಾಲ್ ಚೇತರಿಕೆ ಕಂಡಿದ್ದಾನೆ. ಅದರಲ್ಲೂ ರಜನಿಕಾಂತ್ ಅವರ ಸಿನೆಮಾಗಳನ್ನು ಆಸ್ಪತ್ರೆಯಲ್ಲಿ ನೋಡುತ್ತಲೇ ಕುಶಾಲ್ ನೋವು ಮರೆತಿದ್ದಾನೆ. ಕುಶಾಲ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ. ಹೀಗಾಗಿ, ರಜನಿಕಾಂತ್ ಚಿತ್ರವನ್ನು ನೋಡುತ್ತಾ ಕಾಲ ಕಳೆದ ಬಾಲಕ ಈಗ ಆರೋಗ್ಯವಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು, ಸೂಕ್ಷ್ಮ ಶಸ್ತ್ರಚಿಕಿತ್ಸೆಗೆ ನೆರವಾದ ವೈದ್ಯರು, ಹೃದಯ ರವಾನೆಗೆ ನೆರವಾದ ಪೊಲೀಸರು ಸೇರಿದಂತೆ ಎಲ್ಲರಿಗೂ ಆಸ್ಪತ್ರೆ ಧನ್ಯವಾದ ಹೇಳಿದೆ.

About sudina

Check Also

ಆಟೋ ಚಾಲಕರೂ ಹೆಲ್ಮೆಟ್ ಹಾಕೋಬೇಕಾ…? : ಹಾಕಿಲ್ಲಂತ ಫೈನ್ ಹಾಕಿದ್ದಾರೆ ಪುತ್ತೂರು ಪೊಲೀಸ್ರು…!

ಪುತ್ತೂರು : ಇದೊಂದು ಅಚ್ಚರಿಯ ಘಟನೆ. ತಕ್ಷಣಕ್ಕೆ ನಂಬುವುದಕ್ಕೂ ಅಸಾಧ್ಯ. ಆದರೆ, ಈ ಘಟನೆ ನಡೆದಿರೋದಂತೂ ಸತ್ಯ. ಟೂವೀಲರ್ ಚಾಲಕರಿಗೆ …

Leave a Reply

Your email address will not be published. Required fields are marked *

error: Content is protected !!