Thursday , October 18 2018
ಕೇಳ್ರಪ್ಪೋ ಕೇಳಿ
Home / Film News / ಹುಚ್ಚು ಅಭಿಮಾನ : ನಟನನ್ನು ಭೇಟಿಯಾಗದ ನೋವಲ್ಲಿ ಆತ್ಮಹತ್ಯೆ…!

ಹುಚ್ಚು ಅಭಿಮಾನ : ನಟನನ್ನು ಭೇಟಿಯಾಗದ ನೋವಲ್ಲಿ ಆತ್ಮಹತ್ಯೆ…!

ವಿಜಯವಾಡ : ಹುಚ್ಚು ಅಭಿಮಾನ ಒಮ್ಮೊಮ್ಮೆ ದುರಂತವನ್ನೇ ತರುತ್ತದೆ. ಅತಿರೇಕದ ಅಭಿಮಾನಕ್ಕೆ ಜೀವವೇ ಹೋದ ಉದಾಹರಣೆಗಳು ನಮ್ಮಲ್ಲಿ ಅನೇಕ ಇವೆ. ಈಗ ಇದೇ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ತೆಲುಗಿನ ಖ್ಯಾತನಟ ಪವನ್ ಕಲ್ಯಾಣ್‍ರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲವೆಂದು ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮತ್ತು ಈ ಬಗ್ಗೆ ಡೆತ್‍ನೋಟ್‍ನಲ್ಲಿ ಬರೆದುಕೊಂಡಿದ್ದಾನೆ.

ಕೊಮಟಾವೆಲ್ಲಿ ಅನಿಲ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಮನೆಯಲ್ಲಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೊತೆಗೆ, ಬದುಕಿರುವಾಗ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ನಿಮ್ಮ ಕೈಯಾರೆ ನನ್ನ ಅಂತ್ಯಕ್ರಿಯೆ ನಡೆಯಬೇಕು ಎಂದು ಪವನ್ ಕಲ್ಯಾಣ್‍ರಿಗೆ ಮನವಿ ಮಾಡಿ ಈ ಸಾವಿಗೆ ಶರಣಾಗಿದ್ದಾನೆ.

About sudina

Check Also

ಮೀ ಟೂ ಬಿಸಿ : ಗಾಯಕ ರಘು ದೀಕ್ಷಿತ್ ವಿರುದ್ಧ ಆರೋಪ : ರಘು ಕ್ಷಮೆಯಾಚನೆ…!

ಬೆಂಗಳೂರು : ಮೀ ಟೂ ಅಭಿಯಾನದ ಬಿಸಿ ಈಗ ಖ್ಯಾತ ಗಾಯಕ ರಘು ದೀಕ್ಷಿತ್ ಅವರಿಗೂ ತಟ್ಟಿದೆ. ಗಾಯಕಿ ಚಿನ್ಮಯಿ …

Leave a Reply

Your email address will not be published. Required fields are marked *

error: Content is protected !!