Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಪ್ರೈವೆಟ್ ಜೆಟ್ ಅನ್ನು ಬಾಡಿಗೆ ಪಡೆದ ಪೂಜಾ…!

ಪ್ರೈವೆಟ್ ಜೆಟ್ ಅನ್ನು ಬಾಡಿಗೆ ಪಡೆದ ಪೂಜಾ…!

ಹೈದರಾಬಾದ್ : ನಟಿ ಪೂಜಾ ಹೆಗ್ಡೆ ಇತ್ತೀಚಿನ ದಿನಗಳಲ್ಲಿ ಟ್ರೆಡಿಷನಲ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ಲಾಮರ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಅವೆಲ್ಲಾ ಪೂಜಾಗೆ ಅಷ್ಟೇನು ಲಾಭ ತಂದುಕೊಡಲಿಲ್ಲ. ಡಿಜೆ ಚಿತ್ರದ ಬಳಿಕ ಪೂಜಾ ಇಂಟಸ್ಟ್ರಿಯಲ್ಲಿ ಹಾಟೆಸ್ಟ್ ಬ್ಯೂಟಿ ಎಂದೇ ಗುರುತಿಸಿಕೊಂಡಿದ್ದರು. ಹಲವಾರು ಸ್ಟಾರ್ ನಟರೊಂದಿಗೆಯೇ ಇವರು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಈಗಲೂ ಪೂಜಾ ಕೈಯಲ್ಲಿ ಹಲವಾರುಸಿನೆಮಾಗಳಿವೆ.

ಸದ್ಯ ಪೂಜಾ ಬ್ಯಾಕ್ ಟು ಬ್ಯಾಕ್ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದಾರೆ. ಎನ್‍ಟಿಆರ್ ಅಭಿನಯದ `ಅರವಿಂದ ಸೇಮಿತಾ’, ಮಹೇಶ್ ಬಾಬು ಅಭಿನಯದ `ಮಹರ್ಶಿ’, ಬಾಲಿವುಡ್‍ನ `ಹೌಸ್‍ಫುಲ್ 4′ ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ. ಇನ್ನು, ರಾಧಾಕೃಷ್ಣ ನಿರ್ದೇಶನದ ಪ್ರಭಾಸ್ ಅಭಿನಯದ ಚಿತ್ರಕ್ಕೂ ಪೂಜಾ ಸಹಿ ಹಾಕಿದ್ದಾರೆ. ಈ ಚಿತ್ರಗಳಲ್ಲೇ ಇತ್ತೀಚೆಗೆ ಸೆಟ್ಟೇರಿದ್ದು, ಶೂಟಿಂಗ್ ಕೂಡಾ ಶೀಘ್ರದಲ್ಲಿ ಶುರುವಾಗಲಿದೆ. ಹೀಗಾಗಿ, ಪೂಜಾ ಶೀಘ್ರದಲ್ಲಿ ಶೂಟಿಂಗ್ ಸೆಟ್‍ಗೆ ಸೇರಬೇಕಾದ ಅನಿವಾರ್ಯತೆ ಇದೆ. ಇದರಿಂದ ಪೂಜಾ ಖಾಸಗಿ ಜೆಟ್ ಅನ್ನು ಬಾಡಿಗೆ ಪಡೆದಿದ್ದಾರೆ. ಈ ಮೂಲಕ ಬೇಗ ಬೇಗ ಶೂಟಿಂಗ್ ಸೆಟ್ ಸೇರಲು ಎಲ್ಲಾ ಯತ್ನ ಮಾಡುತ್ತಿದ್ದಾರೆ.

ಪ್ರೈವೆಟ್ ಜೆಟ್ ಬಾಡಿಗೆಗೆ ಪಡೆದದ್ದು ಪೂಜಾಗೆ ಆರ್ಥಿಕವಾಗಿ ಸಾಕಷ್ಟು ಹೊರೆ ಆಗಲಿದೆ. ಆದರೂ ಪೂಜಾ ತಮ್ಮ ಕೆರಿಯರ್ ಮೇಲೆ ಇನ್ನಷ್ಟು ಗಮನ ಕೇಂದ್ರೀಕರಿಸುವ ಸಲುವಾಗಿ ಇಂತಹ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!