Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಮೊದಲ ಮಗುವಿನ ನಿರೀಕ್ಷೆಯಲ್ಲಿ ದಿಲೀಪ್- ಕಾವ್ಯಾ ದಂಪತಿ

ಮೊದಲ ಮಗುವಿನ ನಿರೀಕ್ಷೆಯಲ್ಲಿ ದಿಲೀಪ್- ಕಾವ್ಯಾ ದಂಪತಿ

ತಿರುವನಂತಪುರಂ : ಮಲಯಾಳಂನ ನಟ ದಿಲೀಪ್ ಮತ್ತು ಕಾವ್ಯಾ ಮಾಧವನ್ ದಂಪತಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಾವ್ಯಾ ಮಾಧವನ್ ಗರ್ಭಿಣಿ ಎಂಬ ವಿಷಯವನ್ನು ದಿಲೀಪ್ ಸ್ನೇಹಿತರು ಮತ್ತು ಕುಟುಂಬದವರು ಸ್ಪಷ್ಟಪಡಿಸಿದ್ದಾಗಿ ಮಲಯಾಳಂನ ಖ್ಯಾತ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

2016ರ ನವೆಂಬರ್‍ನಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಇನ್ನು, ದಿಲೀಪ್ ಈ ಹಿಂದೆ ನಟಿ ಮಂಜು ವಾರಿಯರ್ ಅವರನ್ನು ಮದುವೆಯಾಗಿದ್ದು ವಿಚ್ಛೇದನ ಕೂಡಾ ಪಡೆದಿದ್ದರು. ಇವರಿಗೆ ಒಬ್ಬಳು ಮಗಳೂ ಇದ್ದಾಳೆ. ಕಾವ್ಯಾ ಮಾಧವನ್‍ಗೂ ಇದು ಎರಡನೇ ಮದುವೆ. ಇವರು ತನ್ನ ಮೊದಲ ಪತಿ ನಿಶಾಲ್ ಚಂದ್ರ ಅವರಿಂದ 2011ರಲ್ಲಿ ವಿಚ್ಚೇದನ ಪಡೆದಿದ್ದರು.

ನಟಿಯ ಕಿಡ್ನಾಪ್ ಕೇಸ್‍ನಲ್ಲಿ ಸಿಲುಕಿರುವ ದಿಲೀಪ್ ಕೆಲ ತಿಂಗಳ ಜೈಲುವಾಸದ ಬಳಿಕ ಮನೆಗೆ ಮರಳಿದ್ದಾರೆ. ಈ ಕಷ್ಟದ ನಡುವೆಯೂ ಈಗ ಮನೆಯಲ್ಲಿ ಖುಷಿ ಮನೆ ಮಾಡಿದೆ. ಹೀಗಾಗಿ, ಇವೆರೆಲ್ಲಾ ಹೊಸ ಅತಿಥಿಯ ಸ್ವಾಗತಕ್ಕೆ ಕಾಯುತ್ತಿದ್ದಾರೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!