Monday , September 24 2018
ಕೇಳ್ರಪ್ಪೋ ಕೇಳಿ
Home / Film News / `ಸಲ್ಮಾನ್ ಖಾನ್‍ಗೆ ಮಗಳು ಹುಟ್ಟಲಿ, ಆ ಮಗಳನ್ನು ಶಾರೂಖ್ ಮಗನಿಗೆ ಮದುವೆ ಮಾಡಲಿ…!’

`ಸಲ್ಮಾನ್ ಖಾನ್‍ಗೆ ಮಗಳು ಹುಟ್ಟಲಿ, ಆ ಮಗಳನ್ನು ಶಾರೂಖ್ ಮಗನಿಗೆ ಮದುವೆ ಮಾಡಲಿ…!’

ಮುಂಬೈ : ಬಾಲಿವುಡ್ ನಟಿ ರಾಣಿ ಮುಖರ್ಜಿ ಹೊಸ ಆಸೆ ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ಬಾಲಿವುಡ್ ನಟ ಸಲ್ಮಾನ್ ಖಾನ್‍ಗೆ ಹೆಣ್ಣು ಮಗಳು ಹುಟ್ಟಲಿ, ಆ ಮಗಳನ್ನು ಶಾರೂಖ್ ಖಾನ್ ಪುತ್ರ ಅಬ್ರಾಂಗೆ ಮದುವೆ ಮಾಡಿ ಕೊಡಲಿ. ಆಗ ಇಬ್ಬರು ನಟರು ಸಂಬಂಧಿಕರಾಗುತ್ತಾರೆ…’ ಸಲ್ಮಾನ್ ಖಾನ್ ನಿರೂಪಣೆಗೆ ದಸ್ ಖಾ ದಮ್‍ನಲ್ಲಿ ಪಾಲ್ಗೊಂಡ ರಾಣಿ ಇಂತಹ ಬಯಕೆಯನ್ನು ಸಲ್ಮಾನ್ ಮತ್ತು ಶಾರೂಖ್ ಮುಂದಿಟ್ಟಿದ್ದಾರೆ. ರಾಣಿಯ ಈ ಮಾತು ಕೇಳಿ ಇಡೀ ಸೆಟ್ ನಗೆಗಡಲಲಿ ತೇಲಿದೆ…


ಸಲ್ಮಾನ್, ಶಾರೂಖ್ ಮತ್ತು ರಾಣಿ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಕುಚ್‍ಕುಚ್ ಹೋತಾ ಹೇ, ಹರ್ ದಿಲ್ ಜೋ ಪ್ಯಾರ್ ಕರೇಗಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಈ ಮೂವರು ಒಳ್ಳೆಯ ಸ್ನೇಹಿತರೂ ಹೌದು. ಹೀಗಾಗಿ, ದಸ್ ಖಾ ದಮ್ ಸೆಟ್‍ನಲ್ಲಿ ಇವರು ಬಂದಾಗ ಎಲ್ಲರೂ ಸಖತ್ ಖುಷಿ ಪಟ್ಟಿದ್ದರು. ಇದೀಗ ರಾಣಿ ಮಾತಿನ ಈ ವೀಡಿಯೋ ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ.

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!