Wednesday , March 20 2019
ಕೇಳ್ರಪ್ಪೋ ಕೇಳಿ
Home / Sudina Special / ಭಾರತದಿಂದ ಕಳ್ಳತನವಾಗಿದ್ದ ಎರಡು ಅಪೂರ್ವ ಶಿಲ್ಪಗಳನ್ನು ಮರಳಿಸಿದ ಅಮೇರಿಕಾ…

ಭಾರತದಿಂದ ಕಳ್ಳತನವಾಗಿದ್ದ ಎರಡು ಅಪೂರ್ವ ಶಿಲ್ಪಗಳನ್ನು ಮರಳಿಸಿದ ಅಮೇರಿಕಾ…

ನ್ಯೂಯಾರ್ಕ್ : ಭಾರತದಿಂದ ಕಳ್ಳತನವಾಗಿ ಅಮೇರಿಕಾದ ಎರಡು ಪ್ರತ್ಯೇಕ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿದ್ದ ಎರಡು ಅಪೂರ್ವ ಶಿಲ್ಪಗಳನ್ನು ಅಮೇರಿಕಾ ಮರಳಿಸಿದೆ. ಈ ಎರಡೂ ಶಿಲ್ಪಗಳ ಬೆಲೆ ಕೋಟ್ಯಂತರ ರೂಪಾಯಿ ದಾಟುತ್ತದೆ.

ಚೋಳರ ಕಾಲದ ಶಿವನ ‘ಲಿಂಗೋದ್ಭವ ಮೂರ್ತಿ’ ಮತ್ತು ಮಂಜುಶ್ರೀ ಎಂಬ ಎರಡು ಶಿಲ್ಪ ಸದ್ಯ ಭಾರತಕ್ಕೆ ಮರಳಿವೆ. 12ನೇ ಶತಮಾನಕ್ಕೆ ಸೇರಿದ್ದ ಲಿಂಗೋದ್ಭವ ಮೂರ್ತಿಯನ್ನು ತಮಿಳುನಾಡಿನಿಂದ ಕೊಂಡೊಯ್ಯಲಾಗಿತ್ತು. ಇದರ ಹೀಗಿನ ಮೂಲ್ಯ ಸುಮಾರು 1,61,86,005.00 ರೂಪಾಯಿ. ಇದನ್ನು ಅಲ್ಬಾಮಾದ ಬರ್ಮಿಂಗ್ ಹ್ಯಾಮ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.
ಇನ್ನೊಂದು ಬೌದ್ಧಧರ್ಮ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ನಿರ್ಮಾಣವಾಗಿದ್ದ ಅಪೂರ್ವ ಮಂಜುಶ್ರೀ ಎಂಬ ಮೂರ್ತಿ. ಇದು 12ನೇ ಶತಮಾನಕ್ಕೂ ಹಿಂದಿನ ಶಿಲ್ಪ. ಇದು ಬಿಹಾರದ ಬುದ್ಧಗಯಾದ ದೇಗುಲದಿಂದ 1980ರ ಸುಮಾರಿಗೆ ಕಳ್ಳತನವಾಗಿತ್ತು. ಸದ್ಯದ ಈ ಶಿಲ್ಪದ ಅಂದಾಜು ಮೌಲ್ಯ 1,97,97,662.50 ರೂಪಾಯಿ. ಉತ್ತರ ಕ್ಯಾಲಿಪೋರ್ನಿಯಾದ ಚಾಪೆಲ್​ಹಿಲ್​ನಲ್ಲಿರುವ ಉತ್ತರ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯದ ಅಕ್ಲೆಂಡ್ ಆರ್ಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.


ಈ ಎರಡೂ ಶಿಲ್ಪಗಳಿಗೆ ಸಂಬಂಧಿಸಿದವರು ಸೂಕ್ತ ಸಾಕ್ಷಿ ಮತ್ತು ದಾಖಲೆಗಳನ್ನು ನೀಡಿದ ಬಳಿಕ ಇವೆರಡನ್ನೂ ಅಮೇರಿಕಾ ಈಗ ವಾಪಸ್ ಭಾರತಕ್ಕೆ ಮರಳಿಸಿದೆ. ನ್ಯೂಯಾರ್ಕ್​ನಲ್ಲಿರುವ ಭಾರತ ದೂಸವಾಸ ಕಚೇರಿಗೆ ಈ ಶಿಲ್ಪಗಳನ್ನು ಮರಳಿಸಲಾಗಿದ್ದು, ಅಮೇರಿಕಾದಲ್ಲಿರುವ ಭಾರತೀಯ ರಾಯಭಾರಿ ಸಂದೀಪ್ ಚಕ್ರವರ್ತಿ ಇವುಗಳನ್ನು ಪಡೆದುಕೊಂಡಿದ್ದಾರೆ. ಜೊತೆಗೆ, ಇವೆಲ್ಲವನ್ನು ಮತ್ತೆ ಭಾರತಕ್ಕೆ ಮರಳಿಸಲು ನೆರವಾದ ಅಮೇರಿಕಾದ ಅಧಿಕಾರಿಗಳ ಕಾರ್ಯವನ್ನೂ ಇವರು ಶ್ಲಾಘಿಸಿದ್ದಾರೆ.

About sudina

Check Also

ಅಬುದಾಭಿಯಲ್ಲಿ ನಿರ್ಮಾಣವಾಗುತ್ತಿದೆ ಬೃಹತ್ ಹಿಂದೂ ದೇವಾಲಯ

ರಾಹುಲ್ ರೋಷನ್ ಸಿಕ್ವೇರಾ, ಗಲ್ಫ್ ಬ್ಯುರೋ ಅಬುದಾಭಿ : ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಬೃಹತ್ ಹಿಂದೂ ದೇವಾಲಯದ ನಿರ್ಮಾಣದ ಸಿದ್ಧತೆ …

Leave a Reply

Your email address will not be published. Required fields are marked *

error: Content is protected !!