Tuesday , April 23 2019
ಕೇಳ್ರಪ್ಪೋ ಕೇಳಿ
Home / Film News / ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ ಸೇರಿದಂತೆ ಮಹಿಳಾ ಸಾಧಕಿಯರು ಇದ್ದ ಈ ಸಮಾರಂಭದಲ್ಲಿ ಮಹಿಳಾ ಶಕ್ತಿಯನ್ನು ಕಂಡು ಐಶ್ವರ್ಯ ಹೃದಯ ತುಂಬಿ ಬಂದಿತ್ತು. ಈ ವೇಳೆ, ರಾಷ್ಟ್ರಗೀತೆ ಹಾಡುವ ವೇಳೆ ಖುಷಿಯಿಂದ ಕಣ್ಣು ತುಂಬಿದರೂ ರಾಷ್ಟ್ರಗೀತೆ ಮುಗಿಯೋ ತನಕ ಆನಂದಭಾಷ್ಪವನ್ನು ತಡೆದಿದ್ದರು. ಆದರೆ, ಜಾಸ್ತಿ ಹೊತ್ತು ಐಶ್ವರ್ಯಗೆ ತಮ್ಮ ಕಣ್ಣೀರನ್ನು ತಡೆಯಲು ಸಾಧ್ಯವೇ ಆಗಲಿಲ್ಲ. ರಾಷ್ಟ್ರಗೀತೆ ಮುಗಿದ ತಕ್ಷಣ ತಮ್ಮ ಕಣ್ಣೀರನ್ನು ಒರಸಿಕೊಂಡ ಐಶ್ವರ್ಯ ಜನರತ್ತ ಕೈಬಿಸಿ ಖುಷಿ ವ್ಯಕ್ತಪಡಿಸಿದರು. ಸದ್ಯ ಈ ವೀಡಿಯೋ ಇಂಟರ್‍ನೆಟ್‍ನಲ್ಲಿ ಹರಿದಾಡುತ್ತಿದೆ. ಇದಾದ ಬಳಿಕ ಮಾತನಾಡಿದ ಐಶ್ವರ್ಯ ದೇಶದಲ್ಲಿ ಮಹಿಳೆಯರ ಶಕ್ತಿಯ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.

About sudina

Check Also

ಬಾಂಬ್ ಬ್ಲಾಸ್ಟ್ ಆದ ಹೊಟೇಲ್‍ನಲ್ಲೇ ಇದ್ದರು ಈ ಖ್ಯಾತ ನಟಿ…!

ಕೊಲೊಂಬೋ : ಶ್ರೀಲಂಕಾದಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ… ಮೂರು ಪವಿತ್ರ ಚರ್ಚ್‍ಗಳು ಹಾಗೂ ಮೂರು ಫೈವ್ ಸ್ಟಾರ್ ಹೊಟೇಲ್‍ನಲ್ಲಿ …

Leave a Reply

Your email address will not be published. Required fields are marked *

error: Content is protected !!