Tuesday , April 23 2019
ಕೇಳ್ರಪ್ಪೋ ಕೇಳಿ
Home / News NOW / ಬಂಟ್ವಾಳ : ಸುದ್ದಿ ರೌಂಡ್ ಅಪ್ ; ಸೆಪ್ಟೆಂಬರ್ 7

ಬಂಟ್ವಾಳ : ಸುದ್ದಿ ರೌಂಡ್ ಅಪ್ ; ಸೆಪ್ಟೆಂಬರ್ 7

ಕ್ಷೀರ ಸಾಗರ ಉದ್ಘಾಟನೆ : ಹೈನುಗಾರಿಕೆ ಜೀವನದ ಒಂದು ಭಾಗವಾಗಿ ಬೆಳೆಯಬೇಕು. ಅದಕ್ಕೆ ಪೂರಕವಾದ ವಾತಾವರಣವನ್ನು ಒಕ್ಕೂಟದ ಮೂಲಕ ಮಾಡಬೇಕಾಗಿದೆ ಎಂದು ಸಂಸದ ನಳಿನ್ ಕುಮಾರ್ ಹೇಳಿದರು. ವಗ್ಗ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ವಿಸ್ತೃತ ಕಟ್ಟಡ `ಕ್ಷೀರ ಸಾಗರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಶಾಸಕ ರಾಜೇಶ್ ನಾಯಕ್, ರಾಜ್ಯದಲ್ಲಿ ಅತ್ಯುತ್ತಮ ಲಾಭದಾಯಕ ಒಕ್ಕೂಟವಾಗಿ ನಮ್ಮ ಜಿಲ್ಲೆಯ ಒಕ್ಕೂಟ ಬೆಳೆದಿರುವುದು ಶ್ಲಾಘನೀಯ ಎಂದರು. ನೂತನ ವಿಸ್ತೃತ ಕಟ್ಟಡ ‘ಕ್ಷೀರ ಸಾಗರ’ ದ ಉದ್ಘಾಟನೆಯನ್ನು ಹಾಲು ಉತ್ಪಾದಕದ ಸಂಘದ ಜಿಲ್ಲಾದ್ಯಕ್ಷ ರವಿರಾಜ ಹೆಗ್ಡೆ ಕೊಡವೂರು ನೆರವೇರಿಸಿದರು. ಇನ್ನುಮ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಬಿ.ರಮಾನಾಥ ರೈ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕರುಗಳಾದ ಡಾ. ಕೆ. ಎಂ. ಕೃಷ್ಣ ಭಟ್, ಕೆ.ಪಿ.ಸುಚರಿತ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ.ಸತ್ಯನಾರಾಯಣ, ಜಿಲ್ಲಾ ವ್ಯವಸ್ಥಾಪಕ ಡಾ. ನಿತ್ಯಾನಂದ ಭಕ್ತ, ಕಾರಿಂಜೇಶ್ವರ ದೇವಸ್ಥಾನ ಸಮಿತಿಯ ಅದ್ಯಕ್ಷ ಜಿನರಾಜ ಆರಿಗ, ಜಿ.ಪಂ.ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ರವೀಂದ್ರ ಕಂಬಳಿ, ಸ್ಥಾಯಿಸಮಿತಿ ಅದ್ಯಕ್ಷೆ ಧನಲಕ್ಮೀ ಸಿ ಬಂಗೇರ, ಜಿಲ್ಲಾ ಒಕ್ಕೂಟದ ಉಪವ್ಯವಸ್ಥಾಪಕ ಟಿ.ವಿ.ಶ್ರೀನಿವಾಸ, ಡಾ. ಮಧುಸೂದನ್ ಕಾಮತ್, ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಜೆಫ್ರಿ ರೋಡ್ರಿಗಸ್, ವಗ್ಗ ಒಕ್ಕೂಟದ ಮುಖ್ಯಕಾರ್ಯನಿರ್ವಣಾಧಿಕಾರಿ ಇಸಾಕ್ ಡಿ.ಸೋಜ ಮತ್ತಿತರರು ಉಪಸ್ಥಿತರಿದ್ದರು. ಕಾವಳಪಡೂರು ಗ್ರಾ.ಪಂ.ಅದ್ಯಕ್ಷ ಪ್ರಮೋದ್ ಕುಮಾರ್ ರೈ ಸ್ವಾಗತಿಸಿ, ಸಂಘದ ಸದಸ್ಯ ವಿನ್ಸೆಂಟ್ ಬೆನ್ನಿಸ್ ವಂದಿಸಿದರು. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಗದೀಶ್ ನಿರೂಪಿಸಿದರು.  ಸಾಮೂಹಿಕ ಕುಂಕುಮಾರ್ಚನೆ : ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘ ಬಿಸಿರೋಡು ಇದರ ವತಿಯಿಂದ ಬಿಸಿರೋಡಿನ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಮಹಿಳೆಯರಿಗಾಗಿ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು. ಸುಮಂಗಲಿಯರಿಗೆ ಸಕಲ ಇಷ್ಟಾರ್ಥ ಈಡೇರಿಸುವ ಹಾಗೂ ಅವಿವಾಹಿತರಿಗೆ ಕ್ಷಿಪ್ರ ಕಂಕಣಭಾಗ್ಯ ಒಲಿಯುವ ದೃಷ್ಟಿಯಿಂದ ಈ ಪೂಜೆಯನ್ನು ನಡೆಸಲಾಗುತ್ತದೆ ಎಂದು ಸಮಿತಿಯ ಅದ್ಯಕ್ಷೆ ಯಶೋದಾ ತಿಳಿಸಿದ್ದಾರೆ.

ವರದಿ : ಯಾದವ್, ಬಿ.ಸಿ.ರೋಡ್

About sudina

Check Also

ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್…!

ಬೆಂಗಳೂರು : ಧೂಮಪಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಬಂದಿದೆ. ಇನ್ನು ಮುಂದೆ ಬಾರ್, ಪಬ್, ರೆಸ್ಟೋರೆಂಟ್‍ಗಳಲ್ಲಿ ಸಹ ಇನ್ನು ಮುಂದೆ …

Leave a Reply

Your email address will not be published. Required fields are marked *

error: Content is protected !!