Saturday , February 16 2019
ಕೇಳ್ರಪ್ಪೋ ಕೇಳಿ
Home / Film News / ಪ್ರಿಯಾಂಕಾ ವಿರುದ್ಧ ಮತ್ತೊಮ್ಮೆ ಬೇಸರ ಹೊರ ಹಾಕಿದ ಸಲ್ಲೂ…

ಪ್ರಿಯಾಂಕಾ ವಿರುದ್ಧ ಮತ್ತೊಮ್ಮೆ ಬೇಸರ ಹೊರ ಹಾಕಿದ ಸಲ್ಲೂ…

ಮುಂಬೈ : ಸಲ್ಮಾನ್ ಖಾನ್ ಈಗ ತಮ್ಮ ಭಾರತ್ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದಾರೆ. ಇನ್ನು ನಟಿ ಪ್ರಿಯಾಂಕಾ ಈ ಪ್ರಾಜೆಕ್ಟ್‍ನಿಂದ ಹೊರ ಹೋದ ಬಳಿಕ ಕತ್ರಿನಾ ಈ ಟೀಮ್ ಸೇರಿದ್ದು, ಶೂಟಿಂಗ್ ಕೂಡಾ ಭರದಿಂದ ಸಾಗುತ್ತಿದೆ. ಈ ನಡುವೆ, ಸಲ್ಮಾನ್ ಖಾನ್ ಪ್ರಿಯಾಂಕಾ ಬಗೆಗೆ ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಕೊಟ್ಟಿದ್ದಾರೆ.

ತಂಗಿ ಅರ್ಪಿತಾಗೆ ಕಾಲ್ ಮಾಡಿದ್ದ ಪ್ರಿಯಾಂಕಾ! : ಸಲ್ಮಾನ್ ಖಾನ್ ಜೊತೆಗೆ ಅಭಿನಯಿಸಬೇಕೆಂಬುದು ಪ್ರಿಯಾಂಕಾರ ಬಹುದೊಡ್ಡ ಆಸೆ ಆಗಿತ್ತು. ಹೀಗಾಗಿ, ಇವರು ಸಲ್ಲೂ ತಂಗಿ ಅರ್ಪಿತಾಗೆ ಹಲವು ಸಲ ಫೋನ್ ಕರೆ ಮಾಡಿದ್ದರಂತೆ. ಅದೂ ಅಲ್ಲದೆ, ಚಿತ್ರದ ನಿರ್ದೇಶಕ ಅಬ್ಬಾಸ್ ಜಫರ್‍ಗೂ ಕರೆ ಮಾಡಿ ಈ ಪ್ರಾಜೆಕ್ಟ್‍ನಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರಂತೆ.

ಕತ್ರಿನಾ ಮೊದಲ ಆಯ್ಕೆ : ಅಸಲಿಗೆ ಭಾರತ್ ಚಿತ್ರದ ನಾಯಕಿಯಾಗಿ ಮೊದಲು ಆಯ್ಕೆಯಾಗಿದ್ದವರೇ ಕತ್ರಿನಾ ಕೈಫ್. ಆದರೆ, ಪ್ರಿಯಾಂಕಾ ಅರ್ಪಿತಾ ಖಾನ್, ಚಿತ್ರದ ಡೈರೆಕ್ಟರ್‍ಗೆ ಕರೆ ಮಾಡಿದ್ದರಿಂದ ಪ್ರಿಯಾಂಕಾಗೆ ಈ ಛಾನ್ಸ್ ಸಿಕ್ಕಿತ್ತು. ಆದರೆ, ಹಾಲಿವುಡ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿ ಪ್ರಿಯಾಂಕಾ ಈ ಪ್ರಾಜೆಕ್ಟ್‍ನಿಂದ ಹೊರ ನಡೆದಿದ್ದರು. ಶೂಟಿಂಗ್‍ಗೆ ಇನ್ನೇನು 5 ದಿನ ಬಾಕಿ ಇರುವಾಗ ಪ್ರಿಯಾಂಕಾ ಈ ಚಿತ್ರದಿಂದ ಹೊರಹೋಗಿದ್ದರು. ಹೀಗಾಗಿ, ಚಿತ್ರ ತಂಡ ಪ್ರಿಯಾಂಕಾ ಸ್ಥಾನಕ್ಕೆ ಕತ್ರಿನಾ ಕೈಫ್‍ರನ್ನು ಕರೆತಂದಿತ್ತು.

ಇನ್ನು, ಶೂಟಿಂಗ್‍ಗೆ ಐದು ದಿನ ಮುಂಚಿತವಾಗಿಯೇ ತಾನು ಈ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಪ್ರಿಯಾಂಕಾ ಹೇಳಿದ್ದು ಒಳ್ಳೆಯದಾಯ್ತು ಎಂದೂ ಸಲ್ಮಾನ್ ತಮ್ಮದೇ ದಾಟಿಯಲ್ಲಿ ಸೂಚ್ಯವಾಗಿ ಕುಟುಕಿದ್ದಾರೆ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸಲ್ಮಾನ್ ಈ ಬಗೆಗೆ ಮಾತನಾಡಿದ್ದಾರೆ. ಅಲ್ಲದೆ, ಪ್ರಿಯಾಂಕಾಗೂ ಶುಭಹಾರೈಸಿದ್ದಾರೆ.

About sudina

Check Also

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ವಿಧಿವಶರಾಗಿದ್ದಾರೆ. ಅಂಕಲ್ ಲೋಕನಾಥ್ ಎಂದೇ ಖ್ಯಾತರಾಗಿದ್ದ ಲೋಕನಾಥ್ ವಯೋಸಹಜ ಅನಾರೋಗ್ಯದಿಂದ …

Leave a Reply

Your email address will not be published. Required fields are marked *

error: Content is protected !!