Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಕಷ್ಟ ಕಾಲದಲ್ಲಿ ಗೆಳತಿ ಸೋನಾಲಿ ಜೊತೆಗಿರುವ ಸುಸೈನೆ…

ಕಷ್ಟ ಕಾಲದಲ್ಲಿ ಗೆಳತಿ ಸೋನಾಲಿ ಜೊತೆಗಿರುವ ಸುಸೈನೆ…

ಮುಂಬೈ : ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಈಗ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ನ್ಯೂಯಾರ್ಕ್‍ನಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇವರು ಚಿಕಿತ್ಸೆ ಪಡೆಯುತ್ತಿರುವ ದಿನಗಳಿಂದ ಇಬ್ಬರು ಗೆಳೆತಿಯರು ಇವರೊಂದಿಗೇ ಕಾಲ ಕಳೆದು ಧೈರ್ಯ ತುಂಬುತ್ತಿದ್ದಾರೆ. ಅದರಲ್ಲಿ ಒಬ್ಬರು ಸುಸೈನೆ. ಇನ್ನೊಬ್ಬರು ಗಾಯತ್ರಿ. ಕಷ್ಟ ಕಾಲದಲ್ಲಿ ಗೆಳತಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿರುವ ಈ ಇಬ್ಬರು ಸದಾ ಕಾಲ ಸೋನಾಲಿ ಅವರೊಂದಿಗೆಯೇ ಕಳೆಯುತ್ತಿದ್ದಾರೆ. ಈ ಒಡನಾಟದ ಫೋಟೋವನ್ನು ಸುಸೈನೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ.


ಫ್ರೆಂಡ್‍ಶಿಪ್ ಡೇ ದಿನ ಈ ಇಬ್ಬರು ಸೋನಾಲಿ ಅವರನ್ನು ಭೇಟಿಯಾಗಿದ್ದರು. ಇದಾದ ಬಳಿಕವೂ ಹಲವು ಸಲ ಇವರಿಬ್ಬರು ಸೋನಾಲಿ ಅವರೊಂದಿಗೇ ಇದ್ದರು. ಒಂದು ಕಡೆ ಕ್ಯಾನ್ಸರ್ ಅನ್ನು ಧೈರ್ಯದಿಂದ ಎದುರಿಸುತ್ತಿರುವ ಸೋನಾಲಿ ಮತ್ತೊಂದು ಕಡೆ ಗೆಳತಿಗೆ ಧೈರ್ಯ ತುಂಬಿ ಅವರನ್ನು ಖುಷಿಯಾಗಿ ಇಡಲು ಯತ್ನಿಸುತ್ತಿರುವ ಈ ಇಬ್ಬರು ಗೆಳತಿಯರು… ಒಂಥರಾ ಹೃದಯಸ್ಪರ್ಶಿ ಸನ್ನಿವೇಶ ಇದು…

About sudina

Check Also

ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಐಶ್ವರ್ಯ : ಯಾಕೆ ಗೊತ್ತಾ…? : ಇಲ್ಲಿದೆ ವೀಡಿಯೋ..

ಮುಂಬೈ : ಬಾಲಿವುಡ್ ನಟಿ ಐಶ್ವರ್ಯ ಬಚ್ಚನ್ ಮುಂಬೈಯಲ್ಲಿ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಗೀತೆ ಹಾಡುವಾಗ ಭಾವುಕರಾಗಿದ್ದಾರೆ. ಶಬಾನಾ ಅಜ್ಮಿ, ಜೂಹಿ ಚಾವ್ಲಾ …

Leave a Reply

Your email address will not be published. Required fields are marked *

error: Content is protected !!