Monday , September 24 2018
ಕೇಳ್ರಪ್ಪೋ ಕೇಳಿ
Home / Film News / ಗಣಪತಿಗೆ ಉಲ್ಟಾ ಆರತಿ…! : ಟ್ರೋಲ್‍ಗೆ ಗುರಿಯಾದ ಕತ್ರಿನಾ ಕೈಫ್…

ಗಣಪತಿಗೆ ಉಲ್ಟಾ ಆರತಿ…! : ಟ್ರೋಲ್‍ಗೆ ಗುರಿಯಾದ ಕತ್ರಿನಾ ಕೈಫ್…

ಮುಂಬೈ : ಗಣೇಶ ಚತುರ್ಥಿ ಸಂಭ್ರಮ ಎಲ್ಲೆಲ್ಲೂ ಮೇರೆ ಮೀರಿದೆ. ಬಾಲಿವುಡ್‍ನ ಹಲವು ಕಲಾವಿದರು ತಮ್ಮ ಮನೆಯಲ್ಲೇ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ಅದರಲ್ಲೂ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯಲ್ಲಿ ಪ್ರತಿವರ್ಷ ಗಣೇಶ ಚತುರ್ಥಿ ಅದ್ಧೂರಿಯಾಗಿಯೇ ನಡೆಯುತ್ತದೆ. ಬಹುತೇಕ ಸ್ಟಾರ್‍ಗಳು ಅಂದು ಸಲ್ಲೂ ಮನೆಗೆ ಬಂದು ಗಣೇಶನ ಪೂಜೆ ಮಾಡುತ್ತಾರೆ. ಈ ಬಾರಿಯ ಹಲವು ಜನ ಸ್ಟಾರ್‍ಗಳು ಸಲ್ಲೂ ಮನೆಯಲ್ಲಿ ವಿಘ್ನೇಶನಿಗೆ ನಮಿಸಿದ್ದಾರೆ. ಆದರೆ, ಹೀಗೆ ಬಂದು ಗಣೇಶನಿಗೆ ಆರತಿ ಬೆಳಗಿದ ಕತ್ರಿನಾ ಈಗ ಟ್ರೋಲ್‍ಗೆ ಗುರಿಯಾಗಿದ್ದಾರೆ.


ಅಪ್ರದಕ್ಷಿಣೆ ಅಂದರೆ ಉಲ್ಟಾ ಆರತಿ ಬೆಳಗುವ ಮೂಲಕ ಕತ್ರಿನಾ ಈಗ ನೆಟ್ಟಿಗರ ಆಕ್ರೋಶ ಮತ್ತು ವ್ಯಂಗ್ಯಕ್ಕೆ ತುತ್ತಾಗಿದ್ದಾರೆ. ಈ ವೀಡಿಯೋ ಕೂಡಾ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

About sudina

Check Also

ಕಷ್ಟ ಕಾಲದಲ್ಲಿ ಗೆಳತಿ ಸೋನಾಲಿ ಜೊತೆಗಿರುವ ಸುಸೈನೆ…

ಮುಂಬೈ : ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಈಗ ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ನ್ಯೂಯಾರ್ಕ್‍ನಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇವರು …

Leave a Reply

Your email address will not be published. Required fields are marked *

error: Content is protected !!