Wednesday , December 12 2018
ಕೇಳ್ರಪ್ಪೋ ಕೇಳಿ
Home / News NOW / ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಮಾಜಿ ಪ್ರೇಯಸಿ ಮೇಲೆ ಸೇಡು : ವೈದ್ಯೆ ಜೊತೆಗಿನ `ಸರಸ’ದ ಫೋಟೋ ಇಂಟರ್‍ನೆಟ್ ನಲ್ಲಿ ಹರಿಬಿಟ್ಟ ಲವರ್…!

ಬೆಂಗಳೂರು : ತನ್ನ ವಿರುದ್ಧ ದೂರು ಕೊಟ್ಟರು ಎಂಬ ಕಾರಣಕ್ಕೆ ಮಾಜಿ ಪ್ರಿಯಕರನೊಬ್ಬ ವೈದ್ಯೆಯೊಂದಿಗಿನ ತನ್ನ ಸರಸದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಚೆನ್ನೈ ಮೂಲದ ಈ ವೈದ್ಯೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಇವರೊಬ್ಬರ ಯುವಕನನ್ನು ಪ್ರೀತಿಸುತ್ತಿದ್ದರು. ಆದರೆ, ಬಳಿಕ ಈ ಜೋಡಿ ದೂರವಾಗಿತ್ತು. ಈ ವೇಳೆ, ಈ ಯುವಕ ತನ್ನ ಪ್ಯಾನ್ ಕಾರ್ಡ್, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹಾಗೂ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದು ಮರಳಿಸಿಲ್ಲ ಎಂದು ವೈದ್ಯೆ ಮಹಿಳಾ ಸಹಾಯವಾಣಿಗೆ ದೂರು ನೀಡಿದ್ದರು. ಈ ಸೇಡಿನಲ್ಲಿ ಆತ ಪ್ರೇಮಿಸುತ್ತಿದ್ದ ವೇಳೆ ತೆಗೆದಿದ್ದ ಕೆಲ ಸರಸದ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ ಎಂದು ದೂರಲಾಗಿದೆ.

ಈತ ಕೂಡಾ ತಮಿಳುನಾಡಿನವರೇ ಆಗಿದ್ದು, ಇಬ್ಬರು ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರಂತೆ. ಬೆಂಗಳೂರಿಗೆ ಬಂದ ಬಳಿಕವೂ ಇವರ ಪ್ರೀತಿ ಮುಂದುವರಿದಿತ್ತು. ಈ ಅವಧಿಯಲ್ಲಿ ಯುವಕ ಆಪ್ತ ಕ್ಷಣಗಳನ್ನು ಸೆರೆ ಹಿಡಿದಿದ್ದ. ಇನ್ನು, ತಾನು ಕೊಟ್ಟ ಅಮೂಲ್ಯ ವಸ್ತುಗಳನ್ನು ವೈದ್ಯ ಮರಳಿ ಕೇಳುವುದಕ್ಕೆ ಶುರು ಮಾಡಿದ ಬಳಿಕ ಇವರಿಂದ ದೂರ ಇರುವುದಕ್ಕೆ ಯತ್ನ ಮಾಡುತ್ತಿದ್ದ. ಹೀಗಾಗಿ, ನೊಂದ ವೈದ್ಯೆ ಸಹಾಯವಾಣಿಗೆ ದೂರು ಕೊಟ್ಟಿದ್ದರು. ಈ ಬಳಿಕ ಈತನಿಗೆ ನೊಟೀಸ್ ನೀಡಲಾಗಿತ್ತು. ಆಗ ವಕೀಲರೊಂದಿಗೆ ಬಂದಿದ್ದ ಯುವಕ ಚಿನ್ನಾಭರಣ ಸೇರಿದಂತೆ 2 ಲಕ್ಷ ರೂಪಾಯಿಯನ್ನು ಮರಳಿಸುವುದಾಗಿ ಒಪ್ಪಿಕೊಂಡಿದ್ದ. ಇದಕ್ಕೆ ಎರಡು ತಿಂಗಳ ಕಾಲಾವಕಾಶವನ್ನೂ ಕೇಳಿದ್ದ. ಹೀಗಾಗಿ, ವೈದ್ಯೆ ಕೊಂಚ ನೆಮ್ಮದಿ ಕಂಡಿದ್ದರು. ಆದರೆ, ಇದಾದ ಬಳಿಕ ಸ್ವಲ್ಪ ದಿನಗಳಲ್ಲೇ ಈತ ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವೈದ್ಯೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ರು ಆರೋಪಿಗಾಗಿ ಬಲೆ ಬೀಸಿದ್ದಾರೆ.

About sudina

Check Also

ಪತ್ನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಟೆಕ್ಕಿ 15 ವರ್ಷದ ಬಳಿಕ ಸೆರೆ…!

ಬೆಂಗಳೂರು : 2003ರಲ್ಲಿ ಗುಜರಾತ್‍ನಲ್ಲಿ ಪತ್ನಿಯನ್ನು ಕೊಂದು ಹೆಸರು ಬದಲಾಯಿಸಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿಯನ್ನು …

Leave a Reply

Your email address will not be published. Required fields are marked *

error: Content is protected !!